More

    7 ದಾಖಲೆಗಳನ್ನು ಮುರಿದ ‘RRR’ ಟ್ರೈಲರ್; ‘ಬಾಹುಬಲಿ-2’ರ ದಾಖಲೆಯೂ ಚೂರಾಯ್ತು!

    3.7 ನಿಮಿಷದ ‘RRR’ ಚಿತ್ರದ ಟ್ರೈಲರ್ ಸದ್ಯ ಟ್ವಿಟರ್, ಫೇಸ್​ಬುಕ್, ವಾಟ್ಸ್​​ಆ್ಯಪ್ ಮತ್ತು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. 36 ಸೆಕೆಂಡ್​ಗಳ ಬಳಿ ನಟ ಜೂನಿಯರ್ ಎನ್ಟಿಆರ್ ಹುಲಿಯ ಜೊತೆ ಹೋರಾಡುತ್ತಿರುವ ದೃಶ್ಯದಿಂದ ಹಿಡಿದು 57 ಸೆಕೆಂಡ್ ಬಳಿ ಕುದುರೆ ಹತ್ತಿರುವ ನಟ ರಾಮ್ ಚರಣ್ ತೇಜ್ ಅವರ ಘರ್ಜನೆಯ ದೃಶ್ಯದವರೆಗೆ ಟ್ರೈಲರ್ ನೋಡಿದ ಎಲ್ಲಾ ಅಭಿಮಾನಿಗಳ ಮೈನವೀರೆಳುವಂತಿದೆ. ಇನ್ನು, ತುಂಬಾ ಸಾಂಪ್ರದಾಯಿಕ ಅವತಾರದಲ್ಲಿ ಕಾಣಿಸಿಕೊಂಡ ನಟಿಯರಾದ ಆಲಿಯಾ ಭಟ್ ಮತ್ತು ಶ್ರಿಯಾ ಶರಣ್ ಸಹ ತಮ್ಮ ಅಭಿಮಾನಿಗಳ ಗಮನ ಸಿಕ್ಕಾಪಟ್ಟೆ ಸೆಳೆದಿದ್ದಾರೆ. ಕೊನೆಯಲ್ಲಿ ‘RRR’ ಎಂಬ ಚಿತ್ರದ ಟೈಟಲ್ ಅನ್ನು ಬಿಡಿಸಿದ್ದು, ಆ ಪದಗಳ ಅರ್ಥ ತಿಳಿದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ‘RRR’ ಎಂದರೆ ರೌದ್ರಂ, ರಣಂ, ರುಧಿರಂ‘. ಜೊತೆಗೆ, ಅಭಿಮಾನಿಗಳಿಗೆ ಕಿಕ್ ಕೊಡುವ ಕೀರವಾಣಿ ಅವರ ಸಂಗೀತ ಅಂತು ನಿಜಕ್ಕೂ ಗ್ರೇಟ್ ಎಂಬ ಪ್ರಶಂಸೆ ಪಡಿದಿದೆ. ಇಷ್ಟೆಲ್ಲಾ ಹೈಲೈಟ್​ಗಳನ್ನು ಹೊಂದಿರುವ ‘RRR’ ಚಿತ್ರದ ಟ್ರೈಲರ್, ಅದೆಷ್ಟು ದಾಖಲೆಗಳನ್ನು ಚಿಂದಿ ಚಿಂದಿ ಮಾಡಿದೆ ಗೊತ್ತಾ?
    ‘RRR’ ಟ್ರೈಲರ್ ಮುರಿದ ದಾಖಲೆಗಳು: ರಾಜಮೌಳಿ ಸಿನಿಮಾ ಎಂದರೆ ಸಾಕು, ಅಭಿಮಾನಿಗಳಿಗೆ ನಿದ್ದೆ ಬರಲ್ಲ. ಏಕೆಂದರೆ, ರಾಜಮೌಳಿಯ ಸಿನಿ ಕರಿಯರ್​ನ ಟ್ರ್ಯಾಕ್ ಅಂತಹದ್ದು. ಸ್ಟೂಡೆಂಟ್ ನಂ 1, ಸಿಂಹಾದ್ರಿ, ಛತ್ರಪತಿ, ವಿಕ್ರಮಾರ್ಕುಡು, ಯಮದೊಂಗ, ಮರ್ಯಾದಾ ರಾಮನ್ನ, ಮಗಧೀರ, ಈಗಾ, ಬಾಹುಬಲಿ, ಬಾಹುಬಲಿ-2 ದಂತಹ ಉತ್ತಮ ಸಿನಿಮಾಗಳನ್ನು ಸಿನಿಪ್ರೇಕ್ಷಕರಿಗೆ ನೀಡಿದ ರಾಜಮೌಳಿಗೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಬೇಕು ಎನ್ನುವ ಒತ್ತಾಯ ಆರಂಭವಾಗಿತ್ತು. ಅದು, ರಾಜಮೌಳಿಗೆ ಇರುವ ಡಿಮ್ಯಾಂಡ್. ಹೀಗುರುವಾಗ, ರಾಜಮೌಳಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ, 400 ಕೋಟಿಯ ಬಜೆಟ್, ಸ್ವಾತಂತ್ರ್ಯ ಪೂರ್ವದ ಕಥೆ ವಿತ್ ಫಿಕ್ಷನ್ ಟಚ್, ಬಹು ತಾರಾಗಣ ಎಂಬ ಹಲವು ಸ್ಪೆಷಲ್ ಅಂಶಗಳನ್ನು ಹೊಂದಿರುವ ‘RRR’ ಸಿನಿಮಾದ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ತುಂಬಾನೆ ಇದ್ದವು. ಹಾಗಾಗಿ, ಕಣ್ಣ ಮೇಲೆ ರೆಪ್ಪೆ ಹಾಕದೆ ಈ ಸಿನಿಮಾದ ಟ್ರೈಲರ್ ನೋಡಲು ಕಾದಿದ್ದ ಅಭಿಮಾನಿಗಳು ಬಿಡುಗಡೆಯಾದ ತಕ್ಷಣ ಕುತೂಹಲದಿಂದ ನೋಡಿದ್ದಾರೆ. ಇದರಿಂದ ‘RRR’ ಸಿನಿಮಾ ಟ್ರೈಲರ್ ಒಂದಿಷ್ಟು ದಾಖಲೆಗಳನ್ನು 24 ಗಂಟೆಗಳಲ್ಲಿ ಉಡೀಸ್ ಮಾಡಿದೆ. ಹಾಗಾದರೆ, ‘RRR’ ಟ್ರೈಲರ್ ಮುರಿದ ದಾಖಲೆಗಳ ಪಟ್ಟಿ ಹೇಗಿದೆ?
    1. ತೆಲುಗಿನಲ್ಲಿ ಅತೀ ವೇಗವಾಗಿ 3 ಲಕ್ಷ ಲೈಕ್ಸ್ ಪಡೆದ ಮೊದಲ ಸಿನಿಮಾ ಟ್ರೈಲರ್ ‘RRR’. ಕೇವಲ 32 ನಿಮಿಷದಲ್ಲಿ ಈ ದಾಖಲೆ ಮಾಡಿದೆ ‘RRR’.
    2. ಇನ್ನು ತೆಲುಗಿನಲ್ಲಿ ಕೇವಲ 52 ನಿಮಿಷಗಳಲ್ಲಿ 4 ಲಕ್ಷ ಲೈಕ್ಸ್ ಪಡೆದು ಮತ್ತೊಂದು ದಾಖಲೆ ಮಾಡಿದ ‘RRR’ ಟ್ರೈಲರ್.
    3. ತೆಲುಗಿನಲ್ಲಿ 1.20 ಗಂಟೆ ಒಳಗೆ 5 ಲಕ್ಷ ಲೈಕ್ಸ್ ಪಡೆದ ಮೊದಲ ಟ್ರೈಲರ್ ಸಹ ‘RRR’ ಚಿತ್ರವೆ.
    4. ತೆಲುಗಿನಲ್ಲಿ 24 ಗಂಟೆಗಳ ಒಳಗೆ 1.24 ಮಿಲಿಯನ್ ಲೈಕ್ಸ್ ಪಡೆದ ಮೊದಲ ಸಿನಿಮಾದ ಟ್ರೈಲರ್ ಅಂದರೆ ಅದು ‘RRR’.
    5. 1.24 ಮಿಲಿಯನ್ ಲೈಕ್ಸ್ ಪಡೆದ ‘RRR’ ಟ್ರೈಲರ್ ಈ ಮೂಲಕ ಸೌತ್ ನಲ್ಲಿ 24 ಗಂಟೆ ಒಳಗೆ ಅತಿ ಹೆಚ್ಚು ಲೈಕ್ಸ್ ಪಡೆದ ಟ್ರೈಲರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. 1 ನೇ ಸ್ಥಾನದಲ್ಲಿ ನಟ ವಿಜಯ್ ಅವರ ಬಿಗಿಲ್ಸಿನಿಮಾ ಇದೆ.
    6. ಒಟ್ಟು ಐದೂ ಭಾಷೆಗಳಲ್ಲಿ ಸೇರಿಸಿ 50 ಮಿಲಿಯನ್ ವೀಕ್ಷಣೆಗಳನ್ನು ಭಾರತದಲ್ಲಿ ಪಡೆದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಟ್ರೈಲರ್ ‘RRR’.
    7. ತೆಲುಗಿನಲ್ಲಿ 24 ಗಂಟೆ ಒಳಗೆ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದ ಟ್ರೈಲರ್​ಗಳಲ್ಲಿ 2 ನೇ ಸ್ಥಾನ ಗಿಟ್ಟಿಸಿಕೊಂಡಿದೆ ‘RRR’ (20.44 ಮಿಲಿಯನ್). ಮೊದಲ ಸ್ಥಾನದಲ್ಲಿ ಬಾಹುಬಲಿ-2′ ಇದೆ (21.81 ಮಿಲಿಯನ್).                                    7 ದಾಖಲೆಗಳನ್ನು ಮುರಿದ 'RRR' ಟ್ರೈಲರ್; 'ಬಾಹುಬಲಿ-2'ರ ದಾಖಲೆಯೂ ಚೂರಾಯ್ತು! 7 ದಾಖಲೆಗಳನ್ನು ಮುರಿದ 'RRR' ಟ್ರೈಲರ್; 'ಬಾಹುಬಲಿ-2'ರ ದಾಖಲೆಯೂ ಚೂರಾಯ್ತು!
    ಬಾಹುಬಲಿ-2′ ದಾಖಲೆಯನ್ನು ಮುರಿದ ‘RRR’ ಟ್ರೈಲರ್: ಒಟ್ಟು 7 ದಾಖಲೆಗಳನ್ನು ಮುರಿದ ‘RRR’ ಟ್ರೈಲರ್ ಇನ್ನು ಬಹಳಷ್ಟು ದಾಖಲೆಗಳನ್ನು ಪುಡಿ ಪುಡಿ ಮಾಡಲಿದೆ. ಈ ನಡುವೆ ಅತಿ ಹೆಚ್ಚು ಲೈಕ್ಸ್ ಪಡೆದ ವಿಭಾಗದಲ್ಲಿ 24 ಗಂಟೆ ಒಳಗೆ 1.24 ಮಿಲಿಯನ್ ಲೈಕ್ಸ್ ಪಡೆದು ರಾಜಮೌಳಿ ಅವರದ್ದೆ ಸಿನಿಮಾ ಆದ ಬಾಹುಬಲಿ-2′ ಚಿತ್ರದ ಟ್ರೈಲರ್​ ಅನ್ನು ಮೊದಲ ಸ್ಥಾನದಿಂದ ಹಿಂದಿಕ್ಕಿದೆ ‘RRR’ ಟ್ರೈಲರ್. ‘RRR’ ಟ್ರೈಲರ್​ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ದಿಲ್ ಖುಷ್ ಆಗಿರುವ ರಾಜಮೌಳಿ 7 ಜನವರಿ 2022 ರಂದು ಸಿನಿಮಾ ಬಿಡುಗಡೆ ಮಾಡಲು ನಾನು ಸೂಪರ್ ಎಕ್ಸೈಟ್ ಆಗಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಇದೀಗ, ಸಿನಿಮಾದ ಒಂದು ಝಲಕ್ ಟ್ರೈಲರ್ ಮೂಲಕ ನೋಡಿರುವ ಅಭಿಮಾನಿಗಳು ಸಹ ರಾಜಮೌಳಿ ಅವರಂತೆ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾದು ಕೂತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts