More

    ಬಸ್ ಪ್ರಯಾಣಿಕರಿಗೆ ಕ್ವಾರಂಟೈನ್ ಭಯ!

    ಮೂಡಿಗೆರೆ: ಕರೊನಾ ಭೀತಿಯಿಂದ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಪ್ರಯಾಣಿಕರ ಬರ ಬಂದಿದ್ದರಿಂದ ಬಸ್​ಗಳು ನಷ್ಟದಲ್ಲಿ ಸಂಚರಿಸುತ್ತಿವೆ.

    ಅಂತರ ಪಾಲನೆ, ಮಾಸ್ಕ್, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ ಹೆಸರು, ವಿಳಾಸ, ಆಧಾರ್, ಮೊಬೈಲ್ ಸಂಖ್ಯೆ ನೀಡಿ ಟಿಕೆಟ್ ಪಡೆದು ಪ್ರಯಾಣಿಸುವುದು ವಿಮಾನ ಪ್ರಯಾಣ ಮಾಡಿದ ಅನುಭವವನ್ನೇ ನೀಡತೊಡಗಿದೆ. ಪ್ರಯಾಣಿಕರ ಪೈಕಿ ಒಬ್ಬರಿಗೆ ಕರೊನಾ ಪಾಸಿಟಿವ್ ಬಂದರೆ ಬಸ್​ನಲ್ಲಿರುವ ಎಲ್ಲ ಪ್ರಯಾಣಿಕರನ್ನೂ ಕ್ವಾರಂಟೈನ್​ಗೆ ಗುರಿಪಡಿಸಲಾಗುತ್ತದೆ ಎಂಬ ಆತಂಕ ಎಲ್ಲರಲ್ಲೂ ಕಾಡುತ್ತಿರುತ್ತದೆ. ಹಾಗಾಗಿ ಇದರ ಸಹವಾಸವೇ ಬೇಡ ಎಂದು ಜನರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

    ಬೆಂಗಳೂರು, ಹಾಸನ, ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತಿತರ ಜಿಲ್ಲೆಗೆ ತೆರಳುವವರು ಬಾಡಿಗೆ ಅಥವಾ ಸ್ವಂತ ವಾಹನದಲ್ಲಿ ಹೋಗಿಬಿಡುತ್ತಾರೆ. ಗ್ರಾಮೀಣ ಭಾಗಕ್ಕೆ ತೆರಳುವ ಬಸ್​ಗಳಿಗೆ ಪಟ್ಟಣದಿಂದ ಜನ ಬರುವುದಿಲ್ಲ. ಗ್ರಾಮದಿಂದ ಪಟ್ಟಣಕ್ಕೆ ಬಸ್​ನಲ್ಲಿ ಪ್ರಯಾಣಿಸುವವರ ಸಂಖ್ಯೆ ವಿರಳ. ಪಟ್ಟಣದ ಜನರಲ್ಲಿ ಕರೊನಾ ಪಾಸಿಟಿವ್ ಇರಬಹುದೆಂಬ ಹೆದರಿಕೆಯಿಂದ ಬಸ್ ಪ್ರಯಾಣಕ್ಕೆ ಗ್ರಾಮೀಣ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆಎಸ್​ಆರ್​ಟಿಸಿ ಬಸ್ ನಷ್ಟದಲ್ಲಿ ಸಂಚರಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts