More

    ಆರ್​ಪಿಎಫ್​ 19,952 ಕಾನ್​​ಸ್ಟೆಬಲ್​ ಹುದ್ದೆಗಳಿಗೆ ಅರ್ಜಿ ಕರೆದಿದೆಯೇ? ಇಲಾಖೆ ಸ್ಪಷ್ಟನೆ ಬಳಿಕವೂ ಸೋಷಿಯಲ್​ ಮಿಡಿಯಾದಲ್ಲಿ ಸರ್ಚ್​ ಆಗ್ತಿರೋದೇಕೇ?

    ನವದೆಹಲಿ: ರೈಲ್ವೆ ಇಲಾಖೆ ದೇಶದಲ್ಲಿಯೇ ಅತಿ ಹೆಚ್ಚು ಜನರಿಗೆ ಉದ್ಯೋಗದಾತ ಸಂಸ್ಥೆ ಎಂಬುದರಲ್ಲಿ ವಿಶೇಷವೇನಿಲ್ಲ. ರೈಲ್ವೆ ರಿಕ್ರೂಟ್​ಮೆಂಟ್​ ಬೋರ್ಡ್​ (ಆರ್​ಆರ್​ಬಿ), ರೈಲ್ವೆ ರಿಕ್ರೂಟ್​ಮೆಂಟ್​ ಸೆಲ್​ (ಆರ್​ಆರ್​ಸಿ) ಮೊದಲಾದವುಗಳ ಮೂಲಕ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳನ್ನು ನೇಮಕಾತಿ ಮಾಡುತ್ತಲೇ ಇರುತ್ತದೆ.

    ಆದರೆ, ಇತ್ತೀಚೆಗೆ ರೈಲ್ವೆ ಸುರಕ್ಷತಾ ದಳದಲ್ಲಿ (ಆರ್​ಪಿಎಫ್​) 19,952 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ ಎಂಬ ಸುದ್ದಿ ಸೋಷಿಯಲ್​ ಮಿಡಿಯಾ ಹಾಗೂ ಕೆಲ ವೆಬ್​ಸೈಟ್​ಗಳಲ್ಲಿ ಹರಿದಾಡುತ್ತಿತ್ತು. ಇಲಾಖೆ ಗಮನಕ್ಕೆ ಬಂದ ಬಳಿಕ ಅಂಥ ಯಾವುದೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿಲ್ಲ, ಕಾನ್​ಸ್ಟೆಬಲ್​ ಹುದ್ದೆಗಳಿಗೆ ಅರ್ಜಿ ಕರೆದಿಲ್ಲ ಎಂದು ಖುದ್ದು ರೈಲ್ವೆ ಇಲಾಖೆಯೇ ಸ್ಪಷ್ಟನೆ ನೀಡಿತ್ತು.

    ಕೆಲ ದಿನಗಳ ಮಟ್ಟಿಗೆ ಇದರ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ. ಆದರೆ, ಗೂಗಲ್​ನಲ್ಲಿ ಆರ್​ಪಿಎಫ್​ ಕಾನ್​ಸ್ಟೆಬಲ್​ ಹುದ್ದೆಗಳ ನೇಮಕಾತಿ ಅಧಿಸೂಚನೆ ಶೋಧ ಮತ್ತೆ ಹೆಚ್ಚಾಗಿರುವುದು ಇಲಾಖೆ ತಲೆನೋವಿಗೆ ಕಾರಣವಾಗಿದೆ. ಇಷ್ಟಕ್ಕೂ ಹೀಗಾಗುತ್ತಿರುವುದೇಕೆ ಗೊತ್ತೆ?

    ಯಾವುದಾದರೂ ಉದ್ಯೋಗಕ್ಕೆ ಅಧಿಸೂಚನೆ ಪ್ರಕಟವಾಗಿದೆ ಎಂದರೆ ಸಾಕು, ಅದರೊಂದಿಗೆ ಮಧ್ಯವರ್ತಿಗಳು ಹುಟ್ಟಿಕೊಂಡು ಬಿಡ್ತಾರೆ. ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದುಕೊಂಡು ವಂಚಿಸುವ ಜಾಲ ಸಕ್ರಿಯವಾಗಿಬಿಡುತ್ತೆ. ನಕಲಿ ಅಥವಾ ಹಳೆಯ ಅಧಿಸೂಚನೆಯನ್ನೇ ಅಸಲಿ ಎಂದು ನಂಬಿಸಲು ನಕಲಿ ವೆಬ್​ಸೈಟ್​ಗಳಲ್ಲಿ ಅದನ್ನು ಪೋಸ್ಟ್​ ಮಾಡುತ್ತಾರೆ. ತಮ್ಮ ಸಂಪರ್ಕಕ್ಕೆ ಬಂದವರಿಗೆ ಇದೇ ಮಾಹಿತಿಯನ್ನು ನೀಡುತ್ತಾರೆ. ಹೀಗಾಗಿ ನಕಲಿ ಅಧಿಸೂಚನೆಗಾಗಿ ಹುಡುಕಾಟ ನಡೆಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಂದರೆ, ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರ ಎಂದೇ ಅರ್ಥ. ಇಂಥ ಜಾಲಕ್ಕೆ ಸಿಲುಕದೇ ಎಚ್ಚರದಿಂದ ಇರುವುದು ಒಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts