More

    ಸಮಾಜಮುಖಿ ಕಾರ್ಯಕ್ಕಾಗಿ ರೋಟರಿ ಕ್ಲಬ್

    ಸಿಂಧನೂರು: ರೋಟರಿ ಕ್ಲಬ್ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯವಾಗಿದೆ. ಅಧಿಕಾರದ ಆಸೆ, ಸ್ವಾರ್ಥಕ್ಕಿಂತ ಸೇವೆ ಮನೋಭಾವ ಮುಖ್ಯ ಎಂದು ರಾಯಚೂರು ಜಿಲ್ಲಾ ರೋಟರಿ ಕ್ಲಬ್ ನಿಕಟಪೂರ್ವ ಗೌರ‌್ನನರ್ ಕೆ.ಮುನಿಗಿರೇಶ ಹೇಳಿದರು.

    ನಗರದ ಐಎಂಎ ಹಾಲ್‌ನಲ್ಲಿ ಹಮ್ಮಿಕೊಂಡ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರೋಟರಿ ಸಂಸ್ಥೆ ಬೆಳೆದಿದ್ದು ಸಮಾಜಮುಖಿ ಕಾರ್ಯಕ್ಕಾಗಿ. ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆ ದೊಡ್ಡ ಪಾತ್ರ ನಿರ್ವಹಿಸಿದೆ. ಇಂತಹ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವುದೇ ಹೆಮ್ಮೆಯ ಸಂಗತಿ ಎಂದರು.

    ಸಮಾಜದಲ್ಲಿ ಸೇವೆ ಮಾಡಲು ರೋಟರಿ ಕ್ಲಬ್ ಅವಕಾಶ

    ರೋಟರಿ ಕ್ಲಬ್ ನೂತನ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ ಮಾತನಾಡಿ, ಸಮಾಜದಲ್ಲಿ ಸೇವೆ ಮಾಡಲು ರೋಟರಿ ಸಂಸ್ಥೆ ಹಲವು ಅವಕಾಶಗಳನ್ನು ಕಲ್ಪಿಸಲಿದೆ. ಈಗ ಸಿಕ್ಕಿರುವ ಪದವಿಯನ್ನು ನಿರೀಕ್ಷೆಗೆ ಮೀರಿ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಎಂದರು.

    ಇದನ್ನೂ ಓದಿ: ಬಿಪಿಎಲ್ ಕಾರ್ಡ್​ದಾರರ ಗಮನಕ್ಕೆ, ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪ್ರೋಟಿನ್ ಧಾನ್ಯ

    ತಹಸೀಲ್ದಾರ್ ನರಸಪ್ಪ ಸಾಲಗುಂದ, ರೋಟರಿ ಕ್ಲಬ್‌ನ ಡಾ.ಚನ್ನನಗೌಡ ಪಾಟೀಲ್, ರಂಗಲಿಂಗನಗೌಡ, ಸಂಕೇತ ಅನಿಲರಾಜ, ರೋಟರಿ ಕ್ಲಬ್ ಕಾರ್ಯದರ್ಶಿ ಲಿಂಗರಾಜ ಗೋಗೆರಿ, ಉಪಾಧ್ಯಕ್ಷ ಸಿದ್ದು, ಖಜಾಂಚಿ ಶ್ರೀಧರ, ಬಷೀರ್ ಎತ್ಮಾರಿ, ಡಾ.ಶರಣಬಸವ ಬೆಳವಾಟ, ಮಹಾಂತೇಶ ಸಿದ್ದಾಂತಿಮಠ, ಯಶವಂತ, ಉಮೇಶ, ಚನ್ನಬಸವ ಸಜ್ಜನ್, ಅಶೋಕ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts