More

    ಏರೋ ಇಂಡಿಯಾಕ್ಕೆ ಉತ್ತಮ ಪ್ರತಿಕ್ರಿಯೆ: ವಾರದಲ್ಲಿ 40 ಸಂಸ್ಥೆಗಳಿಂದ ಬುಕಿಂಗ್

    ಗಿರೀಶ್ ಗರಗ

    ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನಕ್ಕೆ ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ಉತ್ಪನ್ನಗಳ ವೈಶಿಷ್ಟ್ಯವನ್ನು ಅನಾವರಣಗೊಳಿಸಲು ಈಗಾಗಲೇ 40 ಸಂಸ್ಥೆಗಳು ಮಳಿಗೆಗಳನ್ನು ಕಾಯ್ದಿರಿಸಿವೆ. 2021ರ ಫೆ.3ರಿಂದ 7ರವರೆಗೆ ಯಲಹಂಕ ವಾಯುನೆಲೆಯಲ್ಲಿ 13ನೇ ‘ಏರೋ ಇಂಡಿಯಾ’ ಆಯೋಜನೆಗೊಳ್ಳಲಿದೆ. ದೇಶ- ವಿದೇಶದ ರಕ್ಷಣಾ ಕ್ಷೇತ್ರ ಸೇರಿ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಿವಿಧ ರಿಯಾಯಿತಿ ನೀಡಲಾಗಿದೆ. ಆಯೋಜನೆ ಹೊಣೆ ಹೊತ್ತಿರುವ ‘ರಕ್ಷಣಾ ಪ್ರದರ್ಶನ ಸಂಸ್ಥೆ’ಯ (ಡಿಇಒ) ಈ ಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಏರೋ ಇಂಡಿಯಾ ವೆಬ್​ಸೈಟ್ ಆರಂಭಿಸಿದ 6 ದಿನಗಳಲ್ಲಿ 40 ಸಂಸ್ಥೆಗಳು ಮಳಿಗೆಗಳನ್ನು ಕಾಯ್ದಿರಿಸಿವೆ.

    ಪ್ರದರ್ಶನ ಲೇಔಟ್ ಬಿಡುಗಡೆ

    ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಯಾವ ಪ್ರದೇಶದಲ್ಲಿ ಏನೇನು ಇರಲಿದೆ ಎಂಬ ಪ್ರದರ್ಶನ ವಿನ್ಯಾಸ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪ್ರದರ್ಶನ ಮಳಿಗೆಗಳು, ಹೊರಾಂಗಣ ಪ್ರದರ್ಶನದ ಜಾಗ, ವಿಮಾನಗಳ ಹಾರಾಟ ಮತ್ತು ಪ್ರದರ್ಶನಕ್ಕೆ ಮೀಸಲಿಟ್ಟ ಜಾಗಗಳನ್ನು ವಿವರಿಸಲಾಗಿದೆ. ವಾಹನ ನಿಲುಗಡೆ ಸ್ಥಳ, ಆಹಾರ ಮಳಿಗೆಗಳು, ಜನರು ನಿಂತು ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುವ ಸ್ಥಳ ಸೇರಿ ಇನ್ನಿತರ ಎಲ್ಲ ವಿಷಯಗಳು ಲೇಔಟ್​ನಲ್ಲಿ ಉಲ್ಲೇಖಿಸಲಾಗಿದೆ.

    ಫ್ರಾನ್ಸ್, ಇಸ್ರೇಲ್, ಅಮೆರಿಕ, ಬ್ರಿಟನ್, ಉಕ್ರೇನ್ ಮತ್ತು ರಷ್ಯಾಗಳ 11 ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರದರ್ಶನಕ್ಕೆ ಜಾಗ ನೀಡುವಂತೆ ಅರ್ಜಿ ಸಲ್ಲಿಸಿವೆ. ಭಾರತದ ಮೂಲದ 29 ಸಂಸ್ಥೆಗಳು ಮಳಿಗೆಗಳನ್ನು ಕಾಯ್ದಿರಿಸಲು ಅರ್ಜಿ ಸಲ್ಲಿಸಿವೆ. ಈ ಎಲ್ಲ ಸಂಸ್ಥೆಗಳಿಗೂ ಮಳಿಗೆಗಳನ್ನು ನೀಡುವ ಕುರಿತು ಡಿಇಒ ನಿರ್ಧರಿಸಿದೆ.

    ಇದನ್ನೂ ಓದಿ:  ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದರೆ ಜೈಲು!

    12,359 ಚದರ ಮೀ. ಜಾಗ 

    ಪ್ರದರ್ಶನದಲ್ಲಿ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಇ’ ಎಂಬ 5 ಒಳಾಂಗಣ ಸಭಾಂಗಣಗಳಿರಲಿವೆ. ಅವುಗಳಲ್ಲಿ 12,359 ಚದರ ಮೀ. ವಿಸ್ತೀರ್ಣದ ಜಾಗವನ್ನು ಮಳಿಗೆಗಳಿಗಾಗಿ ಮೀಸಲಿಡಲಾಗುತ್ತಿದೆ. ಈವರೆಗೆ 76 ಚದರ ಮೀ. ವಿಸ್ತೀರ್ಣದ ಜಾಗವನ್ನು ಕಾಯ್ದಿರಿಸಲಾಗಿದೆ.

    ಇದನ್ನೂ ಓದಿ: ಪ್ರತಿಭಟನೆ ಹಿಂಸೆಗೆ ತಿರುಗಿಸುವ ಹುನ್ನಾರ: ಟ್ರ್ಯಾಕ್ಟರ್​ ಸುಟ್ಟು ಭಸ್ಮ ಮಾಡಿದ ಕಿಡಿಗೇಡಿಗಳು

    ಹೊರಾಂಗಣ ಬುಕಿಂಗ್ ಶೀಘ್ರ

    ಸದ್ಯ ಒಳಾಂಗಣ ಪ್ರದರ್ಶಕರಿಗೆ ಮಳಿಗೆಗಳನ್ನು ಕಾಯ್ದಿರಿಸಲಷ್ಟೇ ಅವಕಾಶ ನೀಡಲಾಗಿದೆ. ಇನ್ನೊಂದು ವಾರದೊಳಗೆ ಹೊರಾಂಗಣ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅವಕಾಶ ನೀಡಲಾಗುತ್ತದೆ. ಹೊರಾಂಗಣ ಪ್ರದರ್ಶನಕ್ಕಾಗಿಯೇ 3,761 ಚದರ ಮೀ. ಜಾಗವನ್ನು ಮೀಸಲಿಡಲಾಗುತ್ತಿದೆ. ಅದರ ಜತೆಗೆ ಏರ್​ಕ್ರಾಫ್ಟ್​ಗಳ ಪ್ರದರ್ಶನಕ್ಕೆ ಜಾಗ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಲಿದೆ.

    ಇದನ್ನೂ ಓದಿ: ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

    ಕಳೆದ ಬಾರಿ 403 ಪ್ರದರ್ಶಕರು

    2019ರಲ್ಲಿ ನಡೆದ 12ನೇ ಆವೃತ್ತಿಯ ‘ಏರೋ ಇಂಡಿಯಾ’ದಲ್ಲಿ 403 ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದವು. ಅದರಲ್ಲಿ ದೇಶದ 238 ಮತ್ತು ವಿದೇಶಗಳ 165 ಸಂಸ್ಥೆಗಳಿದ್ದವು. ಒಟ್ಟು 22 ದೇಶಗಳ ಸಂಸ್ಥೆಗಳು ಪಾಲ್ಗೊಂಡಿದ್ದವು. 61 ಏರ್​ಕ್ರಾಫ್ಟ್​ಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

    ಬೆಂಗಳೂರಿನಲ್ಲಿ ಶಾಲಾ ಶುಲ್ಕದ ಹೆಸರಲ್ಲಿ ಮಕ್ಕಳನ್ನು ಭಿಕ್ಷೆಗೆ ಕಳುಹಿಸುವ ದಂಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts