More

    ಬ್ಯಾಂಕ್‌ನ 4.3 ಕೋಟಿ ರೂ. ಗುಳುಂ ಮಾಡಿದ ಎಸ್‌ಬಿಐ ಮ್ಯಾನೇಜರ್‌: ಏಳು ವರ್ಷ ಶಿಕ್ಷೆ ವಿಧಿಸಿದ ಕೋರ್ಟ್‌

    ಹೈದರಾಬಾದ್: ಬ್ಯಾಂಕ್‌ನಲ್ಲಿ ಇದ್ದುಕೊಂಡೇ 4.3 ಕೋಟಿ ರೂಪಾಯಿ ವಂಚನೆ ಮಾಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮ್ಯಾನೇಜರ್‌ಗೆ ಕೋರ್ಟ್‌ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿದೆ.

    ಹೈದರಾಬಾದ್‍ನ ಸಿಬಿಐ ನ್ಯಾಯಾಲಯ ಪ್ರವೀಣ್ ಸಿಂಗ್‍ ಎಂಬಾತನಿಗೆ ಈ ಶಿಕ್ಷೆ ನೀಡಿದೆ. ಈತ ಮ್ಯಾನೇಜರ್‌ ಆಗಿದ್ದ ಸಮಯದಲ್ಲಿ ಕೆಲವೊಬ್ಬರ ಹೊರಗಿನವರ ಜತೆ ಸೇರಿ ಇಷ್ಟು ಹಣವನ್ನು ಈತ ಗುಳುಂ ಮಾಡಿದ್ದ. ಹಣವನ್ನು ಲಪಟಾಯಿಸಲು ಭಾರಿ ಸಂಚನ್ನು ರೂಪಿಸಿದ್ದ. ವಿಶೇಷ ಅವಧಿಯ ಠೇವಣಿ ರಶೀದಿಗಳನ್ನು ಅವಧಿಗಿಂತಲೂ ಮುಂಚಿತವಾಗಿ ರದ್ದು ಪಡಿಸುವ ಜತೆಗೆ, ನಕಲಿ ಹೆಸರಿನಲ್ಲಿ ಸ್ವಂತ ಖಾತೆಗಳನ್ನು ತೆರೆದಿದ್ದ. ಈ ಮೂಲಕ 4.3 ಕೋಟಿ ರೂಪಾಯಿಗಳನ್ನು ವಂಚಿಸಿದ್ದ.

    ಈ ವಿಷಯ 2010ರಲ್ಲಿ ಈ ಘಟನೆ ನಡೆದು, ಹುದ್ದೆಯಿಂದ ಈತನನ್ನು ವಜಾಗೊಳಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ 2011ರಲ್ಲಿ ಸಿಬಿಐ ಕೋರ್ಟ್‌ಗೆ ಚಾರ್ಜ್‌ಷೀಟ್‌ ಸಲ್ಲಿಸಿತ್ತು. ಇದೀಗ 10 ವರ್ಷಗಳ ಬಳಿಕ ಕೋರ್ಟ್‌ ತೀರ್ಪು ನೀಡಿದ್ದು, ಏಳು ವರ್ಷ ಶಿಕ್ಷೆ ಜತೆಗೆ ದಂಡ ವಿಧಿಸಿದೆ.

    ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?

    ಮೃತ ವಕೀಲನ ಶವ ಪಡೆಯಲು ಪತ್ನಿ, ಲವರ್‌ ಗುದ್ದಾಟ- ಸುಸ್ತಾಗಿ ಹೋದ ಗುಂಡ್ಲುಪೇಟೆ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts