More

    VIDEO | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಿದ್ದು ಎದ್ದು ಓಡಿ ಗೆದ್ದ ಡಚ್​ ಓಟಗಾರ್ತಿ!

    ಟೋಕಿಯೊ: ಬಿದ್ದರೆ ಎಲ್ಲವೂ ಮುಗಿಯಿತು ಎಂದರ್ಥವಲ್ಲ, ಮೇಲೆದ್ದು ಮತ್ತೆ ಓಡಿದರೆ ಪ್ರಥಮ ಸ್ಥಾನವನ್ನೇ ಗೆಲ್ಲಬಹುದು ಎಂದು ನೆದರ್ಲೆಂಡ್ಸ್ ಓಟಗಾರ್ತಿ ಸಿಫನ್ ಹಸನ್ ಟೋಕಿಯೊದ ಒಲಿಂಪಿಕ್ ಕ್ರೀಡಾಂಗಣದಲ್ಲಿ ಸಾಬೀತುಪಡಿಸಿದ್ದಾರೆ.

    ಸೋಮವಾರ ನಡೆದ ಮಹಿಳೆಯರ 1,500 ಮೀಟರ್ ಓಟದ ಸ್ಪರ್ಧೆಯ ಹೀಟ್ಸ್‌ನಲ್ಲಿ ಇಥಿಯೋಪಿಯಾ ಮೂಲದ ಸಿಫನ್ ಸಹ-ಓಟಗಾರ್ತಿ ಕೀನ್ಯಾದ ಎಡಿನಾಹ್ ಜೆಬಿಟೊಕ್ ಎದುರುಗಡೆ ಬಿದ್ದ ಕಾರಣ, ಅವರಿಗೆ ಢಿಕ್ಕಿಯಾಗಿ ತಾವೂ ಟ್ರ್ಯಾಕ್ ಮೇಲೆ ಬಿದ್ದರು. ಓಟ ಪ್ರಾರಂಭಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ಅಪಘಾತ ಸಂಭವಿಸಿತು. ಆದರೆ ಅಷ್ಟಕ್ಕೆ ಕುಗ್ಗದ ಸಿಫನ್, ಮೇಲೆದ್ದು ಮತ್ತೆ ಓಡಿದರಲ್ಲದೆ ಎಲ್ಲರನ್ನೂ ಹಿಂದಿಕ್ಕಿ 4 ನಿಮಿಷ, 5.17 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರೈಸುವ ಮೂಲಕ ಪ್ರಥಮ ಸ್ಥಾನವನ್ನೂ ಪಡೆದು ಸೆಮಿಫೈನಲ್‌ಗೇರಿದರು.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ 5 ಸ್ವರ್ಣ ಪದಕ ಬೇಟೆಯಾಡಿದ ಅಮೆರಿಕದ ಚಿನ್ನದ ಮೀನು ಡ್ರೆಸ್ಸೆಲ್

    ಸಿಫನ್​ ಬಳಿಕ ನಡೆದ 5 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ಬೀಗಿದರು. 10 ಸಾವಿರ ಮೀ. ಓಟದಲ್ಲೂ ಅವರು ಸ್ಪರ್ಧಿಸಲಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಒಟ್ಟು 3 ಸ್ವರ್ಣ ಪದಕವನ್ನು ಬಾಚಿಕೊಳ್ಳುವ ಹಂಬಲವನ್ನು ಸಿಫನ್​ ಹೊಂದಿದ್ದಾರೆ.

    ಸಿಂಧು ಪ್ರೋತ್ಸಾಹದ ನುಡಿ ನನ್ನ ಕಣ್ಣಂಚಲ್ಲಿ ನೀರು ತರಿಸಿದವು: ಚೈನೀಸ್ ತೈಪೆ ಆಟಗಾರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts