More

    ಕೇಂದ್ರದಲ್ಲಿ ಬಿಜೆಪಿ ಬಂದರೆ ಮೂರೂವರೆ ಸಾವಿರ ಮಸೀದಿ ನೆಲಸಮ ಎಂದ ಸಂಸದ ಮೌಲಾನಾ

    ಗುವಾಹಟಿ: ಬಿಜೆಪಿ ಪುನಃ ಇನ್ನೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಊಹಿಸಿಕೊಂಡಿರುವ ಅಸ್ಸಾಂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್, ಒಂದು ವೇಳೆ ಈ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ದೇಶದ 3,500 ಮಸೀದಿಗಳನ್ನು ನೆಲಸಮವಾಗಲಿದೆ ಎಂದಿದ್ದಾರೆ.

    ಒಟ್ಟಾರೆಯಾಗಿ ಭಾರತದಲ್ಲಿರುವ 3,500 ಮಸೀದಿಗಳು ಬಿಜೆಪಿ ಪಟ್ಟಿಯಲ್ಲಿವೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿದರೆ ಅವುಗಳನ್ನು ನೆಲಸಮ ಮಾಡುವುದು ಖಚಿತ ಎಂದು ಹೇಳಿದ್ದಾರೆ.

    ತಮ್ಮ ಧುಬ್ರಿ ಕ್ಷೇತ್ರದ ಗೌರಿಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ತ್ರಿವಳಿ ತಲಾಖ್​ ಖುರಾನೇ ಒಪ್ಪಿದೆ. ಅದು ಖುರಾನ್​ ಅನ್ವಯವೇ ಇದೆ. ಆದ್ದರಿಂದ ತ್ರಿವಳಿ ತಲಾಖ್​ ನೀಡುವುದು ಕಾನೂನುಬಾಹಿರವಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದು ಮಾಡಿ ಅನ್ಯಾಯ ಮಾಡಿದೆ ಎಂದು ಘರ್ಜಿಸಿದರು.

    ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು ಬಿಜೆಪಿ ನೆಲಸಮ ಮಾಡುತ್ತಿದೆ. ಇದು ಸರಿಯಲ್ಲ ಎಂದು ಮೌಲಾನಾ ನುಡಿದರು.

    ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಬುರ್ಖಾ ಧರಿಸಲು ಸಾಧ್ಯವಾಗುವುದಿಲ್ಲ, ಗಡ್ಡ ಬಿಟ್ಟು, ಟೋಪಿ ಧರಿಸಿದವರು ತಮ್ಮ ಮನೆಗಳಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಮತ್ತು ನೀವೆಲ್ಲರೂ ಮಸೀದಿಗಳಲ್ಲಿ ಅಜಾನ್ ನೀಡಲು ಸಹ ಅವಕಾಶ ಇರುವುದಿಲ್ಲ’ ಎಂದು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್) ಮುಖ್ಯಸ್ಥ ಅಜ್ಮಲ್ ಹೇಳಿದರು.

    ಅಂಗಡಿಯಿಂದ ಬರಲು ತಡವಾದುದಕ್ಕೆ ಮಗನನ್ನು ಬೆಂಕಿಹಚ್ಚಿ ಕೊಂದ ಪಾಪಿ ತಂದೆ!

    ಆಂಧ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ ನಿಗೂಢ ರೋಗ: 29 ಮಂದಿ ಸ್ಥಿತಿ ಗಂಭೀರ

    ಬೈಡೆನ್​ ಗದ್ದುಗೆ ಏರುತ್ತಿದ್ದಂತೆಯೇ ಚಿಗುರಿದ ಚೀನಾ: 28 ಅಧಿಕಾರಿಗಳಿಗೆ ನಿರ್ಬಂಧ

    ಕೊಲೆ ಆರೋಪ ಹೊತ್ತ ಮಾಜಿ ಸಚಿವನಿಗೆ ಜೈಲೇ ಗತಿ- ಜಾಮೀನು ಅರ್ಜಿಯಾಯ್ತು ವಜಾ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts