More

    ನನ್ನ ದೇಶಕ್ಕೆ ಸಹಾಯ ಮಾಡಿ … ಬೈಡೆನ್​ಗೆ ಪ್ರಿಯಾಂಕಾ ಮನವಿ

    ನ್ಯೂಯಾರ್ಕ್​: ಭಾರತದಲ್ಲಿ ಕೋವಿಡ್​ 19 ಎರಡೆನಯ ಅಲೆ ಹೆಚ್ಚುತ್ತಿರುವುದರಿಂದ ಮತ್ತು ಅಲ್ಲಿ ಪರಿಸ್ಥಿತಿ ಮಿತಿಮೀರುತ್ತಿರುವುದರಿಂದ ವ್ಯಾಕ್ಸಿನ್​ಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಸಹಾಯ ಮಾಡಿ ಎಂದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ, ಟ್ವೀಟ್​ ಮೂಲಕ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್​ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ

    ಇತ್ತೀಚೆಗಷ್ಟೇ, ಅಮೇರಿಕಾ ದೇಶವು ಭಾರತದಿಂದ ಅಗತ್ಯಕ್ಕಿಂತ ಹೆಚ್ಚಾಗಿ ವ್ಯಾಕ್ಸಿನ್​ ತರಿಸಿಕೊಂಡಿತ್ತು. ಈ ಕುರಿತು ಟ್ವೀಟ್​ ಮಾಡಿರುವ ಪ್ರಿಯಾಂಕಾ, ‘ಭಾರತದಲ್ಲಿ ಕೋವಿಡ್​ 19ರ ಎರಡನೆಯ ಅಲೆ ಭೀಕರವಾಗಿದೆ. ಈ ಮಧ್ಯೆ, ಅಮೇರಿಕಾ ಅಗತ್ಯಕ್ಕಿಂತ 550 ಮಿಲಿಯನ್​ ಹೆಚ್ಚು ವ್ಯಾಕ್ಸೀನ್​ಗಳನ್ನು ಆಮದು ಮಾಡಿಕೊಂಡಿದೆ. ನಮ್ಮ ದೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದರಿಂದ, ದಯವಿಟ್ಟು ವ್ಯಾಕ್ಸೀನ್​ಗಳನ್ನು ಭಾರತದೊಂದಿಗೆ ಹಂಚಿಕೊಳ್ಳಿ’ ಎಂದು ಅವರು ಮನವಿ ಮಾಡಿದ್ದಾರೆ.

    ಪ್ರಿಯಾಂಕಾ ಒಂದೊಳ್ಳೆಯ ಕಾರಣಕ್ಕೆ ಈ ರೀತಿ ಟ್ವೀಟ್​ ಮಾಡಿದ್ದರೂ, ಈ ಕುರಿತು ಸಾಕಷ್ಟು ಅಪಸ್ವರಗಳು ಕೇಳಿಬರುತ್ತಿವೆ. ಪ್ರಿಯಾಂಕಾ ಅವರ ಟ್ವೀಟ್​ಗೆ ಪ್ರತ್ಯುತ್ತರ ನೀಡಿರುವ ಹಲವರು, ಇದೇ ಮಾತನ್ನು ಎರಡು ವಾರಗಳ ಹಿಂದೆಯೇ ಹೇಳಬಹುದಿತ್ತು. ನಿಮ್ಮ ದೇಶದ ಜನರು ದುಸ್ಥಿತಿಯಲ್ಲಿರುವಾಗ ಮತ್ತು ವ್ಯಾಕ್ಸ್​ಲೈವ್​ ಅಭಿಯಾನ ಪ್ರಾರಂಭವಾದ ಮೇಲೆ ಹೇಳುವುದಲ್ಲ ಎಂದು ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಲವರು ಅಮೇರಿಕಾ ಈಗಾಗಲೇ ಹೆಚ್ಚುವರಿ ಲಸಿಕೆಗಳನ್ನು ಕೊಡುವುದಕ್ಕೆ ಸಿದ್ಧತೆ ಮಾಡಿರುವುದರಿಂದ, ಈಗ ಟ್ವೀಟ್​ ಮಾಡುವ ಬದಲು ಎರಡು ದಿನಗಳ ಹಿಂದೆಯೇ ಟ್ವೀಟ್​ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

    ಟೀಕೆಗಳ ಜತೆಗೆ, ಎಲ್ಲರೂ ಸುಮ್ಮನಿರುವಾಗ ಪ್ರಿಯಾಂಕಾ ಮಾತ್ರ ತಮ್ಮ ಅಭಿಪ್ರಾಯವನ್ನು ದಿಟ್ಟವಾಗಿ ಹೇಳಿದ್ದಿಕ್ಕೆ ಹಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts