More

    ದನಗಳು ಈ ಗ್ರಾಮದ ರಸ್ತೆಯಲ್ಲಿ ತಿರುಗಾಡುವುದು ಕಂಡು ಬಂದ್ರೆ ಮಾಲೀಕನಿಗೆ 500 ರೂ. ದಂಡ

    ಮಧ್ಯಪ್ರದೇಶ: ಜಾನುವಾರುಗಳ ದಾಳಿ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿರುವ ನಾಗನಡುಯಿ ಗ್ರಾಮದಲ್ಲಿ ಇತ್ತೀಚೆಗೆ ಸರ್ಪಂಚರು ಜಾನುವಾರುಗಳ ಅಲೆದಾಟದ ಕುರಿತು ಹೊಸ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಒದ್ದೆಯಾದ ಶೂ, ಚಪ್ಪಲಿ ಧರಿಸುವುದು ಸೋಂಕಿಗೆ ಕಾರಣವಾಗಬಹುದು; ಈ 3 ವಿಷಯಗಳ ಬಗ್ಗೆ ಕಾಳಜಿ ವಹಿಸಿ

    ಹೊಸ ನಿಯಮದ ಪ್ರಕಾರ, ಜಾನುವಾರುಗಳು ಗ್ರಾಮದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡು ಬಂದರೆ ಅವುಗಳ ಮಾಲೀಕರಿಗೆ ಐದು ಬಾರಿ ಚಪ್ಪಲಿಯಿಂದ ಹೊಡೆದು 500 ರೂಪಾಯಿ ದಂಡ ವಸೂಲಿ ಮಾಡಬೇಕು ಎಂದು ಮಧ್ಯಪ್ರದೇಶದ ಗ್ರಾಮವೊಂದರ ಸರಪಂಚ್ ಆದೇಶಿಸಿದ್ದಾರೆ.

    ಇದನ್ನೂ ಓದಿ: ಶೇವಿಂಗ್ ನಂತರ ಮುಖದಲ್ಲಿ ತುರಿಕೆ ಆಗುತ್ತಾ? ಇದನ್ನು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ..

    ಈ ಹೊಸ ಆದೇಶದ ಕುರಿತಾಗಿ ಡಂಗೂರ ಬಾರಿಸುತ್ತಾ, ಗ್ರಾಮದಲ್ಲಿ ಜಾನುವಾರುಗಳು ಸ್ವಚ್ಛಂದವಾಗಿ ಓಡಾಡುತ್ತಿರುವುದು ಕಂಡು ಬಂದರೆ ಐದು ಬಾರಿ ಚಪ್ಪಲಿಯಿಂದ ಥಳಿಸಿ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ವ್ಯಕ್ತಿಯೊಬ್ಬ ಜೋರಾಗಿ ಸಾರುತ್ತಾ ಹೋಗುತ್ತಿರುವ ವಿಡಿಯೋ ಸೋಶಿಯಲ್​​​ ಮೀಡಿಯಾದಲ್ಲಿ ವೈರಲ್​​​ ಆಗಿದೆ.

    ಇದನ್ನೂ ಓದಿ: ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ…

    ಈ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ ಮಾಡಿದ್ದಾರೆ. ಆದರೆ ಈ ವಿಷಯದಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮಧ್ಯಸ್ಥಿಕೆಯನ್ನು ಗ್ರಾಮಸ್ಥರಿಗೆ ಗ್ರಾಮ ಮಧ್ಯದಲ್ಲಿ ತಿರುಗಾಡುವ ಧನ, ಕರುಗಳಿಂದ ರಸ್ತೆಯಲ್ಲಿ ಓಡಾಡಲು ಸಮಸ್ಯೆ ಆಗುತ್ತದೆ. ಹೀಗಾಗಿ ಈ ಕ್ರಮವನ್ನು ತೆಗೆದುಕೊಳ್ಳಾಗಿದೆ ಎಂದು ತಿಳಿಸಿದ್ದಾರೆ.

    2018ರಲ್ಲಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಗ್ರಾಮವೊಂದು ಮಹಿಳೆಯರು ಹಗಲು ಹೊತ್ತಿನಲ್ಲಿ ನೈಟಿ ಧರಿಸುವುದನ್ನು ನಿಷೇಧಿಸಲಾಗಿತ್ತು. ಈ ನಿಯಮ್ಮ ಪಾಲಿಸದಿದ್ದರೆ 2 ಸಾವಿರ ರೂಪಾಯಿ ದಂಡ ಹಾಕುದುದಾಗಿ ವಿಧಿಸಿದ ನಿಯಮ ಸಖತ್​ ಸುದ್ದಿಯಾಗಿತ್ತು.

    ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಇರಲಿ ಎಚ್ಚರಿಕೆ; ಅವಘಡಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts