More

    `ರ‍್ಯಾಂಬೋ’ ನಿರ್ದೇಶಕ ಚೇಂಜ್ … ಸಿದ್ಧಾರ್ಥ್ ಬದಲು ರೋಹಿತ್​

    2020ರ ಗಾಂಧಿ ಜಯಂತಿಗೆ `ರ‍್ಯಾಂಬೋ’ ಬಿಡುಗಡೆ …

    ಹಾಗಂತ ಕಳೆದ ವರ್ಷವೇ ಘೋಷಿಸಿದ್ದರು ನಿರ್ದೇಶಕ ಸಿದ್ಧಾರ್ಥ್ ಆನಂದ್. ಆ ಸಂದರ್ಭದಲ್ಲಿ ಅವರು ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ್ ನಿರ್ದೇಶನದಲ್ಲಿ `ವಾರ್’ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದರು. ಆ ಚಿತ್ರ ಮುಗಿಸಿ, ಟೈಗರ್ ಶ್ರಾಫ್ ನಿರ್ದೇಶನದಲ್ಲಿ ಹಾಲಿವುಡ್‍ನ ಸಿಲಿವೆಸ್ಟರ್ ಸ್ಟಾಲನ್ ಅಭಿನಯದ `ರ‍್ಯಾಂಬೋ’ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ಈ ವರ್ಷದ ಗಾಂಧಿ ಜಯಂತಿಗೆ ಚಿತ್ರ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದ ಫೋಟೋಶೂಟ್ ಸಹ ಮುಗಿದಿತ್ತು.

    ಇದನ್ನೂ ಓದಿ: ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್​ ನಟಿಸುವುದು ಯಾವಾಗ?; ಇಲ್ಲಿದೆ ಉತ್ತರ…

    ಆದರೆ, ಕರೊನಾ ಮತ್ತು ಲಾಕ್‍ಡೌನ್‍ನಿಂದ ಯೋಚನೆಗಳೆಲ್ಲಾ ತಲೆಕೆಳಗಾಗಿವೆ. ಈಗಿನ ಹೊಸ ಸುದ್ದಿಯ ಪ್ರಕಾರ, `ರ‍್ಯಾಂಬೋ’ ಚಿತ್ರದಿಂದ ಅವರೇ ಹೊರಬಿದ್ದಿದ್ದಾರೆ. ಅವರ ಬದಲು ಇನ್ನೊಬ್ಬ ನಿರ್ದೇಶಕರು ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಷ್ಟಕ್ಕೂ ಆಗಿದ್ದೇನೆಂದರೆ, ಕರೊನಾ ಮತ್ತು ಲಾಕ್‍ಡೌನ್‍ನಿಂದ ಚಿತ್ರ ತಡವಾಯಿತು. ಈ ಮಧ್ಯೆ, ಶಾರೂಖ್ ಖಾನ್ ಅಭಿನಯದಲ್ಲಿ `ಪಠಾಣ್’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಿದ್ಧಾರ್ಥ್ ಆನಂದ್ ಗೊತ್ತಾಗಿದ್ದಾರೆ. ಆ ಚಿತ್ರದಲ್ಲಿ ಅವರು ಮೊದಲು ತೊಡಗಿಸಿಕೊಳ್ಳುತ್ತಿರುವುದರಿಂದ, `ರ‍್ಯಾಂಬೋ’ ಚಿತ್ರವನ್ನು ಅವರು ಬಿಟ್ಟುಕೊಟ್ಟಿದ್ದಾರೆ. ಸಿದ್ಧಾರ್ಥ್ ಆನಂದ್ ಬದಲಿಗೆ ಈಗ ರೋಹಿತ್ ಧವನ್ ಬಂದಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಶಿಸ್ತಿನ ವ್ಯಕ್ತಿ; ಯಾವುದೇ ಚಟಗಳಿರಲಿಲ್ಲ: ಮ್ಯಾನೇಜರ್

    ರೋಹಿತ್ ಧವನ್ ಇದಕ್ಕೂ ಮುನ್ನ `ಡಿಶುಂ’ ಎಂಬ ಚಿತ್ರ ನಿರ್ದೇಶಿಸಿದ್ದರು. ಸದ್ಯದಲ್ಲೇ ಅವರು ಕಾರ್ತಿಕ್ ಆರ್ಯನ್ ಅಭಿನಯದಲ್ಲಿ ತೆಲುಗಿನ `ಅಲಾ ವೈಕುಂಠಪುರಂಲೋ’ ಚಿತ್ರವನ್ನು ರೀಮೇಕ್ ಮಾಡುತ್ತಿದ್ದಾರೆ. ಈ ಮಧ್ಯೆ ಟೈಗರ್ ಶ್ರಾಫ್ ಸಹ `ಹೀರೋಪಂತಿ 2′ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಇಬ್ಬರೂ ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮೊದಲು ಮುಗಿಸಿ, ಆ ನಂತರ `ರ್ಯಾಂಬೋ’ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts