More

    ಉಕ್ರೇನಿನ ಮೇಲೆ ರಷ್ಯಾ ದಾಳಿ ಒಪ್ಪಲಸಾಧ್ಯ; ಪಾಶ್ಚಾತ್ಯ ರಾಷ್ಟ್ರಗಳೂ ಅಮಾಯಕ ವೀಕ್ಷಕರಂತಿರುವುದೂ ಪ್ರಮಾದವೆಂದ ಸಿಂಗಾಪುರ ಸಚಿವ

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಸಿಂಗಾಪುರದ ಉನ್ನತ ಪದವಿ ಹೊಂದಿರುವ ಅಧಿಕಾರಿಯೊಬ್ಬರು, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವುದರ ಹಿಂದೆ ಎಂತಹದ್ದೇ ಕತೆಗಳಿದ್ದರೂ, ಈ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಹಾಗೆಂದು ಪಾಶ್ಚಾತ್ಯ ಶಕ್ತಿಗಳನ್ನು ಈ ವಿಚಾರದಲ್ಲಿ ಯಾವುದೇ ಆಸಕ್ತಿ ಇಲ್ಲದೆ, ಈ ವಿಚಾರ ಇಷ್ಟೊಂದು ದೊಡ್ಡದಾಗುವ ತನಕ ಸುಮ್ಮನೆ ನೋಡುತ್ತಿದ್ದರು ಎನ್ನಲೂ ಸಾಧ್ಯವಿಲ್ಲ ಎಂದಿದ್ದರು.

    ಉಕ್ರೇನಿನ ಮೇಲೆ ರಷ್ಯಾ ದಾಳಿ ಒಪ್ಪಲಸಾಧ್ಯ; ಪಾಶ್ಚಾತ್ಯ ರಾಷ್ಟ್ರಗಳೂ ಅಮಾಯಕ ವೀಕ್ಷಕರಂತಿರುವುದೂ ಪ್ರಮಾದವೆಂದ ಸಿಂಗಾಪುರ ಸಚಿವ

    ಸಿಂಗಾಪುರದ ಗೃಹ ಸಚಿವರು ಮತ್ತು ಕಾನೂನು ಸಚಿವರಾದ ಕೆ.ಷಣ್ಮುಗಂ ಅವರು ಆಗ್ನೇಯ ಏಷ್ಯಾದ ಮೇಲೆ ರಷ್ಯಾ ಉಕ್ರೇನ್ ಯುದ್ಧದ ಪರಿಣಾಮಗಳ ಕುರಿತು ಚರ್ಚಿಸುತ್ತ, ಈ ಯುದ್ಧದ ಕಾರಣಗಳು ಮುಖ್ಯ ಮಾಧ್ಯಮಗಳು ವರದಿ ಮಾಡಿದ್ದರಿಂದಲೂ ಹೆಚ್ಚು ಸಂಕೀರ್ಣವಾಗಿದ್ದವು ಎಂದಿದ್ದರು.

    ಅವರು ನೈಜ ವಿಚಾರಗಳು ಏನು ಎಂಬುದನ್ನು ತಿಳಿಯುವುದು ಮುಖ್ಯವೇ ಹೊರತು, ಈ ಸಂಕೀರ್ಣವಾದ ವಿಚಾರದಲ್ಲಿ ಅತಿರಂಜನೆ, ಅಭಿಪ್ರಾಯಗಳು ಹಾಗೂ ಪಕ್ಷಪಾತಿ ವಿಚಾರಗಳನ್ನು ನಂಬಬಾರದು ಎಂದಿದ್ದರು.

    ರಷ್ಯಾ 2015ರಲ್ಲಿ ಕ್ರಿಮಿಯಾ ಮೇಲೆ ಅತಿಕ್ರಮಣ ನಡೆಸಿದ ಸಂದರ್ಭದಲ್ಲಿ, ಷಣ್ಮುಗಂ ಅವರು 2011ರಿಂದ 2015ರ ತನಕ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ದಾಳಿ ನಡೆದಾಗ, ಪಾಶ್ಚಾತ್ಯ ಮಾಧ್ಯಮಗಳು ಮಾಸ್ಕೋ ಮತ್ತು ವ್ಲಾದಿಮಿರ್‌‌ ಪುಟಿನ್ ಅವರು ನೇರ ಹೊಣೆ ಎಂದು ದೂರಿದ್ದವು. ಈ ದೃಷ್ಟಿಕೋನದ ಪ್ರಕಾರ, ಪುಟಿನ್ ಅವರ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಪರಿಣಾಮವಾಗಿ ಸಾವಿರಾರು ಜನರು ಕಷ್ಟಪಡುವಂತಾಗಿತ್ತು.

    ಸಿಂಗಾಪುರದ ಐಎಸ್ಇಎಎಸ್-ಯೂಸೊಫ್ ಇಶಾಕ್ ಇನ್​​ಸ್ಟಿಟ್ಯೂಟ್​ ಯುದ್ಧದ ಕುರಿತಾಗಿ ಎರಡು ದಿನಗಳ ಕಾಲ ಆಯೋಜಿಸಿದ ಕಾರ್ಯಾಗಾರದಲ್ಲಿ, ಷಣ್ಮುಗಂ ಅವರು ಮಾತನಾಡಿದ್ದರು. ಮಾಧ್ಯಮಗಳು ವರದಿ ಮಾಡಿದ ವಿಚಾರಗಳಲ್ಲಿ ಒಂದಷ್ಟು ನೈಜ ಅಂಶಗಳಿದ್ದರೂ, ಅದು ಪರಿಸ್ಥಿತಿಯ ಸಂಪೂರ್ಣ ಅರಿವು ಮೂಡಿಸುತ್ತಿರಲಿಲ್ಲ ಎಂದಿದ್ದರು.

    ಈ ಎಲ್ಲ ವರದಿಗಳು ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ, ಅದರಲ್ಲಿ ಪಾಶ್ಚಾತ್ಯ ರಾಷ್ಟ್ರಗಳನ್ನು ಸುಲಭವಾಗಿ ಯಾವುದೇ ತಪ್ಪು ಮಾಡಿಲ್ಲ, ನಿರ್ದೋಷಿಗಳು ಎಂದು ಸಾರಿವೆ ಎಂದಿದ್ದರು. ಆದರೆ ಅದು ಎಂತಹ ಕಾರಣಗಳೇ ಆಗಿದ್ದರೂ, ರಷ್ಯಾ ಉಕ್ರೇನ್ ಮೇಲೆ ನಡೆಸಿದ ಅತಿಕ್ರಮಣ ಮತ್ತು ಪ್ರಸ್ತುತ ನಡೆಯುತ್ತಿರುವ ಯುದ್ಧವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದರು.

    ಇದನ್ನೂ ಓದಿ: ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು

    ಅವರು ಈ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾ, ಪಾಶ್ಚಾತ್ಯ ರಾಷ್ಟ್ರಗಳ “ಒಂದಿಂಚೂ ಅಲ್ಲ” ಎನ್ನುವ ನಿಲುವನ್ನು ಮುಂದಿಟ್ಟರು. 1990ರಲ್ಲಿ ಬರ್ಲಿನ್ ಗೋಡೆ ಬಿದ್ದಾಗ, ಮತ್ತು ಸೋವಿಯತ್ ಒಕ್ಕೂಟದ ಪತನವಾದಾಗ, ನ್ಯಾಟೋ ಪೂರ್ವದ ಕಡೆ ಒಂದಿಂಚೂ ವಿಸ್ತರಿಸುವುದಿಲ್ಲ ಎಂದು ಪಾಶ್ಚಾತ್ಯ ರಾಷ್ಟ್ರಗಳು ಸ್ಪಷ್ಟಪಡಿಸಿದ್ದವು.

    ವರ್ಗೀಕೃತ ಮಾಹಿತಿಗಳ ಪ್ರಕಾರ, ಅಮೆರಿಕಾದ ಮಾಜಿ ಸೆಕ್ರೆಟರಿ ಆಫ್ ಸ್ಟೇಟ್, ಜೇಮ್ಸ್ ಬೇಕರ್ ಅವರು ತನ್ನ ಸುರಕ್ಷತೆಯ ಕುರಿತು ರಷ್ಯಾ ಹೊಂದಿರುವ ಆತಂಕಗಳನ್ನು ಪರಿಹರಿಸಲು ಒಂದು ಮಾರ್ಗೋಪಾಯ ಸೂಚಿಸಿದ್ದರು. ಆದರೆ ಬಳಿಕ ಅಮೆರಿಕದ ಆಡಳಿತ ಬೇರೆಯದೇ ಅಭಿಪ್ರಾಯ ಹೊಂದಿರುವಂತೆ ಕಾಣಿಸುತ್ತಿತ್ತು. ಸೋವಿಯತ್ ಒಕ್ಕೂಟದ ಪತನದ ನಂತರವೂ, ನ್ಯಾಟೋ 1999 ಮತ್ತು 2004ರಲ್ಲಿ ಇನ್ನಷ್ಟು ವಿಸ್ತರಿಸಿತು.

    ಇದನ್ನೂ ಓದಿ: ಎರಡನೇ ಮಹಡಿಯಿಂದ ಆಯತಪ್ಪಿ ಕೆಳಕ್ಕೆ ಬಿದ್ದ 3 ವರ್ಷದ ಮಗು!

    ಪೋಲೆಂಡ್ ಅಥವಾ ಬಾಲ್ಟಿಕ್‌ನಂತಹ ರಾಷ್ಟ್ರಗಳು ಹಿಂದೆ ಅನುಭವಿಸಿದ್ದ ಸಂಕಷ್ಟವನ್ನು ಗಮನಿಸಿದರೆ, ಅವುಗಳು ನ್ಯಾಟೋದ ಸದಸ್ಯರಾಗಲು ಬಯಸುತ್ತಿರುವುದನ್ನು ಸಮರ್ಥಿಸಬಹುದು. ಆದರೆ, ನ್ಯಾಟೋದ ವಿಸ್ತರಣೆಯನ್ನು ನಿರ್ಧರಿಸುವಾಗ ರಷ್ಯಾದ ಸುರಕ್ಷತಾ ಕಾಳಜಿಗಳನ್ನು ಅರ್ಥೈಸಿಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ.

    ಷಣ್ಮುಗಂ ಅವರು 2014-15ರಲ್ಲಿ ರಷ್ಯಾ ಕ್ರಿಮಿಯಾವನ್ನು ಆಕ್ರಮಿಸಿದ ಬಳಿಕ ಶಾಂತಿ ಸ್ಥಾಪನೆಗಾಗಿ ಕೈಗೊಂಡ ಮಿನ್ಸ್ಕ್ ಒಪ್ಪಂದದ ಕುರಿತಾದ ಮಾಜಿ ಫ್ರೆಂಚ್ ಅಧ್ಯಕ್ಷರಾದ ಫ್ರಾಂಕೋಯಿಸ್ ಹಾಲೆಂಡ್ ಹಾಗೂ ಮಾಜಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದರು.

    ಆ ಒಪ್ಪಂದದಲ್ಲಿ ಫ್ರಾನ್ಸ್ ಮತ್ತು ಜರ್ಮನಿಗಳು ಮಧ್ಯಸ್ಥಿಕೆ ವಹಿಸಿದ್ದವು. ಆ ಒಪ್ಪಂದ ಡಾನ್‌ಬಾಸ್ ಪ್ರಾಂತ್ಯದ ಜನರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ಭರವಸೆ ಹೊಂದಿತ್ತು. ಆದ್ದರಿಂದ ರಷ್ಯಾ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿತ್ತು. ಆದರೆ, ಕಳೆದ ವರ್ಷ ಇಬ್ಬರು ಮಾಜಿ ಮುಖ್ಯಸ್ಥರ ಹೇಳಿಕೆಗಳನ್ನು ಗಮನಿಸಿದರೆ, ಈ ಒಪ್ಪಂದ ಕೇವಲ ಉಕ್ರೇನಿಗೆ ಯುದ್ಧ ಆರಂಭಗೊಂಡ ಬಳಿಕ ತನ್ನನ್ನು ಸಂಘಟಿಸಲು ಇನ್ನಷ್ಟು ಸಮಯಾವಕಾಶ ಒದಗಿಸುವ ಉದ್ದೇಶದಿಂದಷ್ಟೇ ಆಗಿತ್ತು.

    ಇದನ್ನೂ ಓದಿ: ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ

    ಷಣ್ಮುಗಂ ಅವರು ರಷ್ಯಾ ನಾಯಕರುಗಳ ಹೇಳಿಕೆಗಳನ್ನು ಹೇಗೆ ಅರ್ಥೈಸುತ್ತದೆ ಎನ್ನುವುದು ಅತ್ಯಂತ ಮುಖ್ಯ ಎಂದಿದ್ದರು. ಅವರ ಪ್ರಕಾರ, ರಷ್ಯಾ ಪಾಶ್ಚಾತ್ಯ ರಾಷ್ಟ್ರಗಳ ಮಾತುಗಳಲ್ಲಿ ನಂಬಿಕೆಯ ಕೊರತೆ ಇದೆ ಎಂದು ಭಾವಿಸುತ್ತದೆ. ಆದ್ದರಿಂದ ಇಂತಹ ರಾಷ್ಟ್ರಗಳ ಜೊತೆ ಮಾತುಕತೆಯ ಮೂಲಕ ಒಪ್ಪಂದಕ್ಕೆ ಬರಲು ಸಾಧ್ಯವಿಲ್ಲ ಎಂದೇ ನಂಬುತ್ತದೆ. ಇಂದು ಪರಿಸ್ಥಿತಿ ಈ ಹಂತಕ್ಕೆ ಬರಲು ಹಲವು ದೃಷ್ಟಿಕೋನಗಳು, ಕಾರಣಗಳಿದ್ದು, ಪಾಶ್ಚಾತ್ಯ ರಾಷ್ಟ್ರಗಳೂ ಇದರಲ್ಲಿ ಎಷ್ಟರ ಮಟ್ಟಿಗೆ ಕಾರಣಗಳಾಗಿವೆ ಎನ್ನುವುದನ್ನು ವಿವರಿಸುತ್ತವೆ.

    ಷಣ್ಮುಗಂ ಅವರ ಪ್ರಕಾರ, ಪ್ರಸ್ತುತ ಸನ್ನಿವೇಶದಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಮತ್ತು ನ್ಯಾಟೋದ ಯಾವುದೇ ಹಸ್ತಕ್ಷೇಪವಿಲ್ಲ, ಅವರು ತಟಸ್ಥವಾಗಿ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ ಎಂದು ಭಾವಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಏನೇ ಆಗಿದ್ದರೂ, ಉಕ್ರೇನ್ ದುರದೃಷ್ಟವಶಾತ್ ಒದ್ದಾಡುವಂತಾಗಿದೆ ಮತ್ತು ಉಕ್ರೇನಿನ ನಾಗರಿಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

    ಇದನ್ನೂ ಓದಿ: ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

    ಷಣ್ಮುಗಂ ಅವರ ಪ್ರಕಾರ, ಸಿಂಗಾಪುರ ಒಂದು ಸಣ್ಣ ರಾಷ್ಟ್ರವಾದರೂ, ಪ್ರಸ್ತುತ ಸನ್ನಿವೇಶದಿಂದ ಕಲಿತ ಪಾಠಗಳು ಅಂತಾರಾಷ್ಟ್ರೀಯ ಕಾನೂನಿನ ಎರಡು ಬಹುಮುಖ್ಯ ನೀತಿಗಳನ್ನು ತೋರಿಸುತ್ತವೆ. ಅವುಗಳಲ್ಲಿ ಮೊದಲನೆಯದು ಅವಿಭಾಜ್ಯ ಭದ್ರತೆ. ಅಂದರೆ ಯಾವುದೇ ರಾಷ್ಟ್ರವಾದರೂ ತನ್ನ ಭದ್ರತೆಯನ್ನು ಹೆಚ್ಚಿಸಲು ಇನ್ನೊಂದು ರಾಷ್ಟ್ರದ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡಬಾರದು. ಇನ್ನೊಂದು, ಸ್ವಯಂ ನಿರ್ಣಯ, ಅಂದರೆ ರಾಜಕೀಯ ಮತ್ತು ಮಿಲಿಟರಿ ಸಹಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಯಾವುದೇ ರಾಷ್ಟ್ರದ ಹಕ್ಕು.

    ಷಣ್ಮುಗಂ ಅವರ ಪ್ರಕಾರ, ಸಿಂಗಾಪುರದಂತಹ ಸಣ್ಣಪುಟ್ಟ ರಾಷ್ಟ್ರಗಳು ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಸಂಘರ್ಷದಿಂದ ನರಳುವಂತಾಗುತ್ತದೆ. ಆದ್ದರಿಂದ, ಸಿಂಗಾಪುರ ತನ್ನ ಭೂ ಪ್ರದೇಶದಲ್ಲಿ ಇತರ ರಾಷ್ಟ್ರಗಳೊಡನೆ ಸ್ಪರ್ಧೆ ನಡೆಸುವ ಬದಲು ಸಹಕಾರ ಹೊಂದುವುದು ಸಿಂಗಾಪುರದ ಅಭಿವೃದ್ಧಿ, ಸುರಕ್ಷತಾ ದೃಷ್ಟಿಯಿಂದ ಸೂಕ್ತವಾದದ್ದು.

    ಇತರ ರಾಷ್ಟ್ರಗಳು ನಮ್ಮ ಸಹಕಾರಕ್ಕೆ ಬರಬೇಕಾದರೆ, ಅದರಿಂದ ಅವರಿಗೆ ಏನಾದರೂ ಲಾಭ ಇರಬೇಕಷ್ಟೇ. ಆದ್ದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವಷ್ಟು ಮಿಲಿಟರಿ ಮತ್ತು ಸಾಮಾಜಿಕ ಸಾಮರ್ಥ್ಯವನ್ನು ಗಳಿಸಿಕೊಳ್ಳಲೇಬೇಕು. ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಸ್ವಾವಲಂಬಿಗಳಾಗುವುದು ಅತ್ಯಂತ ಮಹತ್ವದ್ದಾಗಿದೆ.

    ಆಗ್ನೇಯ ಏಷ್ಯಾದ ಎಲ್ಲ ರಾಷ್ಟ್ರಗಳ ಪೈಕಿ, ಅಮೆರಿಕಾಗೆ ಅತ್ಯಂತ ನಿಕಟವರ್ತಿಯಾಗಿರುವ ಸಿಂಗಾಪುರ ಮಾತ್ರವೇ ಉಕ್ರೇನ್ ದಾಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿದೆ.

    ಸಿಂಗಾಪುರ ತನ್ನ ನಿರ್ಧಾರದ ಕುರಿತು ಸ್ಪಷ್ಟನೆ ನೀಡುತ್ತಾ, ತಾನು ಪ್ರತಿಯೊಂದು ರಾಷ್ಟ್ರವೂ, ಅದರ ಗಾತ್ರದ ಹೊರತಾಗಿ, ತನ್ನ ಸ್ವಾತಂತ್ರ್ಯ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯ ಗೌರವವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts