More

    ಜೋ ರೂಟ್ ದಾಖಲೆಯ ಶತಕ, ಇಂಗ್ಲೆಂಡ್ ಭಾರಿ ಮುನ್ನಡೆ

    ಗಾಲೆ: ನಾಯಕ ಜೋ ರೂಟ್ (168* ರನ್, 254 ಎಸೆತ, 12 ಬೌಂಡರಿ) ಅಮೋಘ ಶತಕ ಸಾಧನೆಯ ನೆರವಿನಿಂದ ಇಂಗ್ಲೆಂಡ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.

    ಲಂಕಾದ 135 ರನ್‌ಗೆ ಪ್ರತಿಯಾಗಿ ಶುಕ್ರವಾರ 2 ವಿಕೆಟ್‌ಗೆ 127 ರನ್‌ಗಳಿಂದ 2ನೇ ದಿನದಾಟ ಮುಂದುವರಿಸಿದ ಇಂಗ್ಲೆಂಡ್, ಮಳೆ ಅಡಚಣೆಯಿಂದ ದಿನದಾಟ ಬೇಗನೆ ಮುಕ್ತಾಯಗೊಂಡಾಗ 4 ವಿಕೆಟ್‌ಗೆ 320 ರನ್ ಪೇರಿಸಿದೆ. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 185 ರನ್ ಮುನ್ನಡೆ ಸಾಧಿಸಿದೆ. ಚೊಚ್ಚಲ ಟೆಸ್ಟ್ ಆಡುತ್ತಿರುವ ಡ್ಯಾನ್ ಲಾರೆನ್ಸ್ (73) ಜತೆಗೆ ರೂಟ್ 4ನೇ ವಿಕೆಟ್‌ಗೆ 173 ರನ್ ಜತೆಯಾಟವಾಡಿದರು.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    66 ರನ್‌ಗಳಿಂದ ದಿನದಾಟ ಆರಂಭಿಸಿದ ಜೋ ರೂಟ್, ಭೋಜನ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಶತಕ ಪೂರೈಸಿದರು. ಇದು ಕಳೆದೊಂದು ವರ್ಷದಲ್ಲಿ ಅವರು ಬಾರಿಸಿದ ಮೊದಲ ಶತಕವಾಗಿದೆ. 2019ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಅವರು ಕೊನೆಯ ಶತಕ ಸಿಡಿಸಿದ್ದರು. ರೂಟ್ ಲಂಕಾದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರರೆನಿಸಿದ್ದರು. 2018ರಲ್ಲಿ ಅವರು ಮೊದಲ ಶತಕ ಸಿಡಿಸಿದ್ದರು. ಅಲ್ಲದೆ ಗಾಲೆ ಮೈದಾನದಲ್ಲಿ ಶತಕ ಸಿಡಿಸಿದ ಏಷ್ಯಾದಿಂದ ಹೊರಗಿನ ತಂಡದ ಮೊದಲ ನಾಯಕರೂ ಆಗಿದ್ದಾರೆ. 2020ರಲ್ಲಿ ಒಂದೂ ಶತಕ ಸಿಡಿಸದ ಕಾರಣ ರೂಟ್, ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರಿಂದ ಹೊರಬಿದ್ದಿದ್ದರು.

    ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಬಾರಿ 150ಕ್ಕಿಂತ ಹೆಚ್ಚು ರನ್ ಬಾರಿಸಿದ ರೂಟ್, ಲಂಕಾ ನೆಲದಲ್ಲಿ ಗರಿಷ್ಠ ರನ್ ಬಾರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎನಿಸಿದರು. 2012ರಲ್ಲಿ ಕೆವಿನ್ ಪೀಟರ್ಸೆನ್ ಕೊಲಂಬೊ ಟೆಸ್ಟ್‌ನಲ್ಲಿ 151 ರನ್ ಗಳಿಸಿದ್ದು ಹಿಂದಿನ ಗರಿಷ್ಠ ಗಳಿಕೆಯಾಗಿತ್ತು.

    ಇದನ್ನೂ ಓದಿ: ಕೇಂದ್ರ ಸಚಿವರ ಕ್ರಿಕೆಟ್ ಅಜ್ಞಾನಕ್ಕೆ ಎರಡೇ ಪದಗಳಲ್ಲಿ ಟಾಂಗ್ ಕೊಟ್ಟ ಹನುಮ ವಿಹಾರಿ!

    ಮಳೆಯಿಂದಾಗಿ ದಿನದಾಟ 70 ನಿಮಿಷ ತಡವಾಗಿ ಆರಂಭಗೊಂಡಿತ್ತು. ಬಳಿಕ ಮಳೆಯಿಂದಾಗಿ ಚಹಾ ವಿರಾಮದ ಬಳಿಕ ಆಟ ನಡೆಯಲಿಲ್ಲ. ಇದರಿಂದ ಇಡೀ ದಿನದಾಟದಲ್ಲಿ 53 ಓವರ್ ಆಟ ಮಾತ್ರ ನಡೆಯಿತು.

    ಶ್ರೀಲಂಕಾ: 135, ಇಂಗ್ಲೆಂಡ್: 94 ಓವರ್‌ಗಳಲ್ಲಿ 4 ವಿಕೆಟ್‌ಗೆ 320 (ಬೇರ್‌ಸ್ಟೋ 47, ರೂಟ್ 168*, ಡ್ಯಾನ್ ಲಾರೆನ್ಸ್ 73, ಬಟ್ಲರ್ 7*, ಲಸಿತ್ ಎಂಬುಲ್ಡೆನಿಯ 131ಕ್ಕೆ 3, ದಿಲ್ರುವಾನ್ 82ಕ್ಕೆ 1).

    ಬಲಿಷ್ಠವಾಗಿದೆ ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ! ಯಾಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts