More

    ಆರ್​ಜೆ ಮಯೂರ ಮತ್ತು ತಂಡದಿಂದ ನಿತ್ಯ 1000 ಪೊಟ್ಟಣ ಊಟ ಪೂರೈಕೆ; ಮೂರು ಹೊತ್ತು ಹಸಿದವರ ಹೊಟ್ಟೆ ತುಂಬಿಸುತ್ತಿದೆ ಈ ಯಂಗ್​ ಟೀಮ್​..

    ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಐದಾರು ಕೊಳಗೇರಿ ಪ್ರದೇಶಗಳಿಗೆ ಕಳೆದ 20 ದಿನಗಳಿಂದ ಆಹಾರ ಪೂರೈಕೆ ಮಾಡುತ್ತಿದ್ದಾರೆ ಆರ್​ಜೆ ಮಯೂರ ರಾಘವೇಂದ್ರ. ನಿತ್ಯ ಬೆಳಗ್ಗೆ 150ಕ್ಕೂ ಅಧಿಕ ಉಪಾಹಾರ ಪೊಟ್ಟಣ, ಮಧ್ಯಾಹ್ನ 700 ಊಟದ ಬಾಕ್ಸ್, ರಾತ್ರಿ 150 ಊಟ ಸೇರಿ ಪ್ರತಿದಿನ 1000ಕ್ಕೂ ಹೆಚ್ಚು ಜನರ ಹೊಟ್ಟೆ ತುಂಬಿಸುತ್ತಿದ್ದಾರೆ. ಮಯೂರ ಜತೆಗ ಕೌಶಿಕ್ ಸೇರಿ ಒಟ್ಟು 12 ಜನರ ತಂಡ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಟೀಮ್ ಮಾಡಿಕೊಂಡು ಸ್ಲಂ ಪ್ರದೇಶಗಳಿಗೆ ತೆರಳಿ ಆಹಾರ ಹಂಚಿಕೆ ಮಾಡುತ್ತಿದ್ದಾರೆ. ಮೊದಲಿಗೆ ಈ 12 ಜನರ ತಂಡ ಕೈಲಾದ ಮಟ್ಟಿಗೆ ಹಣ ವಿನಿಯೋಗಿಸಿತ್ತು. ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ದೇಣಿಗೆ ನೀಡುವಂತೆ ಕೋರಿತ್ತು. ಅದರಂತೆ, ದುಬೈ, ಕತಾರ, ನೆದರ್​ಲ್ಯಾಂಡ್​, ಲಂಡನ್​, ಬೆಂಗಳೂರು ಸೇರಿ ಎಲ್ಲ ಕಡೆಗಳಿಂದ ಹಣದ ನೆರವು ಹರಿದು ಬರುತ್ತಿದ್ದು, ಏಪ್ರಿಲ್​ 30ರ ವರೆಗೂ ಲಾಕ್​ಡೌನ್ ವಿಸ್ತರಣೆ ಆದರೂ ಅಲ್ಲಿಯವರೆಗೂ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಮಯೂರ ರಾಘವೇಂದ್ರ.

    ಸಲ್ಮಾನ್ ಖಾನ್​ ಕಂಠದಲ್ಲಿ ‘ಪ್ಯಾರ್​ ಕರೊನಾ’ ಗೀತೆ; ಜಾಗೃತಿ ಕಾರ್ಯಕ್ಕೆ ಕೈ ಹಾಕಿದ ಬಾಲಿವುಡ್​ ಸ್ಟಾರ್​; ಕಿರು ಟೀಸರ್​ ಬಿಡುಗಡೆಯಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts