More

    ಆರ್​ಟಿಒ ಅಧಿಕಾರಿಗಳಿಗೆ ಕಂಟ್ರೋಲ್ ರೂಂ ಡ್ಯೂಟಿ

    ಸಾರಿಗೆ ಇಲಾಖೆ ಮಾಹಿತಿಗೆ 24/7 ನಿಯಂತ್ರಣ ಕೊಠಡಿದಿನಕ್ಕೊಂದು ಕಚೇರಿಯಿಂದ ಅಧಿಕಾರಿಗಳ ನಿಯೋಜನೆ

    ಬೆಂಗಳೂರು: ಕರೊನಾ ಹರಡುವಿಕೆ ತಡೆಯಲು ಹೊರ ರಾಜ್ಯದಿಂದ ಆಗಮಿಸುವ ಪ್ರಯಾಣಿಕ ವಾಹನಗಳ ನಿಯಂತ್ರಣ ಹಾಗೂ ಸರಕು ಸಾಗಣೆ ವಾಹನಗಳ ಸುಗಮ ಸಂಚಾರಕ್ಕಾಗಿ ಸಾರಿಗೆ ಇಲಾಖೆ 24/7 ನಿಯಂತ್ರಣ ಕೊಠಡಿ ಆರಂಭಿಸಿದ್ದು, ದಿನಕ್ಕೊಂದು ಆರ್​ಟಿಒ ಕಚೇರಿಯಿಂದ ಇಬ್ಬರು ಅಧಿಕಾರಿಗಳು ಕಂಟ್ರೋಲ್ ರೂಂ ನಿರ್ವಹಣೆ ಜವಾಬ್ದಾರಿ ನಿರ್ವಹಿಸಬೇಕಿದೆ.

    ಸರ್ಕಾರದ ಆದೇಶದ ಮೇರೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ಆದರೆ, ಸರ್ಕಾರದ ಈ ಹೊಸ ಯೋಜನೆಗೆ ಸಾರಿಗೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆರ್​ಟಿಒ ಕಚೇರಿಗಳಲ್ಲಿ ಈಗಾಗಲೇ ಸಿಬ್ಬಂದಿ ಕೊರತೆಯಿದ್ದು, ಇರುವವರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಇಂಥ ಪರಿಸ್ಥಿತಿಯಲ್ಲಿ ನಿಯಂತ್ರಣ ಕೊಠಡಿ ನಿರ್ವಹಣೆ ಜವಾಬ್ದಾರಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

    ಕರೊನಾ ನಿರ್ವಹಣೆಗಾಗಿ ಸರ್ಕಾರವೇ ಆರಂಭಿಸಿದ್ದ ರಾಜ್ಯ ಹಾಗೂ ಬಿಬಿಎಂಪಿ ಕೋವಿಡ್ ವಾರ್ ರೂಂಗಳನ್ನೇ ಮುಚ್ಚಲಾಗಿದೆ. ಸಾರಿಗೆ ಇಲಾಖೆಗೆ ಪ್ರತ್ಯೇಕ ಕಂಟ್ರೋಲ್ ರೂಂ ತೆಗೆಯುವ ಅಗತ್ಯವಿಲ್ಲ. ಇಲ್ಲಿಗೆ ಕರೆ ಮಾಡುವವರೆಲ್ಲ ಸೇವಾಸಿಂಧು, ಸಹಾಯಧನ ಸೇರಿ ಇನ್ನಿತರ ಸಮಸ್ಯೆಗಳ ಕುರಿತು ಮಾಹಿತಿ ಕೇಳುತ್ತಾರೆ. ಎಆರ್​ಟಿಒ ಅಥವಾ ಎಸ್​ಡಿಎ/ಎಫ್​ಡಿಎಗಳು ಏನು ಮಾಹಿತಿ ಕೊಡಲು ಸಾಧ್ಯತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!

    ಪ್ರತಿನಿತ್ಯ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ, ಮಧ್ಯಾಹ್ನ 2ರಿಂದ ರಾತ್ರಿ 10 ಹಾಗೂ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ 3 ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ಬೆಂಗಳೂರು ವ್ಯಾಪ್ತಿಯಲ್ಲಿರುವ 10 ಆರ್​ಟಿಒ ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಬಿಸಿಡಿ ಎಂದು ಪಾಳಿಗೆ ನಿಯೋಜಿಸಿ ಆದೇಶಿಸಲಾಗಿದೆ.

    ಏರೋ ಇಂಡಿಯಾಕ್ಕೆ ಉತ್ತಮ ಪ್ರತಿಕ್ರಿಯೆ: ವಾರದಲ್ಲಿ 40 ಸಂಸ್ಥೆಗಳಿಂದ ಬುಕಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts