More

    ನಿರ್ದೇಶಕನೊಂದಿಗೆ ಮಾಲ್ಡೀವ್ಸ್‌ ಪ್ರವಾಸ: ಟಾಲಿವುಡ್​​ನಲ್ಲಿ ಭಾರೀ ಚರ್ಚೆಯಲ್ಲಿರುವ ಈ ನಟಿ ಹೇಳಿದ್ದೇನು?

    ಹೈದರಾಬಾದ್​: ಸದ್ಯ ಟಾಲಿವುಡ್​ನಲ್ಲಿ ಮಿಂಚುತ್ತಿರುವ ಗುಳಿಕೆನ್ನೆಯ ಬೆಡಗಿ ನಟಿ ಸುಷ್ಮಿತಾ ಚಟರ್ಜಿ ಹೀಗೊಂದು ವಿಷಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಗಾಸಿಪ್​ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುವ ಈ ಹೊಸ ಪ್ರತಿಭೆ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ. ತನ್ನ ಮುಂಬರುವ ಚಿತ್ರದ ನಿರ್ದೇಶಕರೊಂದಿಗೆ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿರುವ ಈಕೆ ಸದ್ಯ ಟಾಲಿವುಡ್​ನ ಬಿಸಿ ಬಿಸಿ ಸುದ್ದಿಯಾಗಿದೆ.

    ಸದ್ಯ ತನ್ನ ಬಗ್ಗೆ ಹೇಳಲಾಗಿರುವ ಹಲವಾರು ಗಾಸಿಪ್​ಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಅದಕ್ಕೆ ಉತ್ತರವನ್ನೂ ನೀಡಿದ್ದಾರೆ. ಒಟಿಟಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿರುವ ಸುಷ್ಮಿತಾ, ನಾನು ನಟಿಯಾಗಿ ನೆಲೆಯೂರಲು ಮತ್ತು ಅಂತಹ ಗಾಸಿಪ್​ಗಳಿಂದ ದೂರವಿರಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

    ಇನ್ನೂ ಮಹಿಳೆಯರನ್ನು ದೂಷಿಸುವ ವಿಚಾರಕ್ಕೆ ಬಂದರೆ ಮೊದಲು ಆರೋಪಿಸುವುದೇ ಸಿನಿಮಾ ನಟಿಯರನ್ನು ಎಂಬುದನ್ನು ಗಮನಿಸಬೇಕಿದೆ. ಹೀಗೇಕೆ ಎಂದು ನನಗೆ ಗೊತ್ತಿಲ್ಲ. ನಾವು ಮಾತ್ರ ಟೀಕೆಗೆ ಗುರಿಯಾಗುತ್ತೇವೆ ಎಂದು ಹೇಳಿದ್ದಾರೆ.

    ಈ ಮಾತನ್ನು ಹೇಳುತ್ತಿರುವುದು ನಾನು ಮೊದಲಿಗಳೇನಲ್ಲ, ಇದು ಸಮಾಜದ ಸ್ತ್ರೀ ದ್ವೇಷದ ಭಾಗವನ್ನು ತೋರಿಸುತ್ತದೆ ಎಂಬುದನ್ನು ನಾನು ನಂಬುತ್ತೇನೆ. ನನ್ನಂತೆ ಸಾಕಷ್ಟು ಜನರು ಇಂಡಸ್ಟ್ರಿಗೆ ಬರುತ್ತಾರೆ, ಯಶಸ್ವಿಯೂ ಆಗಿದ್ದಾರೆ, ನನ್ನ ವಿರುದ್ಧದ ಗಾಸಿಪ್​ಗಳಿಗೆ ಉದ್ಯಮವು  ಸಂವೇದನಾಶೀಲವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಲಲಿತ್​ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್​: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!

    VIDEO: ದೆಹಲಿ ಮೆಟ್ರೋದಲ್ಲಿ ಯುವಕನಿಗೆ ಯುವತಿಯಿಂದ ಕಪಾಳಮೋಕ್ಷ! ಪ್ರಯಾಣಿಕರಿಗೆ ಉಚಿತ ಮನರಂಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts