More

    ರಿಷಭ್-ಊರ್ವಶಿ ದೂರ ದೂರ!

    ಬಾಲಿವುಡ್ ಬೆಡಗಿ, ಕನ್ನಡದ ‘ಮಿಸ್ಟರ್ ಐರಾವತ’ ಚಿತ್ರದ ನಟಿ ಊರ್ವಶಿ ರೌಟೆಲಾಗೆ ಈಗ ಮತ್ತೊಂದು ಹಿನ್ನಡೆ ಆಗಿದೆ. ಹಾಗಂತ ಇದು ಯಾವುದೇ ಸಿನಿಮಾಗೆ ಸಂಬಂಧಿಸಿದಂತೆ ಅಲ್ಲ. ಹೀಗಾಗಿರುವುದು ಅವರ ವೈಯಕ್ತಿಕ ಬದುಕಿನಲ್ಲಿ, ಅದೂ ಪ್ರೀತಿಯ ವಿಚಾರದಲ್ಲಿ. ಅಂದರೆ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದ ಊರ್ವಶಿ ರೌಟೆಲಾ ಹಾಗೂ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಭ್ ಪಂತ್ ಈಗ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದಾರೆ. ಮಾತ್ರವಲ್ಲ, ಇಬ್ಬರೂ ಈಗ ನಡುವೆ ಅಂತರವಿರಲಿ ಎಂದು ಪರಸ್ಪರ ಒಪ್ಪಿಗೆ ಮೇರೆಗೇ ದೂರವಾಗಿದ್ದಾರೆ. ಅಷ್ಟಕ್ಕೂ ಇವರಿಬ್ಬರ ಮಧ್ಯೆ ಮನಸ್ತಾಪ ಮೂಡಲು ಕಾರಣ, ರಿಷಭ್ ಗೆಳತಿ ಇಶಾ ನೇಗಿ.

    ಊರ್ವಶಿ ಹಾಗೂ ರಿಷಭ್ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಷಯ ಕೆಲವು ಸಮಯದಿಂದ ಕ್ರಿಕೆಟ್ ಹಾಗೂ ಸಿನಿಮಾ ಕ್ಷೇತ್ರಗಳೆರಡರಲ್ಲೂ ಹರಿದಾಡುತ್ತಿತ್ತು. ಆದರೆ ಆ ವಿಷಯ ಅಧಿಕೃತವಾಗಿ ಬಹಿರಂಗವಾಗುವ ಮುನ್ನವೇ ಅವರಿಬ್ಬರ ನಡುವಿನ ಸಂಬಂಧ ಹದಗೆಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ.

    ರಿಷಭ್ ಊರ್ವಶಿಯೊಂದಿಗೆ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಅವರನ್ನು ದೂರ ಇರಿಸಿದ್ದಾರೆ. ಮಾತ್ರವಲ್ಲ ವಾಟ್ಸ್​ಆಪ್​ನಿಂದಲೂ ಆಕೆಯ ನಂಬರ್ ಬ್ಲಾಕ್ ಮಾಡಿದ್ದಾರಂತೆ. ಇನ್ನೊಂದೆಡೆ ಊರ್ವಶಿ ಹಾಗೂ ರಿಷಭ್ ಪರಸ್ಪರ ಮಾತನಾಡಿಕೊಂಡೇ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಒಪ್ಪಿಗೆ ಮೇರೆಗೆ ಒಬ್ಬರನ್ನೊಬ್ಬರು ಬ್ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಅಂದಹಾಗೆ ಇದಕ್ಕೆಲ್ಲ ಕಾರಣ, ರಿಷಭ್​ನ ದೀರ್ಘಕಾಲದ ಗೆಳತಿ ಇಶಾ ನೇಗಿ. ಇಶಾ ಜತೆ ಇರುವ ಫೋಟೋವೊಂದನ್ನು ಇನ್​ಸ್ಟಾಗ್ರಾಮ್ಲ್ಲಿ ಹಂಚಿಕೊಂಡಿರುವ ರಿಷಭ್, ‘ನಿನ್ನೊಂದಿಗಿದ್ದಾಗ ನಾನು ನನ್ನನ್ನು ತುಂಬಾ ಇಷ್ಟಪಡುತ್ತೇನೆ..’ ಎಂದು ಬರೆದುಕೊಂಡಿದ್ದರು. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿದ್ದರಿಂದ ಪರಸ್ಪರ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ಅಂದಹಾಗೆ ಊರ್ವಶಿಗೆ ಹೀಗಾಗುತ್ತಿರುವುದು ಇದೇ ಹೊಸದೇನಲ್ಲ. ಈ ಹಿಂದೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರಿನ ಜತೆಗೂ ಊರ್ವಶಿ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ರೂಪದರ್ಶಿ ನತಾಶಾ ಜತೆ ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಊರ್ವಶಿ-ಹಾರ್ದಿಕ್ ದೂರವಾದರು ಎನ್ನಲಾಗಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts