More

    ಭಾರೀ ಮಳೆಗೆ ಕೊಚ್ಚಿ ಹೋಯ್ತು ರಸ್ತೆ ತಡೆಗೋಡೆ: ಈ ಮಾರ್ಗದಲ್ಲಿ ಸಂಚರಿಸುವಾಗ ಇರಲಿ ಎಚ್ಚರ

    ಚಿಕ್ಕಮಗಳೂರು: ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅನಾಹುತಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಈ ನಡುವೆ ರಸ್ತೆಗಳು ಕೊಚ್ಚಿಹೋಗುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಚಿಕ್ಕಮಗಳೂರಿನಲ್ಲು ನಿರಂತರ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿಯಲ್ಲಿ ರಸ್ತೆತಡೆಗೋಡೆ ಕುಸಿದಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

    ಭಾರೀ ಮಳೆಯಿಂದ ರಸ್ತೆ ಬದಿಯ ಗೋಡೆ ಕೊಚ್ಚಿಹೋಗಿದ್ದು, ರಸ್ತೆ ಈಗಲೋ ಆಗಲೋ ಕುಸಿಯುವಂತಿದೆ. ಕಳಸ ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪರ್ಯಾಯ ರಸ್ತೆ ಇದಾಗಿದ್ದು, ಕಳಪೆ ಕಾಮಗಾರಿಯಿಂದಲೇ ಕುಸಿದಿದೆ ಎನ್ನಲಾಗಿದೆ.

    ಒಂದು ವರ್ಷದ ಹಿಂದಷ್ಟೇ ಈ ತಡೆಗೋಡೆ ನಿರ್ಮಿಸಲಾಗಿತ್ತು, ವರ್ಷದೊಳಗೆ ತಡೆಗೋಡೆ ಕುಸಿದಿರುವುದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts