More

    ಅಪ್ಪ ಅಮ್ಮ ಇಲ್ಲಿನವರೇ ಆಗಿದ್ದರೆ ಭಾರತ್ ಮಾತಾಕಿ ಜೈ ಎನ್ನುತ್ತಾರೆ: ಮಾಜಿ ಸಚಿವ ಸಿ.ಟಿ.ರವಿ

    ಚಿಕ್ಕಮಗಳೂರು: ಪಾಕಿಸ್ತಾನದವರು ಬಂದು ಇಲ್ಲಿ ಅಕ್ರಮ ಸಕ್ರಮ ಮಾಡಿದ್ದರೆ ಅಂತಹವರು ಮಾತ್ರ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾರೆ. ಅಪ್ಪ, ಅಮ್ಮ ಇಲ್ಲಿನವರೇ ಆಗಿದ್ದರೆ ಅಂಥವರು ಭಾರತ್ ಮಾತಾ ಕಿ ಜೈ ಎನ್ನುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಎಸ್‌ಟಿ ಮೋರ್ಚಾದಿಂದ ಆಯೋಜಿಸಲಾಗಿದ್ದ ಮುನ್ನಡೆ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗುವ ಮನಸ್ಥಿತಿಗಳು ನಮ್ಮಲ್ಲಿವೆ. ಇಂಥ ಮನಸ್ಥಿತಿಗಳಿಗೆ ಕುಮ್ಮಕ್ಕು ನೀಡುತ್ತಿರುವುದೇ ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಟಿಪ್ಪು ಸುಲ್ತಾನ್ ವಿರುದ್ಧ ಹೋರಾಡಿದ ಮದಕರಿ ನಾಯಕನಾಗಲೀ ಅಥವಾ ಗಂಡುಗಲಿ ಕುಮಾರರಾಮ, ಸಿಂಧೂರ ಲಕ್ಷ್ಮಣ ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದಿಲ್ಲ. ಆದರೆ ಕನ್ನಡ ಭಾಷೆಯನ್ನು ಧಿಕ್ಕರಿಸಿ ಪಾರ್ಸಿ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದ ಟಿಪ್ಪು ಸುಲ್ತಾನ್ ಮಾತ್ರ ಕಣ್ಣಿಗೆ ಕಾಣುತ್ತಾನೆ. ಹೀಗಾಗಿ ಅವನ ಜಯಂತಿಯನ್ನು ಮಾತ್ರ ಮಾಡುತ್ತಾರೆ ಎಂದು ಟೀಕಿಸಿದರು.
    ನಾವು ಶ್ರೀರಾಮನನ್ನು ಆರಾಧ್ಯ ದೈವ ಎನ್ನುತ್ತೇವೆ. ಆದರೆ ಕಾಂಗ್ರೆಸ್ಸಿಗರು ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಕರೆಯುತ್ತಾರೆ. ಈ ಮೂಲಕ ರಾಮಾಯಣ ನಡೆದೇ ಇಲ್ಲ. ವಾಲ್ಮೀಕಿ ಸಹ ಕಾಲ್ಪನಿಕ ವ್ಯಕ್ತಿ ಎಂದು ಬಿಂಬಿಸುವ ಮೂಲಕ ಪರಿಶಿಷ್ಟ ವರ್ಗಕ್ಕೆ ದ್ರೋಹ ಮಾಡಲು ಹೊರಟಿದ್ದಾರೆ ಎಂದರು.
    ಪ್ರಸ್ತುತ ಕಾಂಗ್ರೆಸ್ ಪಕ್ಷದವರು ಅಧಿಕಾರದ ಆಸೆಗಾಗಿ ಮಾತ್ರ ಹಿಂದುಳಿದ ವರ್ಗಕ್ಕೆ ಬೆಂಬಲಿಸುವ ನಾಟಕ ವಾಡುತ್ತಿದೆಯೇ ಹೊರತು ನೈಜವಾಗಿ ಸ್ಪಂದಿಸುವ ಗುಣ ಅವರಲ್ಲಿಲ್ಲ. ಮೋದಿ ನೇತೃತ್ವದ ಕೇಂದ್ರ ಹಾಗೂ ಈ ಹಿಂದೆ ಅಧಿಕಾರ ನಿರ್ವಹಿಸಿದ ಬಿಜೆಪಿ ಸರ್ಕಾರ ಕೊಡುಗೆಗಳೇ ಎಸ್‌ಟಿ ಸಮುದಾಯಕ್ಕೆ ಆರ್ಥಿಕವಾಗಿ ಶಕ್ತಿ ನೀಡಿರುವುದು ಸ್ಪಷ್ಟವಾಗಿದೆ ಎಂದರು.
    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಡವರು ಹಾಗೂ ಹಿಂದುಳಿದ ವರ್ಗದವರು ಚಿಕಿತ್ಸಾ ಸಮಯದಲ್ಲಿ ಹೆಚ್ಚು ಹಣಕಾಸು ಕಟ್ಟಲಾಗದೇ ಸಾವೇ ಕೊನೆಯಘಟ್ಟ ಅಂದುಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ದೇಶದ ಪ್ರಜೆಗಳಿಗೆ 5 ಲಕ್ಷ ರೂ. ಇನ್ಶುರೆನ್ಸ್ ಕಲ್ಪಿಸುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸಬೇಕು ಎಂದು ಹೇಳಿದರು.
    ಕೇಂದ್ರ ಸರ್ಕಾರದ ಜನಪರ ಯೋಜನೆಗಳು ದೇಶದ ಪ್ರತಿಯೊಂದು ಸಮಾಜಕ್ಕೆ ಸರ್ವಸಮಾನವಾಗಿ ಸಿಕ್ಕಿವೆ. ಮೋದಿ ಗ್ಯಾರಂಟಿಗಳೇ ಮುಂದಿನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ. ಹೀಗಾಗಿ ಕಾರ್ಯಕರ್ತರು ಎಚ್ಚೆತ್ತುಕೊಂಡು ಲೋಕಸಭಾ ಸಮರದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ಬೆಳವಣಿಗೆಗೆ ಕಾರ್ಯೋನ್ಮುಖರಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.
    ಬಿಜೆಪಿ ರಾಜ್ಯ ಎಸ್.ಟಿ.ಮೋರ್ಚಾ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯಾದ್ಯಂತ ಅತ್ಯಂತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಪಕ್ಷ ಬಿಜೆಪಿ. ಸರ್ಕಾರ ರಚನೆಗೊಂಡ ಪ್ರತಿ ಸಾರಿಯು ಒಂದಲ್ಲೊಂದು ಯೋಜನೆಗಳನ್ನು ಜನಾಂಗಕ್ಕೆ ರೂಪಿಸಿ ಏಳಿಗೆಗೆ ಸಹಕರಿಸುತ್ತಿರುವುದು ಮರೆಯಲಾಗದ ವಿಷಯ ಎಂದು ತಿಳಿಸಿದರು.
    ಕೇಂದ್ರ ಸರ್ಕಾರದ ಗ್ಯಾರಂಟಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಶಾಸಕ ಸಿ.ಟಿ.ರವಿ ಅವರ ಸಹಕಾರದಿಂದ ಇಂದು ಉನ್ನತ ಹುದ್ದೆ ಅಲಂಕರಿಸಲು ಕಾರಣವಾಗಿದೆ. ಕ್ಷೇತ್ರದಲ್ಲೂ ವಾಲ್ಮೀಕಿ ಭವನ ನಿರ್ಮಿಸಿ ಸಮುದಾಯಕ್ಕೆ ಪೂರಕವಾಗಿರುವ ಸಿ.ಟಿ.ರವಿ ಅವರ ಕಾಳಜಿ ಅವಿಸ್ಮರಣೀಯ ಎಂದರು.
    ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ರಾಜ್ಯ ಎಸ್‌ಟಿ ಮೋರ್ಚಾ ಘಟಕದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಅನಿಲ್‌ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಂ.ಮಧುಕುಮಾರ್, ಎಂ.ಟಿ.ಶಂಕರ್, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಪ್ರದೀಪ್, ಮುಖಂಡರಾದ ದೀಪಕ್ ದೊಡ್ಡಯ್ಯ, ಸುನೀಲ್, ಜಗದೀಶ್, ಜ್ಞಾನಮೂರ್ತಿ ಮತ್ತಿತರರಿದ್ದರು.

    ಗ್ಯಾರಂಟಿಯಲ್ಲೂ ಮೋಸ
    ಗ್ಯಾರಂಟಿ ಯೋಜನೆಗಳಲ್ಲಿಯೂ ಜನರನ್ನು ಮೋಸ ಮಾಡಲಾಗುತ್ತಿದೆ. ಮೋದಿ ಸರ್ಕಾರ ನೀಡಿದ ಅಕ್ಕಿಯನ್ನು ವಿತರಣೆ ಮಾಡಿ ನಾನೇ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಎದೆ ಬಡಿದುಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಗಂಡನ ಬಳಿ ಕಿತ್ತುಕೊಂಡು ಹೆಂಡತಿಗೆ ಹಣ ನೀಡುತ್ತಿದ್ದಾರೆ. ಎಲ್ಲ ವಸ್ತುಗಳ ಮೇಲೆಯೂ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮ ಜೇಬನ್ನು ಕತ್ತರಿಸಿ ನಿಮ್ಮ ಕುಟುಂಬಕ್ಕೆ ಹಣ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts