More

    ಅಫ್ಘಾನಿಸ್ತಾನ ಎದುರು ಶತಕ ಸಿಡಿಸಿ ಹಲವು ದಾಖಲೆ ರಚಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮ: ದಿಗ್ಗಜ ಸಚಿನ್ ತೆಂಡುಲ್ಕರ್ ದಾಖಲೆಯೂ ಬ್ರೇಕ್

    ನವದೆಹಲಿ: ಚೆನ್ನೈನಲ್ಲಿ ಒತ್ತಡದ ಪರಿಸ್ಥಿತಿಯಿಂದ ಪುಟಿದೆದ್ದು ಶುಭಾರಂಭ ಕಂಡಿದ್ದ ಟೀಮ್ ಇಂಡಿಯಾ, 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಸರಾಗವಾಗಿ ಗೆಲುವು ದಾಖಲಿಸಿದೆ. ನಾಯಕ ರೋಹಿತ್ ಶರ್ಮ (131 ರನ್, 84 ಎಸೆತ, 16 ಬೌಂಡರಿ, 5 ಸಿಕ್ಸರ್) ಅಬ್ಬರದ ಶತಕದೊಂದಿಗೆ ಹಲವು ದಾಖಲೆಗಳನ್ನು ಪುಡಿಗಟ್ಟಿ, ಅ್ಘಾನಿಸ್ತಾನ ಎದುರು 8 ವಿಕೆಟ್‌ಗಳ ಸುಲಭ ಗೆಲುವಿನ ರೂವಾರಿ ಎನಿಸಿದರು.

    ಸಚಿನ್ ದಾಖಲೆ ಮುರಿದ ರೋಹಿತ್: ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಿಗ್ಗಜ ಸಚಿನ್ ತೆಂಡುಲ್ಕರ್ (6) ದಾಖಲೆಯನ್ನು ನಾಯಕ ರೋಹಿತ್ ಶರ್ಮ (7) ಮುರಿದರು ಸಚಿನ್ ತೆಂಡುಲ್ಕರ್ ಆರು (1992, 1996, 1999, 2003, 2007, 2011) ಆವೃತ್ತಿಗಳ 44 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ರೋಹಿತ್ ಮೂರು (2015, 2019, 2023) ಆವೃತ್ತಿಗಳ 17 ಇನಿಂಗ್ಸ್‌ಗಳನ್ನಷ್ಟೇ ತೆಗೆದುಕೊಂಡರು. 2019ರ ಒಂದೇ ಆವೃತ್ತಿಯಲ್ಲಿ ರೋಹಿತ್ 5 ಶತಕ ಬಾರಿಸಿದ್ದರು.

    63: ರೋಹಿತ್ ಶರ್ಮ (63 ಎಸೆತ) ವಿಶ್ವಕಪ್‌ನಲ್ಲಿ ಭಾರತದ ಪರ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿದರು. ಕಪಿಲ್ ದೇವ್ 72 ಎಸೆತದಲ್ಲಿ ಸಿಡಿಸಿದ್ದು ಹಿಂದಿನ ದಾಖಲೆ.

    1: ರೋಹಿತ್ ಶರ್ಮ (556) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ (553) ದಾಖಲೆಯನ್ನು ಮುರಿದರು.

    19: ರೋಹಿತ್ ಶರ್ಮ ಏಕದಿನ ವಿಶ್ವಕಪ್ ವೇಗವಾಗಿ ಸಾವಿರ ರನ್ ಪೂರೈಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (19 ಇನಿಂಗ್ಸ್) ದಾಖಲೆಯನ್ನು ಸರಿಗಟ್ಟಿದ್ದರು.

    4: ರೋಹಿತ್ ವಿಶ್ವಕಪ್‌ನಲ್ಲಿ ಸಾವಿರ ರನ್ ಸಿಡಿಸಿದ 4ನೇ ಭಾರತೀಯ ಎನಿಸಿದರು. ತೆಂಡುಲ್ಕರ್ (2,278), ಕೊಹ್ಲಿ (1,115) ಹಾಗೂ ಗಂಗೂಲಿ (1,006) ಮೊದಲ ಮೂವರು.

    31: ಏಕದಿನದಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್‌ಗಳಲ್ಲಿ ರಿಕಿ ಪಾಂಟಿಂಗ್ (30) ಅವರನ್ನು ರೋಹಿತ್ (31) ಹಿಂದಿಕ್ಕಿ 3ನೇ ಸ್ಥಾನಕ್ಕೇರಿದರು. ತೆಂಡುಲ್ಕರ್ (49), ವಿರಾಟ್ ಕೊಹ್ಲಿ (47) ಮೊದಲ 2 ಸ್ಥಾನದಲ್ಲಿದ್ದು, ಈಗ ಅಗ್ರ ಮೂವರೂ ಭಾರತೀಯರಾಗಿದ್ದಾರೆ.

    8: ಜಸ್‌ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್‌ನಲ್ಲಿ 8ನೇ ಬಾರಿಗೆ 4 ವಿಕೆಟ್ ಪಡೆದ ಸಾಧನೆ ಮಾಡಿದರು.

    2. ಜಸ್‌ಪ್ರೀತ್ ಬುಮ್ರಾ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ 4 ವಿಕೆಟ್ ಪಡೆದ ಆಶಿಶ್ ನೆಹ್ರಾ ದಾಖಲೆಯನ್ನು ಸರಿಗಟ್ಟಿದರು. ಮೊಹಮದ್ ಶಮಿ (4) ಮೊದಲ ಸ್ಥಾನದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts