More

    ತಮಿಳುನಾಡಿನ ಸೌಂದರ್ಯವನ್ನು ಅನ್ವೇಷಿಸಿದ ಬಾಹುಬಲಿ ನಿರ್ದೇಶಕ; ಟ್ರಿಪ್​​ ವಿಡಿಯೋ ಹಂಚಿಕೊಂಡ ರಾಜಮೌಳಿ

    ತಮಿಳುನಾಡು: ಇತ್ತೀಚೆಗೆ ತಮ್ಮ ಕುಟುಂಬ ಸಮೇತ ತಮಿಳುನಾಡಿನ ದೇವಾಲಯಗಳಿಗೆ ಭೇಟಿ ನೀಡಿದ ಭಾರತದ ಖ್ಯಾತ ನಿರ್ದೇಶಕ ಎಸ್​​.ಎಸ್​​. ರಾಜಮೌಳಿ, ಅಲ್ಲಿನ ಅನುಭವದ ಕುರಿತು ಕಿರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ:ಮೀನುಗಾರಿಕೆ ಪ್ರೋತ್ಸಾಹಿಸಲು ಸರ್ಕಾರದಿಂದ ಸೌಲಭ್ಯ: ಉಪನಿರ್ದೇಶಕ ಬಾಬಾಸಾಬ್ ಮಾಹಿತಿ

    ಆರ್‌ಆರ್‌ಆರ್‌ ಚಿತ್ರವನ್ನು ನಿರ್ದೇಶಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ರಾಜಮೌಳಿ, ಭಾರತಕ್ಕೆ ಆಸ್ಕರ್ ತಂದುಕೊಡುವಲ್ಲಿ ಯಶಸ್ವಿಯಾದವರು. ಸದ್ಯ ಚಿತ್ರರಂಗದ ಮಾಸ್ಟರ್ ಸ್ಟೋರಿ ಟೆಲ್ಲರ್​​ ಎಂದೇ ಹೆಸರು ಗಳಿಸಿರುವ ಎಸ್​​ಎಸ್​​ಆರ್​​, ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ತೆರಳಿದ್ದರು. ಅನ್ಯ ಸೆಲೆಬ್ರಿಟಿಗಳಂತೆ ವಿದೇಶಗಳಿಗೆ ಪ್ರಯಾಣ ಬೆಳಸದೆ, ತಮಿಳುನಾಡಿನ ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸೌಂದರ್ಯವನ್ನು ಅನ್ವೇಷಿಸಿದ್ದಾರೆ.

    ಪ್ರವಾಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ರಾಜಮೌಳಿ, ತಮ್ಮ ಟ್ರಿಪ್​​ ಕುರಿತಾದ ಕಿರು ವೀಡಿಯೊವನ್ನು ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, “ನಾನು ಬಹಳ ಸಮಯದಿಂದ ಸೆಂಟ್ರಲ್​​ ತಮಿಳುನಾಡಿನಲ್ಲಿ ಪ್ರವಾಸ ಮಾಡಲು ಬಯಸಿದ್ದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಬೆಂಬಲಿಸಿದ ನನ್ನ ಮಗಳಿಗೆ ಧನ್ಯವಾದಗಳು. ನಾವು ಜೂನ್ ಕೊನೆಯ ವಾರದಲ್ಲಿ ಶ್ರೀರಂಗಂ, ದಾರಾಸುರಂ, ಬೃಹದೀಶ್ವರರ್ ಕೋಯಿಲ್, ರಾಮೇಶ್ವರಂ, ಕನಾಡುಕಥನ್, ತೂತುಕುಡಿ ಮತ್ತು ಮಧುರೈಗೆ ಭೇಟಿ ನೀಡಿದೆವು” ಎಂದು ಹೇಳಿದರು.

    ಇದನ್ನೂ ಓದಿ:ಮೀನುಗಾರಿಕೆ ಪ್ರೋತ್ಸಾಹಿಸಲು ಸರ್ಕಾರದಿಂದ ಸೌಲಭ್ಯ: ಉಪನಿರ್ದೇಶಕ ಬಾಬಾಸಾಬ್ ಮಾಹಿತಿ

    “ಪಾಂಡ್ಯರು, ಚೋಳರು, ನಾಯಕರ್‌ಗಳು ಮತ್ತು ಇತರ ಅನೇಕ ರಾಜರ ಸೊಗಸಾದ ವಾಸ್ತುಶಿಲ್ಪ, ಅದ್ಭುತ ಇಂಜಿನಿಯರಿಂಗ್ ಮತ್ತು ಆಳವಾದ ಆಧ್ಯಾತ್ಮಿಕ ಚಿಂತನೆಗಳು ನಿಜವಾಗಿಯೂ ಮೋಡಿ ಮಾಡುವಂತಿದ್ದವು. ಮಂತ್ರಕೂಡಂ, ಕುಂಭಕೋಣಂನಲ್ಲಿ ಉತ್ತಮವಾದ ಭೋಜನವಾಗಲಿ, ರಾಮೇಶ್ವರಂನಲ್ಲಿ ಕಾಕಾ ಹೋಟೆಲ್ ಮುರುಗನ್ ಮೆಸ್ ಆಗಲಿ, ಆಹಾರವು ಎಲ್ಲೆಡೆ ಅದ್ಭುತವಾಗಿತ್ತು. ನಾನು ಒಂದು ವಾರದಲ್ಲಿ 2-3 ಕೆಜಿ ತೂಕ ಹೆಚ್ಚಾಗಿರಬೇಕು. ಮೂರು ತಿಂಗಳ ವಿದೇಶಿ ಪ್ರವಾಸ ನಂತರ, ಈ ತಾಯ್ನಾಡಿನ ಪ್ರವಾಸವು ಉಲ್ಲಾಸದಾಯಕ ಮತ್ತು ಉನ್ನತಿಗೇರಿಸುವಂತಿದೆ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts