ಸಿನಿಮಾ

ಆರ್‌ಟಿಇ: ಮೊದಲನೇ ಸುತ್ತಿನಲ್ಲಿ 5,105 ಮಕ್ಕಳಿಗೆ ಸೀಟು ಹಂಚಿಕೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 2023-24ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, 5,105 ಮಕ್ಕಳು ಫಲಾನುಭವಿಗಳಾಗಿದ್ದಾರೆ.

ರಾಜ್ಯಾದ್ಯಂತ ಒಟ್ಟಾರೆ 11,532 ಅರ್ಜಿಗಳು ಸಲ್ಲಿಕೆಯಾಗಿದ್ದು, ಲಾಟರಿ ಮೂಲಕ ಸೀಟು ಹಂಚಿಕೆ ನಡೆಸಿದೆ. ಅರ್ಹ 5,105 ಮಕ್ಕಳಿಗೆ ಸೀಟು ಸಿಕ್ಕಿದ್ದು, ಆಯ್ಕೆಯಾದ ಮಕ್ಕಳ ಮಾಹಿತಿಯನ್ನು ಪಾಲಕರ ಮೊಬೈಲ್ ಸಂಖ್ಯೆಗೆ ಶಿಕ್ಷಣ ಇಲಾಖೆಯು ರವಾನೆ ಮಾಡಲಿದೆ. ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಮೇ 29 ಕೊನೆಯ ದಿನವಾಗಿದೆ.

ಸೀಟು ಹಂಚಿಕೆಯಾಗುವ ಮೊದಲು ಪಾಲಕರು ಹಾಗೂ ಮಗುವಿನ ಎಲ್ಲ ದಾಖಲೆಗಳನ್ನು ಇಲಾಖೆಯ ಹಂತದಲ್ಲಿ ಸಂಪೂರ್ಣವಾಗಿ ಪರಿಶೀಲಿಸಿರುವುದರಿಂದ ಯಾವುದೇ ಕಾರಣಕ್ಕೂ ಆಡಳಿತ ಮಂಡಳಿಯವರು ದಾಖಲೆಗಳನ್ನು ಮರು ಪರಿಶೀಲನೆ ಮಾಡುವ ಅವಶ್ಯಕತೆ ಇಲ್ಲ. ಶಾಲಾ ಆಡಳಿತ ಮಂಡಳಿಯು ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ.

ಶಾಲಾ ಆಡಳಿತ ಮಂಡಳಿಯು ಆಯಾ ದಿನ ದಾಖಲಾದ ವಿದ್ಯಾರ್ಥಿಗಳ ವಿವರವನ್ನು ಕಡ್ಡಾಯವಾಗಿ ಇಲಾಖಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ದಾಖಲಿಸಬೇಕು. ಮಾಹಿತಿ ಅಪ್‌ಲೋಡ್ ಮಾಡದೇ ಇದ್ದಲ್ಲಿ ಮುಂದಿನ ಆಗು- ಹೋಗುಗಳಿಗೆ ಆಯಾ ಶಾಲಾ ಆಡಳಿತ ಮಂಡಳಿಯವರೇ ಜವಾಬ್ದಾರರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಎಚ್ಚರಿಕೆ ನೀಡಿದೆ.

ನಾವು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ… ಮತ್ತೆ ಪುಟಿದೇಳುತ್ತೇವೆ: ಬಸವರಾಜ ಬೊಮ್ಮಾಯಿ‌

ಮೈಸೂರಲ್ಲಿ ನಡುರಸ್ತೆಯಲ್ಲೇ ಅವ್ವ ಮಾದೇಶ್ ಆಪ್ತನ ಹತ್ಯೆ: ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ

ತಾಯಿ ಆಗುತ್ತಿರುವ ಸಂತೋಷದಲ್ಲಿ ನಟಿ ಸ್ನೇಹಾ ಆಚಾರ್ಯ; ಬೇಬಿ ಬಂಪ್ ಫೋಟೋ ವೈರಲ್​​

Latest Posts

ಲೈಫ್‌ಸ್ಟೈಲ್