More

    ಕೊವಿಡ್​-19 ಲಸಿಕೆಗೆ ಸೆಪ್ಟೆಂಬರ್​ವರೆಗೆ ಕಾಯಬೇಕಿಲ್ಲ…?; ರಷ್ಯಾದಿಂದ ಬಂತು ಗುಡ್​ ನ್ಯೂಸ್​

    ಜಗತ್ತಿನಾದ್ಯಂತ ಕರೊನಾ ವೈರಸ್​ ಪ್ರಕರಣಗಳು ಹೆಚ್ಚುತ್ತಿವೆ. ಭಾರತ ಸೇರಿ ಹಲವು ದೇಶಗಳು ಕೊವಿಡ್​-19 ಲಸಿಕೆಯನ್ನು ಅಭಿವೃದ್ಧಿ ಪಡಿಸಿವೆ. ಈ ಪೈಕಿ ರಷ್ಯಾ ತುಸು ಮುಂದಿದ್ದು, ಜಗತ್ತಿನ ಮೊದಲ ಕರೊನಾ ಲಸಿಕೆಯನ್ನು ಈ ವಾರದಲ್ಲಿಯೇ ನೋಂದಣಿ ಮಾಡಲು ಸಿದ್ಧವಾಗಿದೆ.

    ರಷ್ಯಾದ ಗಮೆಲಿಯಾ ರಿಸರ್ಚ್​ ಇನ್ಸ್ಟಿಟ್ಯೂಟ್​ ಮತ್ತು ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಆಗಸ್ಟ್​ 12ರಂದೇ ರಿಜಿಸ್ಟರ್​ ಮಾಡಲಾಗುವುದು. ಅದಾದ ಒಂದೇ ವಾರದಲ್ಲಿ ಉತ್ಪಾದನೆಯೂ ಶುರುವಾಗುತ್ತದೆ ಎಂದು ಶುಕ್ರವಾರವೇ ಉಪ ಆರೋಗ್ಯ ಸಚಿವ ಒಲೆಗ್​ ಗ್ರಿಡ್ನವ್​ ತಿಳಿಸಿದ್ದಾರೆ. ಇದನ್ನೂ ಓದಿ: ಮಾನವರ ಮೇಲಿನ ಪ್ರಯೋಗ ಮುಗಿಸಿದ ರಷ್ಯಾ; ಸೆಪ್ಟೆಂಬರ್​ನಿಂದ ಕೋವಿಡ್​-19 ಲಸಿಕೆ ಉತ್ಪಾದನೆ ಆರಂಭ

    ಲಸಿಕೆ ನೋಂದಣಿಯಾಗುತ್ತಿದ್ದಂತೆ, ಕರೊನಾ ವೈರಸ್​ ಮತ್ತು ಫ್ಲ್ಯೂ ಲಸಿಕೆಯ ಹಣಕಾಸು ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳೂ ವರದಿ ಮಾಡಿವೆ.
    ಗಮೇಲಿಯಾ ನ್ಯಾಷನಲ್​ ರಿಸರ್ಚ್​​ ಸೆಂಟರ್​ ಆಫ್​ ಎಪಿಡಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ ಅಭಿವೃದ್ಧಿ ಪಡಿಸಿರುವ ಈ ಲಸಿಕೆಯ ಪ್ರಯೋಗಕ್ಕೆ ಒಳಗಾದ ಎಲ್ಲರಲ್ಲೂ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದು ಅಂತಿಮ ತಪಾಸಣೆ ವೇಳೆ ಸ್ಪಷ್ಟವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಈಗಾಗಲೇ ಹೇಳಿದೆ. (ಏಜೆನ್ಸೀಸ್​)

    11ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ 53 ವರ್ಷದ ಸಚಿವ; ಶಿಕ್ಷಣ ಮುಂದುವರಿಸಲು ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts