More

    ಐಪಿಎಲ್​ ಟೂರ್ನಿಗೆ ಆರ್​ಸಿಬಿ ತಂಡದ ಹೊಸ ಜೆರ್ಸಿ ಅನಾವರಣ

    ಬೆಂಗಳೂರು: ಮುಂಬರುವ ಐಪಿಎಲ್​ 13ನೇ ಆವೃತ್ತಿಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಸಮವಸ್ತ್ರವನ್ನು ಸೋಮವಾರ ಅನಾವರಣಗೊಳಿಸಲಾಗಿದೆ. ಈಗಾಗಲೆ ‘ಈ ಸಲ ಕಪ್​ ನಮ್ದೇ’ ಎಂದು ಮತ್ತೊಮ್ಮೆ ಘೋಷವಾಕ್ಯ ಆರಂಭಿಸಿರುವ ಆರ್​ಸಿಬಿ ಅಭಿಮಾನಿಗಳು ಈ ಹೊಸ ಜೆರ್ಸಿಯಿಂದಲಾದರೂ ಪ್ರಶಸ್ತಿ ಗೆಲುವಿನ ಅದೃಷ್ಟ ಒಲಿಯುವ ನಿರೀಕ್ಷೆಯಲ್ಲಿದ್ದಾರೆ.

    ಕೆಂಪು ಮತ್ತು ಕಪ್ಪು ಬಣ್ಣದ ಹೊಸ ಜೆರ್ಸಿಯ ವಿನ್ಯಾಸವನ್ನು ಆರ್​ಸಿಬಿ ತಂಡ ಸೋಮವಾರ ಟ್ವಿಟರ್​ನಲ್ಲಿ ಬಿಡುಗಡೆಗೊಳಿಸಿದೆ. ತಂಡದ ನಾಯಕ ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್, ಪಾರ್ಥಿವ್​ ಪಟೇಲ್​, ಯಜುವೇಂದ್ರ ಚಾಹಲ್​ ಮತ್ತು ಉಮೇಶ್​ ಯಾದವ್​ ಹೊಸ ಜೆರ್ಸಿ ತೊಟ್ಟು ಪೋಸ್​ ನೀಡಿದ್ದಾರೆ.

    ಜೆರ್ಸಿಯ ತೋಳಿನ ತುದಿಯಲ್ಲಿ ಈ ಬಾರಿ ಚಿನ್ನದ ಬಣ್ಣದ ಪಟ್ಟಿ ಇದೆ. ತಂಡದ ಹೊಸ ಲಾಂಛನವನ್ನು ಹೊಟ್ಟೆಯ ಭಾಗದಲ್ಲಿ ತೆಳುವಾಗಿ ಚಿತ್ರಿಸಲಾಗಿದೆ.

    ಇದನ್ನೂ ಓದಿ: ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ಬದಲು ಕಣಕ್ಕಿಳಿಯಲಿದೆ ಆರ್​ಸಿಬಿ?

    ‘ಇದು ಕೆಂಪು ಮತ್ತು ಗೋಲ್ಡ್​ ಬಣ್ಣದ ಜೆರ್ಸಿ ಹಾಕುವ ಸಮಯ. ಸವಾಲುಗಳನ್ನು ಎದುರಿಸಿ ದಿಟ್ಟವಾಗಿ ಆಡಿ. ನಮ್ಮ ಎಲ್ಲ ಆಟಗಾರರೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದೇವೆ’ ಎಂದು ಆರ್​ಸಿಬಿ ತಂಡ ಟ್ವಿಟರ್​ನಲ್ಲಿ ಬರೆದುಕೊಂಡು ಹೊಸ ಜೆರ್ಸಿ ಅನಾವರಣಗೊಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts