More

    ರಸ್ತೆಗೆ ತರಕಾರಿ ಸುರಿದು ಪ್ರತಿಭಟನೆ

    ಮುರಗೋಡ: ತರಕಾರಿಗೆ ಸೂಕ್ತ ಬೆಲೆ ದೊರೆಯದಿರುವುದರಿಂದ ರೈತರು ಹಾರೂಗೊಪ್ಪ ಗ್ರಾಪಂ ಎದುರಿನ ರಸ್ತೆ ಮೇಲೆ ಸುರಿದು ಬುಧವಾರ ಪ್ರತಿಭಟನೆ ನಡೆಸಿದರು.

    ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ತರಕಾರಿ ಹಾಗೂ ವಿವಿಧ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದು, ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ನೂರಾರು ರೈತರು ಮಾರ್ಕೆಟ್‌ನಿಂದ ತರಕಾರಿಯನ್ನು ಮರಳಿ ತಂದು ರಸ್ತೆಗೆ ಸುರಿದು ಆಕ್ರೋಶ ಹೊರಹಾಕಿದರು.

    ಸ್ಥಳಕ್ಕೆ ಆಗಮಿಸಿದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ರೈತ ಮುಖಂಡರು ಮಾತನಾಡಿ, ಒಕ್ಕಲುತನವನ್ನೇ ನಂಬಿ ಬಂದಿರುವ ರೈತರು ತರಕಾರಿ ಬೆಳೆಯಲು ಬೀಜ, ರಸಗೊಬ್ಬರ ಸೇರಿ ಸಾವಿರಾರು. ರೂ. ಖರ್ಚು ಮಾಡಿದ್ದಾರೆ. ಆದರೆ, ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಬೇಡಿಕೆ ಕುಸಿದಿದೆ. ಬೆಳೆಗೆ ತಕ್ಕಂತೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.

    ಸರ್ಕಾರ ತರಕಾರಿ ಬೆಳೆಗಾರರ ನೆರವಿಗೆ ಬರಬೇಕು. ತರಕಾರಿಯನ್ನು ಯೋಗ್ಯ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಈ ಭಾಗದ ಶಾಸಕರು, ಅಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ಮನವಿ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿ ಆರ್.ಎಸ್. ಹೂಲಿ, ರೈತರು ನೀಡಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.

    ರೈತರಾದ ಬಸವರಾಜ ಮುತವಾಡ, ಬಸವಣ್ಣೆೆಪ್ಪ ಬೆಡಸೂರ, ಚಂದ್ರಗೌಡ ಪಾಟೀಲ, ಯಲ್ಲಪ್ಪ ತಿಪ್ಪಣ್ಣವರ, ಅಪ್ಪಣ್ಣ ಮಲ್ಲೂರ, ಮಲ್ಲಪ್ಪ ದಾನಪ್ಪನವರ, ಸೋಮಪ್ಪ ಕರೆಣ್ಣವರ, ಎಂ.ಆರ್.ಒಕ್ಕುಂದ, ಮಹಾಂತೇಶ ಒಕ್ಕುಂದ, ಶಿವರುದ್ರಯ್ಯ ಕಲ್ಮಠ, ಈರಪ್ಪ ಮಾವಿನಕಟ್ಟಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts