More

    ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸಹಿಸಲ್ಲ: ಗ್ರಾಪಂ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪೊಲೀಸರು, ಅಧಿಕಾರಿಗಳಿಗೆ ರುದ್ರೇಶ್ ಎಚ್ಚರಿಕೆ

    ಕನಕಪುರ:ಬಿಜೆಪಿ ಕಾರ್ಯಕರ್ತ ಮುಖಂಡರಿಗೆ ಪೊಲೀಸ್ ಹಾಗೂ ಯಾವುದೇ ಅಧಿಕಾರಿಗಳು ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಕೆಆರ್​ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಹೇಳಿದರು.

    ನಗರದ ಮಹಾರಾಜರ ಕಟ್ಟೆ ರಸ್ತೆ ಖಾಸಗಿ ತೋಟವೊಂದರಲ್ಲಿ ತಾಲೂಕು ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಗ್ರಾಮ ಪಂಚಾಯತಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಕಚೇರಿಗೆಳಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಬಂದಾಗ ಕಾನೂನಡಿಯಲ್ಲಿ ಕೆಲಸ

    ಗಳನ್ನು ಮಾಡಿಕೊಡಬೇಕು. ಸರ್ಕಾರದ ಸವಲತ್ತು ಗಳನ್ನು ಜನರಿಗೆ ನೀಡಲು ಮೀನಮೇಷ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

    ರಾಮನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಅನುದಾನ ತಂದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯಲ್ಲಿ ಕಾರ್ಯಕರ್ತ ಮುಖಂಡರ ಪರಿಶ್ರಮದಿಂದ ಪಕ್ಷ ಬೇರು ಬಿಟ್ಟ ಪರಿಣಾಮ ನನ್ನಂತಹ ಸಾಮಾನ್ಯ ಯುವಕನಿಗೆ ಸರ್ಕಾರ ಮಹತ್ತರವಾದ ಗ್ರಾಮೀಣ ಅಭಿವೃದ್ಧಿಯಂತಹ ಜವಾಬ್ದಾರಿ ನೀಡಿದ್ದು, ಶ್ರದ್ಧೆ ಮತ್ತು ನಿಷ್ಠೆಯಿಂದ ದುಡಿಯುವುದಾಗಿ ತಿಳಿಸಿದರು.

    ಈಗಾಗಲೇ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಜನರು ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಇದೇರೀತಿ ಮುಂಬರುವ ಗ್ರಾಮೀಣ ಸ್ಥಳೀಯ ಚುನಾವಣೆಗಳಲ್ಲೂ ಪಕ್ಷವನ್ನು ಗೆಲ್ಲಿಸುವ ಮೂಲಕ ವರಿಷ್ಠರ ಕೈ ಬಲಪಡಿಸಬೇಕು. ಗ್ರಾಮ ಪಂಚಾಯತಿಯಲ್ಲೂ ಬಿಜೆಪಿ ಬಾವುಟ ಹಾರಿಸಲು ಇಂದಿನಿಂದಲೇ ಸಿದ್ಧರಾಗೋಣ ಎಂದು ಕರೆ ನೀಡಿದರು.

    ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್, ನಗರಸಭೆ ಸದಸ್ಯೆ ಮಾಲತಿ ಆನಂದ್, ತಾಲೂಕು ಬಿಜೆಪಿ ಅಧ್ಯಕ್ಷ ಪ್ರವೀಣ್, ನಗರಮಂಡಲ ಮಾಜಿ ಅಧ್ಯಕ್ಷ ನಾಗಾನಂದ್, ಮುಖಂಡರಾದ ಮಲ್ಲೇಗೌಡ, ಎಸ್.ಆರ್.ನಾಗರಾಜು, ಭೂಹಳ್ಳಿ ಶ್ರೀನಿವಾಸ್ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts