More

    ಮಳೆ ನಡುವೆಯೂ ನೋಂದಣಿಗೆ ದೌಡು

    ಆಯನೂರು: ಕೊಹಳ್ಳಿ ಗ್ರಾಮ ಒನ್ ಕೇಂದ್ರದಲ್ಲಿ ಮಳೆಯ ನಡುವೆಯೂ ಗೃಹಲಕ್ಷಿ÷್ಮÃ ನೋಂದಣಿ ಮಾಡಿಸಿಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು. ಜನರು ನಮಗೆ ಮೆಸೇಜ್ ಬಂದಿಲ್ಲ. ನೋಂದಣಿ ಎಲ್ಲಿ ಮಾಡಿಸಿಕೊಳ್ಳಬೇಕು? ಎಂಬ ಗೊಂದಲದಲ್ಲಿ ಜನರು ಇರುವುದು ಕಂಡುಬAದಿತು. ಜತೆಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಮಧ್ಯಾಹ್ನ 12.30 ನಂತರ ಓಪನ್ ಆದರೂ ಒಂದು ಅರ್ಜಿ ಪ್ರಕ್ರಿಯೆಯೂ ಪೂರ್ಣಗೊಂಡಿರಲಿಲ್ಲ. 15ರಿಂದ 20 ನಿಮಿಷಗಳ ಕಾಲ ಕೆಲಸ ಮಾಡಿದ ನಂತರ ರೇಷನ್ ಕಾರ್ಡ್ ಸಮಸ್ಯೆ, ಒಟಿಪಿ ಸಮಸ್ಯೆ ಎದುರಾಗಿ ಯಾವುದೇ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ನಮಗೆ -ೆÇÃನ್‌ನಲ್ಲಿ ಮಾಹಿತಿ ಬಂದಿತ್ತು 11.30ಕ್ಕೆ ಕೇಂದ್ರಕ್ಕೆ ಬರಲು ಸೂಚಿಸಲಾಗಿತ್ತು. ಆದರೆ ಮಧ್ಯಾಹ್ನ ಎರಡು ಗಂಟೆಯಾದರೂ ಇಲ್ಲಿ ನೋಂದಣಿ ಆಗದೆ ಕಾಯುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆಯನೂರು ಕೋಟೆಯ ನಿವಾಸಿ ಸುವರ್ಣಮ್ಮ ಹೇಳಿದರು. ಆಯನೂರು ನಾಡಕಚೇರಿಯ ಉಪತಹಸೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಽಕಾರಿಗಳು ಗ್ರಾಮಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನೋಂದಣಿ ಆಗಿರುವ ಮೊಬೈಲï‌ಗೆ ಮೆಸೇಜ್ ಬರುತ್ತದೆ. ಒಂದು ದಿನಕ್ಕೆ 60 ನೋಂದಣಿ ಮಾಡಲು ಅವಕಾಶವಿದೆ. ಸರ್ವರ್ ಸಮಸ್ಯೆ ತಲೆದೂರಿದ್ದು ಪ್ರಕ್ರಿಯೆ ನಿಧಾನವಾಗಿದೆ. ನೋಂದಣಿಗೆ ಯಾವುದೇ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಮನೆಯೊಡತಿಯ ರೇಷನ್ ಕಾರ್ಡ್, ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್, ಮೊಬೈಲï ತೆಗೆದುಕೊಂಡು ಬಂದು ನೋಂದಣಿ ಮಾಡಿಸಿಕೊಳ್ಳಿ.
    |ಕೆ.ಸುರೇಶ್ ನಾಯ್ಕ್
    ಆಯನೂರು ಉಪತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts