More

    ಆರ್‌ಟಿಪಿಸಿಆರ್ ಪರೀಕ್ಷೆ ದರ ಕಡಿತ: ಕೋವಿಡ್ ಕಾರ್ಯಪಡೆ ಸಭೆ ನಿರ್ಧಾರ

    ಬೆಂಗಳೂರು: ಕೋವಿಡ್- 19 ಸೋಂಕಿತರು ನಿರಾಳವಾಗುವಂತಹ ಸುದ್ದಿಯನ್ನು ರಾಜ್ಯ ಸರಕಾರ ನೀಡಿದ್ದು, ಆರ್‌ಟಿಪಿಸಿಆರ್ ಪರೀಕ್ಷೆ ದರ ಕಡಿತವೂ ಸೇರಿ ಮಹತ್ವದ ನಿಧಾರಗಳನ್ನು ಕೈಗೊಂಡಿದೆ. ಈ ದರ ಕಡಿತ ಎಲ್ಲ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯ ವಿವರಗಳನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

    ಅವರು ಹೇಳಿದ್ದಿಷ್ಟು- ಸ್ವಾತಂತ್ರ್ಯ ದಿನಕ್ಕೆ ಮುನ್ನಾ ದಿನವೇ ಸರಕಾರ ಜನರಿಗೆ ಒಳ್ಳೆಯ ಸುದ್ದಿಯೊಂದನ್ನು ನೀಡಲಾಗುತ್ತಿದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಬಗ್ಗೆ ಈಗಾಗಲೇ ಐಸಿಎಂಆರ್ ಎಚ್ಚರಿಕೆ ನೀಡಿದೆ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 115 ಐಸಿಯು ಬೆಡ್ ಆರಂಭಿಸಲು 12 ಕೋಟಿ ರೂ. ಮೊತ್ತದ ಉಪಕರಣ ಖರೀದಿ ಮಾಡಲು ಸಹ ಈ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

    ಇದನ್ನೂ ಓದಿ: ಸೇತುವೆ ಬಳಿ ಗುಲಾಬಿ ಹೂವು ಇಟ್ಟ ಪ್ರೇಮಿಗಳಿಬ್ಬರೂ ಕೈ ಹಿಡಿದುಕೊಂಡೇ ತುಂಗಾ ನದಿಗೆ ಜಿಗಿದರು..!

    ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಇಂಥ ಪರೀಕ್ಷೆಗಳನ್ನು ಮಾಡಲು ಸಮಸ್ಯೆಯಾದರೆ ಖಾಸಗಿ ಲ್ಯಾಬ್‌ಗಳಲ್ಲಿ ಮಾಡಲಾಗುವುದು. ಈ ಟೆಸ್ಟ್ ಮಾಡುವುದರಿಂದ ಆ ರೋಗದ ಹಂತ ತಿಳಿದು ಚಿಕಿತ್ಸೆ ಮಾಡಿ ಮರಣ ಪ್ರಮಾಣ ಕಡಿಮೆ ಮಾಡಬಹುದು. ಇದರ ಜತೆಗೆ ಪ್ಲಾಸ್ಮಾ ಥೆರಪಿ ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಈ ಥೆರಪಿ ಕೊಡಲು ಎಲ್ಲಾ ಕಡೆ ವ್ಯವಸ್ಥೆ ಮಾಡಲಾಗಿದೆ. 18 ಸಾವಿರ ಜನಕ್ಕೆ ಸ್ಟಿರೊಲಜೀ ಪರೀಕ್ಷೆ ಮಾಡಲಾಗುವುದು. ರಾಜ್ಯದಲ್ಲಿ ಗ್ರೂಪ್ ಮಾಡಿ ಪರೀಕ್ಷೆ ಮಾಡಲಾಗುತ್ತದೆ. 18 ಸಾವಿರ ಆಂಟಿ ಬಾಡಿ ಟೆಸ್ಟ್ ಕೂಡ ಮಾಡಲಾಗುತ್ತಿದೆ. ಇಮ್ಯುನಾಲಜಿ ವಿಷಯದಲ್ಲಿ ಸಂಶೋಧನೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    ಇದನ್ನೂ ಓದಿ: ಪ್ರಧಾನಿ ಪ್ರಯಾಣಕ್ಕೆ ಏರ್​ ಇಂಡಿಯಾ ಒನ್​: ಭಾರತಕ್ಕೆ ಶೀಘ್ರ 8500 ಕೋಟಿ ರೂ. ಮೌಲ್ಯದ 2 ವಿಮಾನಗಳು

    ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಲ್ಯಾಬ್‌ಗಳಿಗೆ ರೆಫರ್ ಮಾಡುವ ಸೋಂಕಿತರ ಆರ್‌ಟಿಪಿಸಿಆರ್ ಪರೀಕ್ಷೆ ದರವನ್ನು 2,000 ದಿಂದ 1,500 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ ನೇರವಾಗಿ ಖಾಸಗಿ ಲ್ಯಾಬ್‌ಗಳಿಗೇ ಹೋಗಿ ಈ ಪರೀಕ್ಷೆ ಮಾಡಿಸಿಕೊಂಡರೆ, ಅಲ್ಲಿ ವಿಧಿಸಲಾಗುತ್ತಿದ್ದ ದರವನ್ನು 3,000ದಿಂದ 2,500 ರೂ.ಗಳಿಗೆ ಇಳಿಸಲಾಗಿದೆ. ಹೊಸದಾಗಿ 20 ಲಕ್ಷ ರಾಪಿಡ್ ಆಂಟಿ ಜೆನ್ ಕಿಟ್ ಹಾಗೂ 18 ಲಕ್ಷ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‌ಗಳನ್ನು ಖರೀದಿ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

    ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್​ವೈ ಭಾಗಿಯಾಗ್ತಾರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts