More

    ಗುಜರಾತ್​ ಚುನಾವಣಾ ಕಣಕ್ಕಿಳಿದಿರುವ ಜಡೇಜಾ ಪತ್ನಿಯ ಒಟ್ಟು ಆಸ್ತಿ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಅಹಮದಾಬಾದ್​: ವಿಧಾನಸಭಾ ಚುನಾವಣೆ (Gujarat polls) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗುಜರಾತ್​ನಲ್ಲಿ ರಾಜಕೀಯ ಚಟುವಟಿಕೆ ರಂಗೇರಿದ್ದು, ಚುನಾವಣಾ ಕಣಕ್ಕೆ ಕಳೆಬಂದಿದೆ. ಈಗಾಗಲೇ ಬಿಜೆಪಿ (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಟೀಮ್​ ಇಂಡಿಯಾದ ಆಟಗಾರ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿಯಿಂದ ಟಿಕೆಟ್ (BJP Ticket)​ ಗಿಟ್ಟಿಸಿಕೊಂಡಿದ್ದಾರೆ.

    ಗುಜರಾತ್​ ವಿಧಾನಸಭೆಯ ಜಾಮ್​ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ರಿವಾಬಾ (Rivaba Jadeja) ಸ್ಪರ್ಧಿಸಲಿದ್ದಾರೆ. 32 ವರ್ಷದ ರಿವಾಬಾ ಜಡೇಜಾ ಅವರು 1990ರ ಸೆ. 5ರಂದು ಜನಿಸಿದರು. ಗುಜರಾತ್​ನ ರಾಜ್​ಕೋಟ್​ನಲ್ಲಿರುವ ಆತ್ಮೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಕಾಲೇಜಿನಲ್ಲಿ ಮೆಕಾನಿಕಲ್​ ಇಂಜಿನಿಯರ್​ ಓದಿದ್ದಾರೆ. 2016ರಲ್ಲಿ ಜಡೇಜಾರನ್ನು ವರಿಸಿದರು. 2019ರಲ್ಲಿ ಬಿಜೆಪಿ ಪಕ್ಷ ಸೇರಿಕೊಂಡು, ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

    ರವೀಂದ್ರ ಜಡೇಜಾ ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಅವರು ಒಳ್ಳೆಯ ಕುಟುಂಬ ಹಿನ್ನೆಲೆಯಿಂದ ಬಂದವರು. ಆರ್ಥಿಕವಾಗಿಯು ಅವರ ಕುಟುಂಬ ಸದೃಢವಾಗಿದೆ. ಪ್ರಸ್ತುತ ಅವರ ಒಟ್ಟು ಆಸ್ತಿ 70.48 ಕೋಟಿ ರೂ. ಇದೆ. ರವೀಂದ್ರ ಜಡೇಜಾ ಆಸ್ತಿ ಸೇರಿದಂತೆ ರಿವಾಬಾ ಜಡೇಜಾರ ಒಟ್ಟು ಆಸ್ತಿ 97.25 ಕೋಟಿ ರೂಪಾಯಿ.

    ರಿವಾಬಾ ಅವರು 64.3 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ಆಕೆಯ ಸ್ವಂತ ಆಸ್ತಿ 57.60 ಲಕ್ಷ ರೂ. ಹಾಗೂ ಪತಿಯ ಒಟ್ಟು ಆಸ್ತಿ 37.43 ಕೋಟಿ ರೂ. ಇದೆ. ರಿವಾಬಾ ಅವರಿಗೆ ಯಾವುದೇ ಸ್ಥಿರ ಆಸ್ತಿಗಳಿಲ್ಲ. ಆದರೆ, ಅವರ ಪತಿ ರವೀಂದ್ರ ಜಡೇಜಾ ಒಟ್ಟು 33.05 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರಲ್ಲಿ ಗುಜರಾತ್ ಮತ್ತು ಜಾಮ್‌ನಗರದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಮಾರುಕಟ್ಟೆಗಳು ಮತ್ತು ಜಡ್ಡುಸ್ ಫುಡ್ ಫೀಲ್ಡ್ ರೆಸ್ಟೋರೆಂಟ್‌ನಲ್ಲಿ 50 ಪ್ರತಿಶತ ಪಾಲನ್ನು ಒಳಗೊಂಡಿದೆ. ಅವರು ರಾಜ್‌ಕೋಟ್, ಜಾಮ್‌ನಗರ ಮತ್ತು ಅಹಮದಾಬಾದ್‌ನಲ್ಲಿ ಆರು ಮನೆಗಳನ್ನು ಹೊಂದಿದ್ದಾರೆ. ರವೀಂದ್ರ ಜಡೇಜಾ ಅವರು ಫೋಕ್ಸ್‌ವ್ಯಾಗನ್ ಪೊಲೊ ಜಿಟಿ, ಫೋರ್ಡ್ ಎಂಡೀವರ್ ಮತ್ತು ಆಡಿ ಕ್ಯೂ7 ಕಾರುಗಳನ್ನು ಹೊಂದಿದ್ದಾರೆ.

    ಅಂದಹಾಗೆ ರಿವಾಬಾ ಅವರು ಉದ್ಯಮಿ ಹರ್ದೇವ್ ಸಿಂಗ್ ಸೋಲಂಕಿ ಅವರ ಪುತ್ರಿ. ಆಕೆಯ ತಾಯಿಯ ಹೆಸರು ಪ್ರಫುಲ್ಲಬಾ ಸೋಲಂಕಿ. ಅವರು ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ರಿವಾಬಾ ಅವರು ಕಾಂಗ್ರೆಸ್ ರಾಜಕಾರಣಿ ಹರಿ ಸಿಂಗ್ ಸೋಲಂಕಿ ಅವರ ಸೊಸೆ. 2019 ರಲ್ಲಿ ರಿವಾಬಾ ಬಿಜೆಪಿ ಸೇರಿದರು. ಅದಕ್ಕೂ ಮೊದಲು, ಬಲಪಂಥೀಯ ಗುಂಪಿನ ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದರು. ರಿವಾಬಾ ಅವರು ರವೀಂದ್ರ ಜಡೇಜಾ ಅವರ ಸಹೋದರಿಯ ಸ್ನೇಹಿತೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

    ರಾಜೀವ್​ ಗಾಂಧಿ ಹಂತಕರ ಬಿಡುಗಡೆ: ಆದೇಶ ಮರು ಪರಿಶೀಲಿಸಲು ಕೇಂದ್ರದಿಂದ ಸುಪ್ರೀಂಗೆ ಮೇಲ್ಮನವಿ

    i

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts