More

    ರಷ್ಯಾದಲ್ಲಿ ಇನ್ನಿಲ್ಲ ಕೋವಿಡ್​ ಭೀತಿ, ವಿಜಯೋತ್ಸವಕ್ಕೆ ಆದೇಶಿಸಿದ ಅಧ್ಯಕ್ಷ

    ಮಾಸ್ಕೋ: ರಷ್ಯಾ ಕೋವಿಡ್​ ಕಾಯಿಲೆಯ ಉತ್ತುಂಗವನ್ನು ಈಗಾಗಲೇ ತಲುಪಿ ಆಗಿದೆ. ಹೀಗಾಗಿ ಇನ್ನು ಚಿಂತೆ ಮಾಡಬೇಕಿಲ್ಲ, ಮುಂದೂಡಲಾಗಿರುವ ಎರಡನೇ ವಿಶ್ವ ಯುದ್ಧದ ವಿಜಯೋತ್ಸವವನ್ನು ಆಚರಿಸುವಂತೆ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಕರೆ ನೀಡಿದ್ದಾರೆ.

    ರಷ್ಯಾದಲ್ಲಿ ಸದ್ಯ 3,62,342 ಕರೊನಾ ಸೋಂಕಿತರಿದ್ದಾರೆ. 3,807 ಜನರು ಮೃತಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಮೆರಿಕಾ ಹಾಗೂ ಬ್ರೆಜಿಲ್​ನ ನಂತರದ ಸ್ಥಾನದಲ್ಲಿ ರಷ್ಯಾ ಇದೆ. ಮೇ 26 ರಂದು 8,915 ಹೊಸ ಪ್ರಕರಣಗಳು ವರದಿಯಾಗಿವೆ. ಹೀಗಿದ್ದರೂ ಜನರು ಚಿಂತೆ ಮಾಡಬೇಕಿಲ್ಲ ಎನ್ನುವುದು ಪುಟಿನ್​ ವಾದವಾಗಿದೆ.

    ಇದನ್ನೂ ಓದಿ; ಚೀನಾ ವಿರುದ್ಧ ಹಾಂಗ್​ಕಾಂಗ್​ಗೆ ಸಿಗಲಿದೆಯೇ ಅಮೆರಿಕದ ಅಸ್ತ್ರ..? 

    ಏಕೆಂದರೆ, ಕಳೆದ ಕೆಲ ದಿನಗಳಿಂದ ರಷ್ಯಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇನ್ನು ಹೆಚ್ಚಳವಾಗುವ ಸಾಧ್ಯತೆಗಳಿಲ್ಲ. ಕೋವಿಡ್​ ಪ್ರಕರಣ ಉತ್ತುಂಗದಿಂದ ನಾವೀಗಾಗಲೇ ಕೆಳಗಿಳಿದಿದ್ದೇವೆ. ಹೀಗಾಗಿ ಹೊಸ ಪ್ರಕರಣಗಳು ವರದಿಯಾಗುವುದು ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

    ಕೋವಿಡ್​ ಪ್ರಕರಣಗಳು ತೀವ್ರ ಗತಿಯಲ್ಲಿ ಏರಿಕೆ ಕಾಣುತ್ತಿದ್ದ ಕಾರಣದಿಂದಾಗಿ ಇದೇ ತಿಂಗಳ 9 ರಂದು ನಡೆಯಬೇಕಿದ್ದ ನಾಜಿಗಳ ವಿರುದ್ಧ ಎರಡನೇ ವಿಶ್ವಯುದ್ಧದಲ್ಲಿ ಜಯಗಳಿಸಿದ 75ನೇ ವರ್ಷಾಚರಣೆಯನ್ನು ಮುಂದೂಡಲಾಗಿತ್ತು. ಈಗ ವಿಜಯೋತ್ಸವವನ್ನು ಜೂನ್​ 24ರಂದು ಆಚರಿಸಲು ಪುಟಿನ್​ ಆದೇಶ ಹೊರಡಿಸಿದ್ದಾರೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ನಡೆಸುವಂತೆ ತಿಳಿಸಿದ್ದಾರೆ.

    ಇದನ್ನೂ ಓದಿ; ಲಡಾಖ್​ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ ಚೀನಾ, ಚೀನಿಯರನ್ನು ಕರೆಯಿಸಿಕೊಳ್ಳಲು ಮುಂದಾದ ರಾಯಭಾರ ಕಚೇರಿ 

    ಸದ್ಯ ಕೋವಿಡ್​ ಪರೀಕ್ಷೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಕಳೆದ ವಾರದಲ್ಲಿ ಕರೊನಾ ಪರೀಕ್ಷೆ 30 ಲಕ್ಷದಷ್ಟು ಏರಿಕೆ ಕಂಡಿದೆ. ಜತೆಗೆ, ಪ್ರತಿದಿನ 2.40 ಲಕ್ಷಕ್ಕೂ ಅಧಿಕ ಜನರ ಗಂಟಲು ದ್ರದ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಹೊಸ ಪ್ರಕರಣಗಳು ವರದಿಯಾಗುವುದು ಕಳೆದ ಒಂದು ವಾರದ ಅವಧಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪುಟಿನ್​ ಮಾಹಿತಿ ನೀಡಿದ್ದಾರೆ.

    ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts