More

    ಆರ್​ಟಿಇ ಸೀಟು ಹಂಚಿಕೆ : ಜೂನ್ 22 ಕ್ಕೆ ಮೊದಲ ಲಾಟರಿ ಫಲಿತಾಂಶ

    ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯು 2021-2022ನೇ ಸಾಲಿನ ಆರ್​ಟಿಇ(ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ) ಸೀಟುಗಳ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಇಲಾಖೆ ವೆಬ್​ಸೈಟ್​ಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಅರ್ಜಿಗಳ ಸ್ಥಿತಿಗತಿ ತಿಳಿಯುವುದಕ್ಕೂ ಅವಕಾಶ ಮಾಡಿಕೊಟ್ಟಿದೆ.

    ಪರಿಷ್ಕೃತ ವೇಳಾಪಟ್ಟಿಯಂತೆ, ಈ ಹಿಂದೆ ಆರ್​ಟಿಇ ಸೀಟು ಪ್ರವೇಶಕ್ಕೆ ಸ್ವೀಕರಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. ನಂತರ ಆನ್​ಲೈನ್​ ತಂತ್ರಾಂಶದ ಮೂಲಕ ಜೂನ್ 22 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕಟಿಸಲಿದೆ. ಹೀಗೆ ಸೀಟು ದೊರೆತ ವಿದ್ಯಾರ್ಥಿಗಳು ಜೂನ್ 25 ರಿಂದ ಜುಲೈ 9 ರೊಳಗೆ ಶಾಲೆಗಳಲ್ಲಿ ದಾಖಲಾತಿ ಪಡೆಯಬಹುದು.

    ಇದನ್ನೂ ಓದಿ: ಮಲಗಿದ್ದ ಮಗುವಿನ ಗಂಟಲು ಕೊಯ್ದ ಕರೊನಾ ರೋಗಿ! ತಡರಾತ್ರಿ ನಡೆಯಿತು ದುರಂತ

    ಜುಲೈ 14 ರಂದು ಆನ್​ಲೈನ್​ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕಟವಾಗಲಿದೆ. ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಜುಲೈ 16 ರಿಂದ 26 ರೊಳಗೆ ದಾಖಲಾತಿ ಮಾಡಿಕೊಳ್ಳಬೇಕಿದೆ. ಶಾಲೆಗಳಲ್ಲಿ ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸಲು ಜುಲೈ 26 ಕೊನೆಯ ದಿನವಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಪಾಲಕರು ಇಲಾಖೆಯ ವೆಬ್​ಸೈಟ್​ – http://www.schooleducation.kar.nic.in/ ನೋಡಬಹುದು.

    ಶುಲ್ಕ ಮರುಪಾವತಿಗೆ 170 ಕೋಟಿ ರೂ. : ಆರ್​ಟಿಇ ಶುಲ್ಕ ಮರುಪಾವತಿ ಮಾಡಲು 2021-2022 ನೇ ಸಾಲಿಗೆ 700 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲನೇ ತ್ರೈಮಾಸಿಕ ಅನುದಾನವಾಗಿ 175 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಇದನ್ನು ಜಿಲ್ಲೆಗಳ ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮಾಡಿ, ಉಳಿಯುವ ಮೊತ್ತವನ್ನು 2020-21ನೇ ಸಾಲಿನ ಎರಡನೇ ಕಂತು ಪಾವತಿಸಲು ಬಳಸಿಕೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್​ ಸೂಚನೆ ನೀಡಿದ್ದಾರೆ.

    ಅಕ್ರಮವಾಗಿ ಗಡಿ ದಾಟುತ್ತಿದ್ದ ಐವರು ಬಾಂಗ್ಲಾದೇಶೀಯರ ಬಂಧನ

    ಸರ್ಕಾರಿ ನಿಯಮ ಪಾಲಿಸದೆ ಕಾನೂನು ಸಂರಕ್ಷಣೆ ಕಳೆದುಕೊಂಡ ಟ್ವಿಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts