More

    AIADMK ಅಭ್ಯರ್ಥಿಯಿಂದ ನಕಲಿ ಎ ಫಾರ್ಮ್, ಬಿ ಫಾರ್ಮ್ ಸಲ್ಲಿಕೆ; ಬೆಂಗಳೂರಲ್ಲಿ ಎಫ್ಐಆರ್ ದಾಖಲು

    ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಅಭ್ಯರ್ಥಿ ಬೆಂಗಳೂರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕುಮಾರ್ ಕಣ್ಣನ್ ಎಂಬುವರು ನಕಲಿ ಎ ಫಾರ್ಮ್ ಹಾಗೂ ಬಿ ಫಾರ್ಮ್ ಸಲ್ಲಿಸಿದ ಆರೋಪಿದ ಮೇಲೆ ಎಫ್ಐಆರ್ ದಾಖಲಾಗಿದೆ.

    ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯೆಂದು ಕುಮಾರ್ ಕಣ್ಣನ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಸಲ್ಲಿಸಿದ್ದ ಎ ಫಾರ್ಮ್ ಹಾಗೂ ಬಿ ಫಾರ್ಮ್ ನಲ್ಲಿ ಓ ಪನ್ನೀರ್ ಸೆಲ್ವಂ ಸಹಿ ಇತ್ತು. ಆದರೆ ಸದ್ಯ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಇದ್ದಾರೆ. ಹೀಗಾಗಿ ಕುಮಾರ್ ಕಣ್ಣನ್ ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಿದ ಚುನಾವಣಾ ಆಯೋಗ, ವಂಚಿಸಲು ಯತ್ನಿಸಿದ ಆರೋಪದಲ್ಲಿ ಕುಮಾರ್ ಕಣ್ಣನ್ ವಿರುದ್ದ ದೂರು ದಾಖಲಿಸಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಯಾಚುಲರ್ಸ್​​ಗೆ ಯಾಕೆ ಬಾಡಿಗೆಗೆ ಮನೆ ಕೊಡಲ್ಲ?:ಈ ಸುದ್ದಿ ಓದಿ… 
    ಕಾಟನ್ ಪೇಟೆ ಪೊಲೀಸ್ ಠಾಣೆಗೆ ರಿಟರ್ನಿಂಗ್ ಅಫೀಸರ್​ನಿಂದ ದೂರು ದಾಖಲಾಗಿದೆ. ಠಾಣೆಯಲ್ಲಿ ಕುಮಾರ್ ಕಣ್ಣನ್ ಮೇಲೆ ಎಫ್ ಐಆರ್ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

    ಎ ಫಾರ್ಮ್ ಎಂದರೇನು?: ಸ್ವಘೋಷಿತವಾಗಿ ತಮ್ಮ ವಿವರಗಳನ್ನು ಅಭ್ಯರ್ಥಿಗಳು ಎ ಫಾರಂ ಮೂಲಕವಾಗಿ ತಿಳಿಸುತ್ತಾರೆ.

    ಬಿ ಫಾರ್ಮ್ ಎಂದರೆನು?: ಒಂದು ನಿರ್ಧಿಷ್ಟ ಪಕ್ಷವು ಈ ಅಭ್ಯರ್ಥಿ ನಮ್ಮ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈತ ನಮ್ಮ ಪಕ್ಷದ ಅಭ್ಯರ್ಥಿ ಎಂದು ಪಕ್ಷದ ಕಡೆಯಿಂದ ಅಧಿಕೃತವಾಗಿ ಚುನಾವಣಾ ಸಮಿತಿಗೆ ನೀಡುವುದೇ ಬಿ ಫಾರಂ ಆಗಿದೆ.

    ಸಿ ಫಾರ್ಮ್ ಎಂದರೇನು : ಒಂದು ನಿರ್ಧಿಷ್ಟ ಪಕ್ಷದಿಂದ ಕೊನೆಯ ಹಂತದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವ ಸಂದರ್ಭ ಬಂದರೆ ಪಕ್ಷದ ಕಡೆಯಿಂದಲೇ ನೀಡುವಂತದ್ದು ಸಿ ಫಾರಂ ಆಗಿದೆ.

    ಮಲ್ಲಿಕಾರ್ಜುನ ಖರ್ಗೆ‌ ಕೂಡಲೇ ಮೋದಿಯವರ ಬಳಿ ಕ್ಷಮೆ‌ ಕೇಳಬೇಕು:ಶೋಭಾ ಕರಂದ್ಲಾಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts