More

    ಅವಕಾಶಕ್ಕಾಗಿ ರೋಹಿತ್​ ಹತ್ತಿರ ಕೈಮುಗಿದು ಬೇಡಿಕೊಂಡ್ರಾ ಸಾರಾ?

    ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಅವರ ಪುತ್ರಿ ಸಾರಾ ಅಲಿ ಖಾನ್​, ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ರೋಹಿತ್​ ಶೆಟ್ಟಿ ನಿರ್ದೇಶನದ ‘ಸಿಂಬಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ವಿಷಯ ಹೊಸದೇನಲ್ಲ.

    ಈಗಾಗಲೇ ಈ ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಸಾರಾ ಸಾಕಷ್ಟು ಮಾತನಾಡಿದ್ದಾರೆ. ಆದರೆ, ಇಷ್ಟಕ್ಕೂ ಈ ಪಾತ್ರ ಅವರಿಗೆ ಹೇಗೆ ಸಿಕ್ಕಿತು ಎಂಬ ವಿಷಯವನ್ನು ಅವರು ಹೇಳಿಕೊಂಡಿಲ್ಲ. ಆದರೆ, ಆ ವಿಷಯವನ್ನು ನಿರ್ದೇಶಕ ರೋಹಿತ್​ ಶೆಟ್ಟಿ, ‘ದಿ ಕಪಿಲ್​ ಶರ್ಮಾ ಶೋ’ನಲ್ಲಿ ಹೇಳಿಕೊಂಡಿದ್ದು, ಈಗ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

    ಇದನ್ನೂ ಓದಿ: ಸಾರಾ-ಸುಶಾಂತ್​ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು ಯಾಕೆ?

    ಇಷ್ಟಕ್ಕೂ ಸಾರಾಗೆ ಆ ಪಾತ್ರ ಸಿಕ್ಕಿದ್ದು ಹೇಗೆ? ‘ಅದೊಂದು ದಿನ ಸಾರಾ ನನ್ನ ಆಫೀಸಿಗೆ ಒಬ್ಬರೇ ಬಂದರು. ನನ್ನ ಎದುರಿಗೆ ನಿಂತು, ದಯವಿಟ್ಟು ನನಗೆ ಏನಾದರೂ ಕೆಲಸ ಕೊಡಿ ಎಂದು ಬೇಡಿಕೊಂಡರು. ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಅವರ ಮಗಳು ಈ ರೀತಿ ಬಂದು ಕೇಳಿದ್ದು ನೋಡಿ, ನನಗೆ ನಿಜಕ್ಕೂ ಕಣ್ಣೀರು ಬಂತು. ತಕ್ಷಣವೇ ‘ಸಿಂಬಾ’ ಚಿತ್ರದಲ್ಲಿ ಆಕೆಗೆ ನಾಯಕಿ ಪಾತ್ರ ಕೊಡುವುದಕ್ಕೆ ಒಪ್ಪಿಕೊಂಡೆ’ ಎಂದು ಹೇಳಿಕೊಂಡಿದ್ದಾರೆ ರೋಹಿತ್​.

    ಈ ಮಾತನ್ನು ಅವರು ಹೇಳಿ ಒಂದು ವರ್ಷವೇ ಆಗಿದೆ. ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತು ಜೋರಾಗಿ ಚರ್ಚೆ ನಡೆಯುತ್ತಿದ್ದು, ಈಗ ಈ ಹಳೆಯ ವಿಡಿಯೋ ಇಟ್ಟುಕೊಂಡು ಜನ ರೋಹಿತ್​ಗೆ ಬೆವರಿಳಿಸುತ್ತಿದ್ದಾರೆ.

    ಇದನ್ನೂ ಓದಿ: ಪ್ರಭಾಸ್​ಗೂ ಮುನ್ನ ಈ ಚಿತ್ರದಲ್ಲಿ ಯಾರು ನಟಿಸಬೇಕಿತ್ತು ಗೊತ್ತಾ?

    ಈ ಕುರಿತು ಟ್ವೀಟ್​ ಮಾಡಿರುವ ಒಬ್ಬರು, ‘ಪ್ರತಿದಿನ ಸಾವಿರ ಜನ ಅವಕಾಶ ಕೊಡಿ ಎಂದು ಬೇಡಿಕೊಂಡು ಬರುತ್ತಾರೆ. ಅದರಲ್ಲಿ ಎಲ್ಲರೂ ರಿಜೆಕ್ಟ್​ ಆಗುತ್ತಾರೆ. ಸ್ಟಾರ್​ ಮಕ್ಕಳು ಎಂದ ಮಾತ್ರಕ್ಕೆ ರೋಹಿತ್​ ತರಹದವರು ಎಷ್ಟು ಬೇಗ ಕೆಲಸ ಕೊಡುತ್ತಾರೆ ನೋಡಿ’ ಎಂದಿದ್ದಾರೆ.

    ಇನ್ನೊಬ್ಬರು, ‘ಬಾಲಿವುಡ್​ ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇರುವವರು ಮತ್ತು ಅದಕ್ಕೆ ಸರಿಯಾಗಿ ಅವಕಾಶವಿಲ್ಲದವರು, ನೇರವಾಗಿ ರೋಹಿತ್​ ಶೆಟ್ಟಿ ಆಫೀಸಿಗೆ ಹೋಗಿ. ಅವರೆದುರು ನಿಂತು, ಕೈಮುಗಿದು ಕೆಲಸ ಕೊಡುವುದಕ್ಕೆ ಬೇಡಿಕೊಳ್ಳಿ. ಕೆಲಸ ಸಿಗುತ್ತದೆ. ಅದಕ್ಕೆ ಪ್ರತಿಭೆ ಬೇಕು ಅಂತೇನಿಲ್ಲ’ ಎಂದು ಲೇವಡಿ ಮಾಡಿದ್ದಾರೆ.

    ಒಂದು ದಿನಕ್ಕೆ ಸೋನುಗೆ ಎಷ್ಟು ಮನವಿ ಬರುತ್ತೆ? ಕೇಳಿದ್ರೆ ಬೆಚ್ಚಿ ಬೀಳ್ತೀರಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts