More

    ಕನಸುಗಳ ನಿಯಂತ್ರಣಕ್ಕೆ ತಲೆಯೊಳಗೆ ಚಿಪ್‌; ಯೂಟ್ಯೂಬ್‌ ವಿಡಿಯೋ ನೋಡಿ ಸ್ವಯಂ ಆಪರೇಷನ್‌ ಮಾಡ್ಕೊಂಡ!

    ರಷ್ಯಾ: ಸೋಶಿಯಲ್​​ ಮೀಡಿಯಾದಿಂದ ಕಲಿಯುವುದು, ತಿಳಿಯುವುದು ತುಂಬಾ ಇದೆ. ಆದರೆ ಕೆಲವು ಜನರು ಇಲ್ಲಿಂದ ಬೇಡವಾದ ಮಾಹಿತಿ ತೆಗೆದುಕೊಳ್ಳುವುದು ಮತ್ತು ದುಸ್ಸಾಹಸಕ್ಕೆ ಕೈ ಹಾಕಿ ಅವಾಂತರ ಸೃಷ್ಟಿ ಮಾಡಿರುವ ಕೆಲವು ಘಟನೆಗಳ ಕುರಿತಾಗಿ ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಬೇಡವಾದ ಕನಸುಗಳನ್ನು ತಡೆದು ಸುಂದರವಾದ ಕನಸುಗಳು ಮಾತ್ರ ಬೀಳುವಂತೆ ಮಾಡಲು ತನ್ನ ಮೆದುಳಿಗೆ ಸ್ವಯಂ ಆಪರೇಷನ್ ಮಾಡಿಕೊಳ್ಳಲು ಹೋಗಿ ಬಹುತೇಕ ಸಾಯುವ ಸ್ಥಿತಿ ತಲುಪಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ಮಿಖೇಲ್‌ ರಾಡುಗಾ ಎಂಬ ವ್ಯಕ್ತಿಗೆ ಮೆದುಳಿನಲ್ಲಿ ಮೈಕ್ರೋಚಿಪ್ ಅಳವಡಿಸುವುದು ಯೋಜನೆಯಾಗಿತ್ತು. ರಷ್ಯಾದ ನೊವೊಸಿಬಿರ್ಸ್ಕ್ ನಗರದ ಈತ ತನ್ನ ಪ್ರಯತ್ನದ ಚಿತ್ರಗಳನ್ನು ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾನೆ.  ಹ್ಯಾಂಡ್‌ಹೆಲ್ಡ್‌ ಡ್ರಿಲ್‌ ಬಳಸಿಕೊಂಡು ಸರ್ಜರಿ ಮಾಡಿಕೊಳ್ಳಲು ಹೋಗಿ ಈಗ ಆಸ್ಪತ್ರೆಗೆ ಸೇರಿದ್ದು, ಸಾವು – ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ.  

    “ನಾನು ಡ್ರಿಲ್ ಅನ್ನು ಖರೀದಿಸಿದೆ. ನನ್ನ ತಲೆಯಲ್ಲಿ ರಂಧ್ರವನ್ನು ಕೊರೆದು ನನ್ನ ಮೆದುಳಿನಲ್ಲಿ ಎಲೆಕ್ಟ್ರೋಡ್ ಅನ್ನು ಅಳವಡಿಸಿದೆ. 2023 ಮೇ 17ರಂದು, ನನ್ನ ಮೆದುಳಿಗೆ ಟ್ರೆಪನೇಶನ್, ಎಲೆಕ್ಟ್ರೋಡ್ ಇಂಪ್ಲಾಂಟೇಶನ್ ಮತ್ತು ಮೆದುಳಿನ ಮೋಟಾರು ಕಾರ್ಟೆಕ್ಸ್‌ನ ವಿದ್ಯುತ್ ಪ್ರಚೋದನೆಯನ್ನು ನಾನೇ ಮಾಡಿಕೊಂಡಿದ್ದೇನೆ” ಎಂದು ಅವರು ಜುಲೈ 18 ರಂದು ಫೋಟೋಗಳ  ಜತೆಗೆ ಟ್ವೀಟ್ ಮಾಡಿದ್ದಾನೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ

    ಈ ಸ್ವಯಂ ಆಪರೇಷನ್‌ ಮಾಡಿಕೊಂಡ ಬಳಿಕ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸುಮಾರು ಒಂದು ಲೀಟರ್ ರಕ್ತವನ್ನು ಕಳೆದುಕೊಂಡ. ವೈದ್ಯರು ಚಕಿತ್ಸೆ ನೀಡಿದ್ದಾರೆ. ಮಿಖೇಲ್‌ ರಾಡುಗಾ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. 

    ಮಿಖೇಲ್‌ ರಾಡುಗಾ ಅವರು ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಿದ್ರೆ ರಷ್ಯಾ ಮೂಲದ ವ್ಯಕ್ತಿಯ ಮುಖದ ಮೇಲೆ ಹಲವು ಬ್ಯಾಂಡೇಜ್‌ಗಳನ್ನು ತೋರಿಸುತ್ತವೆ ಮತ್ತು ತಲೆಯೊಳಗಿನ ಎಲೆಕ್ಟ್ರೋಡ್ ಅನ್ನು ತೋರಿಸುವ ಎಕ್ಸ್-ರೇ ಅನ್ನು ಫೋಟೋದಲ್ಲಿ ನೋಡಬಹುದು.

    ದನಗಳು ಈ ಗ್ರಾಮದ ರಸ್ತೆಯಲ್ಲಿ ತಿರುಗಾಡುವುದು ಕಂಡು ಬಂದ್ರೆ ಮಾಲೀಕನಿಗೆ 500 ರೂ. ದಂಡ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts