More

    2ನೇ ಸುತ್ತಿನಲ್ಲಿ 1,016 ಆರ್‌ಟಿಇ ಸೀಟು ಹಂಚಿಕೆ

    ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ 2023-24ನೇ ಶೈಕ್ಷಣಿಕ ಸಾಲಿನ 2ನೇ ಸುತ್ತಿನ ಆರ್‌ಟಿಇ ಲಿತಾಂಶ ಪ್ರಕಟಿಸಿದ್ದು, 1,016 ಸೀಟುಗಳನ್ನು ಹಂಚಿಕೆ ಮಾಡಿದೆ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: 2,164 ವಿದ್ಯಾರ್ಥಿಗಳು ಅನುತ್ತೀರ್ಣ

    2ನೇ ಸುತ್ತಿಗೆ ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ 6,427 ಅರ್ಜಿಗಳನ್ನು ಲಾಟರಿ ಮೂಲಕ ಪರಿಗಣಿಸಲಾಗಿತ್ತು. ಈ ಪೈಕಿ 1,016 ಅರ್ಹ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪಾಲಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸೀಟು ಹಂಚಿಕೆ ಸಂದೇಶ ಕಳುಹಿಸಲಾಗಿದೆ.

     ಇದನ್ನೂ ಓದಿ: ವಯಸ್ಸಾಯ್ತೆಂದು ಖುಷಿ ಇಲ್ಲದೇ ಸಾಯ್ಬೇಕಾ? ಸಂಗಾತಿ ಬೇಕು ಅನಿಸಿದ್ರೆ ಯಾಕೆ ಪಡೆಯಬಾರದು?: ಆಶಿಶ್ ವಿದ್ಯಾರ್ಥಿ ಪ್ರಶ್ನೆ

    ಸೀಟು ಪಡೆದುಕೊಂಡಿರುವ ಮಕ್ಕಳು ಜೂ.15ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾಗುವಂತೆ ಸೂಚಿಸಿದೆ. ಸೀಟು ಹಂಚಿಕೆ ವಿವರಗಳನ್ನು ಇಲಾಖೆ ವೆಬ್‌ಸೈಟ್ www.schooleducation.kar.nic.in ಪ್ರಕಟಿಸಲಾಗಿದೆ ಎಂದು ಆಯಕ್ತರು ತಿಳಿಸಿದ್ದಾರೆ.

    ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ.. ಕಾಲಿನ ಮೂಳೆನೇ ಮುರಿದೋಯ್ತು!; ಕಣ್ಣೀರಿನ ಕಥೆ ಕೇಳಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts