ಜೇವೂರ ಅಂಗನವಾಡಿ ಅವಾಂತರ: ಕೊಳೆತ ಮೊಟ್ಟೆಗಳ ವಿತರಣೆ, ಮಕ್ಕಳ ಜೀವದ ಜತೆ ಚೆಲ್ಲಾಟ

Jevoor Anganwadi

ವಿಜಯಪುರ: ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಯೋಜನೆ ರೂಪಿಸಿದರೆ, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಹಣದ ಲಾಲಸೆಗೆ ಮುಗ್ಧ ಮಕ್ಕಳು ಕೊಳೆತ ಮೊಟ್ಟೆ ತಿನ್ನುವ ಪರಿಸ್ಥಿತಿ ಬಂದೊದಗಿದೆ.

ಝಳಕಿ ಸಮೀಪದ ಜೇವೂರ ಗ್ರಾಮದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆಗಳನ್ನು ವಿತರಿಸುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಲಿಂಗಾಯತ ಸಮುದಾಯ!; ಮಾನ ನಷ್ಟ ಮೊಕದ್ದಮೆ ಹೂಡುವುದಾಗಿ ಟ್ರಸ್ಟ್ ನಿಂದ ಎಚ್ಚರಿಕೆ

Jevoor Anganwadi 2

ಅಂಗನವಾಡಿ ಕೇಂದ್ರ ಮಕ್ಕಳಿಗೆ ಪೌಷ್ಟಿಕಾಂಶ ಇಲ್ಲದ ಆಹಾರ ನೀಡುತ್ತಿರುವುದು ಜೇವೂರ ಗ್ರಾಮದ ಗ್ರಾಮಸ್ಥರ ಗಮನಕ್ಕೆ ಬಂದಾಗ ಅದನ್ನು ನೋಡಿ, ಒಂದು ಕ್ಷಣ ಗ್ರಾಮಸ್ಥರು ದಂಗಾದರು. ಕೂಡಲೆ ಅಲ್ಲಿನ ಅಕ್ಕಪಕ್ಕದ ಮಹಿಳೆಯರು ಸೇರಿ ಅಂಗನವಾಡಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದರು.

ಈ ಬಗ್ಗೆ ಅಂಗನವಾಡಿ ಸಹಾಯಕಿಯನ್ನು ವಿಚಾರಿಸಲಾಗಿ ತಮಗೆ ಮೇಲಿಂದ ಇಂಥದ್ದೇ ಮೊಟ್ಟೆ ಕೊಟ್ಟಿದ್ದಾರೆ ನಾ ಏನ್ ಮಾಡಲಿ, ನಾ ಮನೆಯಿಂದ ತಂದಿಲ್ಲ, ಎಂದು ವಾದ ಮಾಡುತ್ತಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ‌.

Jevoor Anganwadi 1

ಜಿಪಂ ಸಿಇಒ ತ್ವರಿತ ಕ್ರಮ

ಪ್ರಕರಣಕ್ಕೆ ಸಂಬಂಧಿಸಿದಂತೆ “ವಿಜಯವಾಣಿ” ಜಿಪಂ ಸಿಇಒ ರಾಹುಲ್ ಶಿಂಧೆ ಅವರ ಗಮನಕ್ಕೆ ತರಲಾಗಿ, ತ್ವರಿತವಾಗಿ ವಿಚಾರಿಸಿ ಸಂಬಂಧಿಸಿದ ಅಧಿಕಾರಿಗೆ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದರಲ್ಲದೇ ಗುತ್ತಿಗೆದಾರರ ಮೇಲೆ ಎಫ್ಐಆರ್ ದಾಖಲಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಇಒ ಅವರ ನಡೆ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು. ಇದನ್ನೂ ಓದಿ: ನಿಮ್ಮಿಂದ ನಾವಿದನ್ನು ನಿರೀಕ್ಷಿಸಿರಲಿಲ್ಲ ಎಂದವರಿಗೆ ಪ್ರಧಾನಿ ಜತೆಗಿನ ಫೋಟೋ ಶೇರ್​ ಮಾಡಿ ನವ್ಯಾ ತಿರುಗೇಟು!

ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು:ಶೋಭಾ ಕರಂದ್ಲಾಜೆ

AIADMK ಅಭ್ಯರ್ಥಿಯಿಂದ ನಕಲಿ ಎ ಫಾರ್ಮ್, ಬಿ ಫಾರ್ಮ್ ಸಲ್ಲಿಕೆ; ಬೆಂಗಳೂರಲ್ಲಿ ಎಫ್ಐಆರ್ ದಾಖಲು

ಕುಡಿಯುವುದಕ್ಕೆ ಹಣ ಕೊಡಲು ನಿರಾಕರಣೆ; ಇಟ್ಟಿಗೆಯಿಂದ ತಂದೆಯನ್ನು ಹತ್ಯೆ ಮಾಡಿದ ಮಗ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…