More

    ಬಿಪಿಎಲ್ ಕಾರ್ಡ್​ದಾರರ ಗಮನಕ್ಕೆ, ಇದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪ್ರೋಟಿನ್ ಧಾನ್ಯ

    ಅಕ್ಕಿಆಲೂರ: ಸರ್ಕಾರದಿಂದ ಗ್ರಾಮೀಣ ಪ್ರದೇಶದ ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಸೇರಿಸಲಾಗುತ್ತಿದೆ ಎಂಬ ವದಂತಿ ಹರಡುತ್ತಿದ್ದು, ಆದರೆ, ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪ್ರೋಟಿನ್ ಧಾನ್ಯ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

    ಬಿಪಿಎಲ್ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರಿಗೂ ಸರ್ಕಾರ ಪ್ರತಿ ತಿಂಗಳು ನೀಡುವ 5 ಕೆಜಿ ಅಕ್ಕಿಯಲ್ಲಿ ಅಲ್ಲಲ್ಲಿ ಕಂಡು ಬರುವ ಬಿಳಿ ಬಣ್ಣದ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಭಾವಿಸಿ ಅನೇಕರು ತಿಪ್ಪೆಗೆ ಎಸೆಯುತ್ತಿದ್ದಾರೆ. ಮತ್ತೆ ಕೆಲವರು ಅಕ್ಕಿಯನ್ನು ತೊಳೆಯುವಾಗ ಮೇಲೆ ತೆಲುವ ಬಿಳಿ ಅಕ್ಕಿಯನ್ನು ತೆಗೆದು, ಇನ್ನುಳಿದ ಸಾಮಾನ್ಯ ಅಕ್ಕಿಯಿಂದ ಅನ್ನ ಮಾಡುತ್ತಿದ್ದಾರೆ. ಇದು ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

    ಪ್ರತಿ ತಿಂಗಳು ಪಡಿತರ ರೇಷನ್​ನಲ್ಲಿ ಅಕ್ಕಿ ವಿತರಿಸಿದಾಗಲೆಲ್ಲ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಎಂಬ ವದಂತಿಗೆ ಕಿವಿ ಕೊಡುತ್ತಿರುವ ಕೆಲವರು, ಬಿಳಿ ಅಕ್ಕಿ ತೆಗೆದು ಹಾಕುತ್ತಿದ್ದಾರೆ. ಆದರೆ, ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪ್ರೋಟಿನ್ ಅಕ್ಕಿ ಎಂದು ಸಾರ್ವಜನಿಕರಿಗೆ ತಿಳಿಹೇಳುವಲ್ಲಿ ಪಡಿತರ ವಿತರಣೆ ಕೇಂದ್ರದ ಸಿಬ್ಬಂದಿ ಸುಸ್ತಾಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ:

    ಇತ್ತ ಪ್ರತಿ ತಿಂಗಳು ಪಡಿತರ ಅಕ್ಕಿ ನೀಡುತ್ತಿದ್ದಂತೆ, ಅತ್ತ ಅಕ್ಕಿ ಪಡೆದ ಕೆಲವರು ‘ರೇಷನ್​ನಲ್ಲಿ ಪ್ಲಾಸ್ಟಿಕ್ ಅಕ್ಕಿ ಬಂದಿವೆ’ ಎಂದು ಬಿಳಿ ಅಕ್ಕಿ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ಪಡಿತರ ಅಕ್ಕಿ ಬಳಿಕೆದಾರರು, ಬಿಳಿ ಅಕ್ಕಿ ತೆಗೆದು ಇನ್ನುಳಿದ ಅಕ್ಕಿ ಬಳಕೆ ಮಾಡುತ್ತಿರುವುದು ವಿಪರ್ಯಾಸ.

    ಚೆಲ್ಲದಿರಿ ಅದು ಮೌಲ್ಯಯುತ ಅಕ್ಕಿ:

    ಸರ್ಕಾರ ಒಂದು ಕ್ವಿಂಟಾಲ್ ಅಕ್ಕಿಗೆ ಒಂದು ಕೆಜೆ ಪ್ರೋಟಿನ್ ಧಾನ್ಯ ಸೇರ್ಪಡೆ ಮಾಡುತ್ತಿದೆ. ಆ ಮೂಲಕ ಮಕ್ಕಳು ಮತ್ತು ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಬಲವರ್ಧನೆಗೆ ಮುಂದಾಗಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿದೆ. ಪಡಿತರದಲ್ಲಿ ನೀಡುವ ಅಕ್ಕಿಯಿಂದ ರುಚಿಕರ, ಸ್ವಾದಿಷ್ಟ ಊಟ ಜನತೆಗೆ ದೊರೆಯಲಿ ಎಂಬ ಮಹತ್ವಾಕಾಂಕ್ಷೆ ಯೋಜನೆ ಇಟ್ಟುಕೊಂಡು ಸರ್ಕಾರ ಅಕ್ಕಿಯಲ್ಲಿ ಪ್ರೋಟಿನ್ ಅಕ್ಕಿ ಸೇರಿಸುತ್ತಿದೆ. ಇಂತಹ ಮೌಲ್ಯಯುತ ಅಕ್ಕಿಯನ್ನು ತಪ್ಪು ತಿಳಿವಳಿಕೆಯಿಂದ ಚೆಲ್ಲದಿರಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮನವಿ ಮಾಡಿದೆ.

    ಅಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬರುತ್ತಿದೆ ಎಂದು ಸಾರ್ವಜನಿಕರಿಂದ ದೂರ ಬರುತ್ತಿದೆ. ನಾವು ಜನರಿಗೆ ತಿಳಿ ಹೇಳೀದ್ದೇವೆ. ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರ ಪ್ರೋಟೀನ್ ಅಕ್ಕಿಯನ್ನು ಸೇರಿಸುತ್ತಿದೆ. ಪ್ರೋಟಿನ್ ಅಕ್ಕಿಯನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಭಾವಿಸಿ ತೆಗೆದು ಹಾಕಬಾರದು.

    | ಆನಂದ ರಾಹಳ, ಆಹಾರ ಇಲಾಖೆ ಶಿರಸ್ತೇದಾರ್, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts