More

    ಝೀ ನ್ಯೂಸ್- ಮ್ಯಾಟ್ರಿಜ್ ಚುನಾವಣೆ ಸಮೀಕ್ಷೆ: 390 ಸ್ಥಾನಗಳೊಂದಿಗೆ ಎನ್​ಡಿಎ ಮತ್ತೆ ಅಧಿಕಾರಕ್ಕೆ; ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿಕೂಟಕ್ಕೆ 23 ಸ್ಥಾನ

    ನವದೆಹಲಿ: ಝೀ ನ್ಯೂಸ್ (Zee News) ಮತ್ತು ಮಾರ್ಟಿಜ್ (Matrize) ನಡೆಸಿದ ಮತ ಸಮೀಕ್ಷೆಯು ಎನ್​ಡಿಎ 390 ಸ್ಥಾನಗಳನ್ನು ಗೆಲ್ಲುವ ಮೂಲಕ ಅಬ್ಬರದಿಂದ ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳಿದೆ.

    ಇಂಡಿಯಾ ಮೈತ್ರಿಕೂಟವು 96 ಸ್ಥಾನಗಳನ್ನು ಪಡೆಯುತ್ತದೆ. ಇತರ ಪಕ್ಷಗಳು 57 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

    ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷ ಭರ್ಜರಿಯಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳಿದೆ.

    ಬಿಹಾರದಲ್ಲಿ, 40 ಸ್ಥಾನಗಳ ಪೈಕಿ ಎನ್‌ಡಿಎ 37 ಸ್ಥಾನಗಳೊಂದಿಗೆ ಗಮನಾರ್ಹ ಬಹುಮತವನ್ನು ಗಳಿಸುವ ನಿರೀಕ್ಷೆಯಿದೆ. ಆದರೆ, ಇಂಡಿಯಾ ಬ್ಲಾಕ್ 3 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದೆ. ಜಾರ್ಖಂಡ್‌ನಲ್ಲಿ 14 ಸ್ಥಾನಗಳ ಪೈಕಿ ಎನ್‌ಡಿಎ 13 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಉಳಿದ 1 ಸ್ಥಾನವು ಇಂಡಿಯಾ ಮೈತ್ರಿಕೂಟಕ್ಕೆ ಹೋಗುವ ಸಾಧ್ಯತೆಯಿದೆ.

    ಅದೇ ರೀತಿ ಕರ್ನಾಟಕದಲ್ಲಿ 28 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಎನ್‌ಡಿಎ 23 ಸ್ಥಾನಗಳನ್ನು ಪಡೆದುಕೊಳ್ಳುವ ಮುನ್ಸೂಚನೆಯನ್ನು ಸಮೀಕ್ಷೆ ನೀಡಿದೆ. ಇಂಡಿಯಾ ಮೈತ್ರಿಕೂಟವು ಈ ರಾಜ್ಯದಲ್ಲಿ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

    ಆಂಧ್ರಪ್ರದೇಶದಲ್ಲಿ, 42 ಸ್ಥಾನಗಳ ಪೈಕಿ ವೈಎಸ್‌ಆರ್‌ಸಿಪಿ 12 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ. ಎನ್‌ಡಿಎ 13 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ.

    2024ರ ಚುನಾವಣೆ ವರ್ಷದಲ್ಲಿ ಚಿನ್ನ ಎಷ್ಟು ಚೆನ್ನ?: ಹಳದಿ ಲೋಹದಲ್ಲಿ ಏಕೆ ಹೂಡಿಕೆ ಮಾಡಬೇಕು? ಬ್ರೋಕರೇಜ್​ ಸಂಸ್ಥೆಯ ವಿಶ್ಲೇಷಣೆ ಹೀಗಿದೆ…

    ಮುಖೇಶ್ ಅಂಬಾನಿ ಒಪ್ಪಂದದ ಪರಿಣಾಮ: 87 ರೂಪಾಯಿಯ ಮಾಧ್ಯಮ ಷೇರುಗಳಲ್ಲಿ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts