More

    ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಶ್ರೇಷ್ಠ ಸ್ಥಾನ

    ಹಿರಿಯೂರು: ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಶ್ರೇಷ್ಠ ಸ್ಥಾನವಿದೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಪ್ರೇಮಕುಮಾರ್ ಹೇಳಿದರು.

    ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರೋಟರಿ ಸಂಸ್ಥೆ ಸುವರ್ಣ ಮಹೋತ್ಸವ ಅಂಗವಾಗಿ ಮಂಗಳವಾರ ರೆಡ್‌ಕ್ರಾಸ್ ಸಂಸ್ಥೆ-ಗೂರಜ್ಜನ

    ವಂಶಸ್ಥರು ಅಮ್ಮನಹಟ್ಟಿ ಸಹಯೋಗದಲ್ಲಿ ಉಚಿತ ಆಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಉಳಿದೆಲ್ಲ ದಾನಗಳಲ್ಲಿ ಮನುಷ್ಯನನ್ನು ತೃಪ್ತಿಪಡಿಸುವುದು ಅಸಾಧ್ಯ ಎಂದರು.

    ಇನ್ನೂ ಸ್ವಲ್ಪ ಕೊಡಬಹುದಿತ್ತು ಎಂಬ ಭಾವನೆ ಬರಬಹುದು. ತುಸು ಕೊಟ್ಟರೆ ಬೇಡ ಎನ್ನುವುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಒಂದು ಹಂತಕ್ಕೆ ತೃಪ್ತಿ ಎಂಬುದಿದೆ.

    ಸಾಕು ಎಂಬ ಶಬ್ದ ಆತ್ಮ ಸಾಕ್ಷಿಯಾಗಿ ಹೊರಬರುತ್ತದೆ. ಹಸಿವಿಗೆ ಸಮನಾದ ದುಃಖ, ರೋಗ ಇಲ್ಲ. ಅನ್ನವು ಪ್ರಾಣವನ್ನು ಉಳಿಸುವುದರಿಂದ ಅನ್ನದಾನವು ಪ್ರಾಣದಾನಕ್ಕೆ ಸಮಾನ. ದಾನದ ಫಲವನ್ನೂ ಕೊಡುವಂತಹುದು ಎಂದರು.

    ರೋಟರಿ ಮಾಜಿ ಅಧ್ಯಕ್ಷ ಕಿರಣಕುಮಾರ್ ಮಾತನಾಡಿ, ಕರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ನೆರವಾಗಲು ಉಚಿತ ಆಹಾರ ವಿತರಣೆಗೆ ಚಾಲನೆ ನೀಡಲಾಗಿತ್ತು.

    ಸತತ 3 ವರ್ಷದಿಂದ ಶುಚಿ-ರುಚಿಯಾದ ಆಹಾರ ವಿತರಿಸಲಾಗಿದೆ. ಪ್ರಸಕ್ತ ವರ್ಷ ವಾರದ ನಾಲ್ಕು ದಿನ ಮುಂದುವರಿಸಲಾಗುವುದು ಎಂದು ತಿಳಿಸಿದರು.

    ರೋಟರಿ ಸಂಸ್ಥೆ ಅಧ್ಯಕ್ಷ ಡಿ.ದೇವರಾಜಮೂರ್ತಿ, ಕಾರ್ಯದರ್ಶಿ ಜೋಗಪ್ಪ, ಎಚ್.ಎಸ್.ಸುಂದರರಾಜ್, ರೋ. ವೆಂಕಟೇಶ್ (ಎಲ್‌ಎನ್‌ಎಸ್)

    ಪದಾಧಿಕಾರಿಗಳಾದ ಎಚ್.ವೆಂಕಟೇಶ್, ಎಂ.ಎಸ್.ರಾಘವೇಂದ್ರ, ಕಿರಣಕುಮಾರ್, ಶಶಿಕಲಾ ರವಿಶಂಕರ್, ಪರಮೇಶ್ವರ್ ಭಟ್,

    ಶಿವಕುಮಾರ್, ನಾರಾಯಣಾಚಾರ್, ರವಿಕುಮಾರ್, ವಸಂತ ಕುಮಾರ್, ಕೌಶಿಕ್, ವಿಕಾಸ್ ಜೈನ್, ಸುನೀಲ್, ಜಗದೀಶ್, ರಂಗದಾಸಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts