More

    ಐಸಿಸಿ ಏಕದಿನ ತಂಡದಲ್ಲಿ ಭಾರತೀಯರ ಮೇಲುಗೈ: ರೋಹಿತ್ ಶರ್ಮ ನಾಯಕ, ಟೆಸ್ಟ್ ತಂಡಕ್ಕೆ ಕಮ್ಮಿನ್ಸ್ ನೇತೃತ್ವ

    ದುಬೈ: ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಸತತ 10 ಪಂದ್ಯಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದ ರೋಹಿತ್ ಶರ್ಮ 2023ರ ಸಾಲಿನ ಐಸಿಸಿ ವರ್ಷದ ಏಕದಿನ ತಂಡದ ನಾಯಕರಾಗಿಯೂ ಆಯ್ಕೆಯಾಗಿದ್ದಾರೆ. ಯುವ ಬ್ಯಾಟರ್ ಶುಭಮಾನ್ ಗಿಲ್, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ವೇಗಿಗಳಾದ ಮೊಹಮದ್ ಶಮಿ, ಮೊಹಮದ್ ಸಿರಾಜ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಸೇರಿ ಆರು ಆಟಗಾರರು ಐಸಿಸಿ ಏಕದಿನ ತಂಡದಲ್ಲಿದ್ದಾರೆ. ವರ್ಷದ ಟೆಸ್ಟ್ ತಂಡದ ನಾಯಕರಾಗಿ ಆಸೀಸ್‌ನ ಪ್ಯಾಟ್ ಕಮ್ಮಿನ್ಸ್ ನೇಮಕಗೊಂಡಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ತಂಡದಲ್ಲಿರುವ ಇಬ್ಬರು ಭಾರತೀಯರಾಗಿದ್ದಾರೆ. ಐಸಿಸಿಯ ವರ್ಷದ ಮಹಿಳಾ ತಂಡದಲ್ಲಿ ಯಾವುದೇ ಭಾರತೀಯರು ಸ್ಥಾನ ಪಡೆದಿಲ್ಲ.

    ಐಸಿಸಿ ಏಕದಿನ ತಂಡದಲ್ಲಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಆರಂಭಿಕ ಜೋಡಿ ಎನಿಸಿದೆ. ರೋಹಿತ್ 2023ರಲ್ಲಿ 52ರ ಸರಾಸರಿಯಲ್ಲಿ 1,255 ರನ್ ಕಲೆಹಾಕಿದ್ದಾರೆ. ದ್ವಿಶತಕದೊಂದಿಗೆ ವರ್ಷವನ್ನು ಆರಂಭಿಸಿದ ಶುಭಮಾನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 2023ರಲ್ಲಿ ಅತಿಹೆಚ್ಚು ರನ್ ಪೇರಿಸಿದ ಬ್ಯಾಟರ್ ಎನಿಸಿದ್ದು, 1,584 ರನ್‌ಗಳಿಸಿದ್ದರು. ಏಕದಿನ ವಿಶ್ವಕಪ್ ೈನಲ್‌ನ ಆಸೀಸ್ ಹೀರೋ ಟ್ರಾವಿಸ್ ಹೆಡ್ ಮೂರನೇ ಕ್ರಮಾಂದಲ್ಲಿ ಕಾಣಿಸಿಕೊಂಡಿದ್ದರೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ವಿರಾಟ್ ಕೊಹ್ಲಿ ಜತೆಗೆ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್ ಮತ್ತು ಮಾರ್ಕೋ ಜಾನ್ಸೆನ್ ಇದ್ದಾರೆ.

    ವಿರಾಟ್ ಕೊಹ್ಲಿ (1,337) ವರ್ಷದ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಎನಿಸಿದ್ದು, ಆರು ಶತಕ ಸಿಡಿಸಿ ಟೀಮ್ ಇಂಡಿಯಾ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಶತಕಗಳ ಅರ್ಧಶತಕ ದಾಖಲೆಯನ್ನು ಮುರಿದರು. ಬೌಲಿಂಗ್‌ನಲ್ಲಿ ಭಾರತದ ಮೊಹಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಮೊಹಮದ್ ಶಮಿಗೆ ಆಸೀಸ್ ಸ್ಪಿನ್ನರ್ ಆಡಂ ಜಂಪಾ ಜತೆಯಾಗಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಶಮಿ, 4 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಸಿರಾಜ್ ವರ್ಷದಲ್ಲಿ 44 ವಿಕೆಟ್ ಕಬಳಿಸಿದರು.

    ಕುಲದೀಪ್ 2023ರಲ್ಲಿ ಒಟ್ಟು 49 ವಿಕೆಟ್ ಉರುಳಿಸಿದರು. 2023ರಲ್ಲಿ ಭಾರತದ ಪರ 7 ಟೆಸ್ಟ್‌ನಲ್ಲಿ ಆಲ್ರೌಂಡರ್ ರವಿಂದ್ರ ಜಡೇಜಾ ಹಾಗೂ ವಿಶ್ವ ನಂ.1 ಬೌಲರ್ ರವಿಚಂದ್ರನ್ ಅಶ್ವಿನ್ ಸ್ಪಿನ್ ಜೋಡಿ 74 ವಿಕೆಟ್ ಕಬಳಿಸಿದೆ.

    ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡೆರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್ (ವಿ.ಕೀ), ಮಾರ್ಕೋ ಜಾನ್ಸೆನ್, ಆಡಂ ಜಂಪಾ, ಮೊಹಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮದ್ ಶಮಿ.

    ವರ್ಷದ ಟೆಸ್ಟ್ ತಂಡ: ಉಸ್ಮಾನ್ ಖವಾಜ, ದಿಮುತ್ ಕರುಣರತ್ನೆ, ಕೇನ್ ವಿಲಿಯಮ್ಸನ್, ಜೋ ರೂಟ್, ಟ್ರಾವಿಸ್ ಹೆಡ್, ರವೀಂದ್ರ ಜಡೇಜಾ, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮ್ಮಿನ್ಸ್ (ನಾಯಕ), ಆರ್. ಅಶ್ವಿನ್, ಮಿಚೆಲ್ ಸ್ಟಾರ್ಕ್, ಸ್ಟುವರ್ಟ್ ಬ್ರಾಡ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts