ಕಳೆದ ವಾರವಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಮತ್ತೆ ಹುಟ್ಟಿ ಬರುವುದಕ್ಕೆ ಸಜ್ಜಾಗುತ್ತಿದ್ದಾರೆ. ಇದೇನು ಕಾಗಕ್ಕ ಗುಬ್ಬಕ್ಕನ ಕಥೆ ಹೇಳುತ್ತಿದ್ದಾರೆ ಎಂದು ಆಶ್ಚರ್ಯವಾಗಬಹುದು. ಆದರೂ ಇದು ನಿಜ. ರಿಷಿ ಕಪೂರ್ ಸದ್ಯದಲ್ಲೇ ಮರುಹುಟ್ಟು ಪಡೆಯಲಿದ್ದಾರೆ. ಹೇಗೆ ಅಂತೀರಾ? ವಿಎಫ್ಎಕ್ಸ್ ಮೂಲಕ.
ಇದನ್ನೂ ಓದಿ: ಸಿನಿಮಾ ಮಂದಿಗೆ ಸಿಹಿ ಸುದ್ದಿ; ಇನ್ಮುಂದೆ ನೀವು ಈ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಬಹುದು
ರಿಷಿ ಕಪೂರ್ ನಿಧನರಾಗುವುದಕ್ಕಿಂತ ಮುನ್ನ ‘ಶರ್ಮಾಜಿ ನಮ್ಕೀನ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಆ ಚಿತ್ರದ ಬಹುತೇಕ ಭಾಗದ ಚಿತ್ರೀಕರಣವಾಗಿತ್ತಂತೆ. ಇನ್ನು ಕೇವಲ ನಾಲ್ಕು ದಿನಗಳ ಶೂಟಿಂಗ್ ಇದೆ ಎನ್ನುವಷ್ಟರಲ್ಲಿ ರಿಷಿ ಕಪೂರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರ ಮರುದಿನವೇ ಬಾರದ ಲೋಕಕ್ಕೆ ಹೊರಟಿದ್ದಾರೆ.
ಈಗಾಗಲೇ ‘ಶರ್ಮಾಜಿ ನಮ್ಕೀನ್’ ಚಿತ್ರದ ಶೇ.90ರಷ್ಟು ಚಿತ್ರೀಕಣ ಮುಗಿದಿದೆ. ಈಗ ಚಿತ್ರವನ್ನು ನಿಲ್ಲಿಸುವ ಹಾಗೂ ಇಲ್ಲ. ಹಾಗಂತ ಬಿಡುಗಡೆ ಮಾಡುವಂತೆಯೂ ಇಲ್ಲ. ಏಕೆಂದರೆ, ಚಿತ್ರ ಅಪೂರ್ಣವಾಗಿರುವುದರಿಂದ, ಅದನ್ನು ಜನರ ಮುಂದಿಡುವ ಹಾಗಿಲ್ಲ. ಅದೇ ಕಾರಣಕ್ಕೆ, ವಿಷ್ಯುಯಲ್ ವಿಎಫ್ಎಕ್ಸ್ ಮೂಲಕ ರಿಷಿ ಕಪೂರ್ ಅವರನ್ನು ಸೃಷ್ಟಿಸುವುದಕ್ಕೆ ಚಿತ್ರತಂಡ ಮುಂದಾಗಿದೆ. ಈಗಾಗಲೇ ಕೆಲವು ಪ್ರತಿಷ್ಠಿತ ವಿಎಫ್ಎಕ್ಸ್ ಕಂಪೆನಿಗಳ ಜತೆಗೆ ಮೀಟಿಂಗ್ ಆಗಿದ್ದು, ರಿಷಿ ಕಪೂರ್ ಅವರನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸುವ ಮಾತಾಗುತ್ತಿದೆಯಂತೆ.
ಇದನ್ನೂ ಓದಿ: ಬಂಗಾರದ ಮನುಷ್ಯನನ್ನು ನೆನೆದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್…
ಈ ಕುರಿತು ಮಾತನಾಡಿರುವ ಚಿತ್ರದ ನಿರ್ಮಾಪಕ ಹನಿ ಟ್ರೆಹಾನ್, ‘ಚಿತ್ರವನ್ನು ನಿಲ್ಲಿಸುವ ಮಾತೇ ಇಲ್ಲ. ಚಿತ್ರವನ್ನು ಖಂಡಿತಾ ಮುಂದುವರೆಸುತ್ತೇವೆ ಮತ್ತು ವಿಎಫ್ಎಕ್ಸ್ ಮೂಲಕ ರಿಷಿ ಕಪೂರ್ ಅವರನ್ನು ಸೃಷ್ಟಿ ಮಾಡುವ ಮಾತಾಗುತ್ತಿದೆ. ಈ ಕೆಲಸ ಮುಗಿದ ಮೇಲೆ, ಚಿತ್ರವನ್ನು ಅಧಿಕೃತವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಿದ್ದೇವೆ. ಇದು ಅವರ ಕೊನೆಯ ಚಿತ್ರವಾಗಲಿದೆ’ ಎಂದು ಹೇಳಿಕೊಂಡಿದ್ದಾಎ.
ಇದಕ್ಕೂ ಮುನ್ನ ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿತ್ತು ಎಂಬುದು ವಿಶೇಷ.
ಫಾರ್ಮ್ಹೌಸ್ನಲ್ಲಿ ಇಬ್ಬರು ಗರ್ಲ್ ಫ್ರೆಂಡ್ಸ್ ಜತೆ ಏನ್ಮಾಡ್ತಿದ್ದಾರೆ ಸಲ್ಮಾನ್?