More

    VIDEO: ಏಕದಿನ ತಂಡದ ನಾಯಕರಾದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿದ ರೋಹಿತ್ ಶರ್ಮ

    ನವದೆಹಲಿ: ಏಕದಿನ ತಂಡದ ನಾಯಕರಾದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ರೋಹಿತ್ ಶರ್ಮ, ಬಲಿಷ್ಠ ತಂಡ ಕಟ್ಟುವ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅವರು ಮೊದಲ ಬಾರಿ ಪೂರ್ಣಪ್ರಮಾಣದ ನಾಯಕರಾಗಿ ಭಾರತ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

    ‘ಭಾರತ ಪರ ಕ್ರಿಕೆಟ್ ಆಡುವಾಗ ಯಾವಾಗಲೂ ಭಾರಿ ಒತ್ತಡ ಇದ್ದೇ ಇರುತ್ತದೆ. ಜನರು ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ಮಾತನಾಡುತ್ತಿರುತ್ತಾರೆ. ನನಗೆ ವೈಯಕ್ತಿಕವಾಗಿ ನನ್ನ ಕೆಲಸದತ್ತ ಗಮನಹರಿಸುವುದು ಮುಖ್ಯವಾಗುತ್ತದೆ. ಜನರ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಅದು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ತಂಡಕ್ಕೂ ನಾನು ಇದೇ ಸಂದೇಶ ನೀಡುತ್ತೇನೆ. ನಾವು ನಮ್ಮ ನಿರ್ವಹಣೆಯತ್ತ ಗಮನಹರಿಸೋಣ. ಹೊರಗಿನ ಮಾತುಗಳು ಅಮುಖ್ಯ. ನಾವು ಗೆಲುವಿಗಾಗಿ ಆಡೋಣ’ ಎಂದು ಬಿಸಿಸಿಐ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

    ಬಲಿಷ್ಠ ತಂಡ ಕಟ್ಟಲು ರಾಹುಲ್ ಭಾಯ್ (ಕೋಚ್ ದ್ರಾವಿಡ್) ಕೂಡ ನೆರವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ‘ತಂಡದಲ್ಲಿ ನಾವು ಪರಸ್ಪರರ ಬಗ್ಗೆ ಏನು ಯೋಚಿಸುತ್ತೇವೆ ಎಂಬುದಷ್ಟೇ ನಮಗೆ ಮುಖ್ಯ. ಎಕ್ಸ್, ವೈ, ಝಡ್ ಏನು ಯೋಚಿಸುತ್ತಾರೆ ಎಂಬುದಲ್ಲ. ಆಟಗಾರರ ನಡುವೆ ಬಲಿಷ್ಠ ಬಾಂಧವ್ಯ ನಿರ್ಮಿಸುವುದು ನನ್ನ ಬಯಕೆ. ಅದು ನಮಗೆ ನಮ್ಮ ಗುರಿ ತಲುಪಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಕೋಚ್ ನಮಗೆ ನೆರವಾಗಲಿದ್ದಾರೆ’ ಎಂದು ರೋಹಿತ್ ಹೇಳಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕಕ್ಕೆ 3ನೇ ಜಯ, ಹೆಚ್ಚಿದ ನಾಕೌಟ್ ಆಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts