More

    ರಿಷಭ್​ ಪಂತ್ ಸಾವನ್ನೇ ಗೆದ್ದ ದಿನವಿದು! ಒಂದು ವರ್ಷದ ಹಿಂದೆ ಪಂತ್​ ಬಾಳಲ್ಲಿ ನಡೆದ ಪವಾಡವೇನು?

    ನವದೆಹಲಿ: ಟೀಮ್​ ಇಂಡಿಯಾದ ಭರವಸೆ ಆಟಗಾರ ರಿಷಭ್​ ಪಂತ್​ ಅವರಿಗೆ ಜೀವನದಲ್ಲಿ ಎರಡನೇ ಅವಕಾಶ ಸಿಕ್ಕ ದಿನವಿದು. ಸರಿಯಾದ ಒಂದು ವರ್ಷದ ಹಿಂದೆ ಈ ದಿನವೇನಾದರೂ ಸ್ಥಿತಿ ಕೊಂಚ ಗಂಭೀರವಾಗಿದ್ದರೂ ಇಂದು ಪಂತ್​ ನಮ್ಮೆಲ್ಲರ ನೆನಪಾಗಿ ಇರುತ್ತಿದ್ದರು. ಆದರೂ ಇಂದು ನಮ್ಮ ನಡುವೆ ಜೀವಂತವಾಗಿದ್ದಾರೆ ಅಂದರೆ ಅದೃಷ್ಟವೇ ಸರಿ. ಏಕೆಂದರೆ, 2022ರ ಡಿಸೆಂಬರ್​ 30ರಂದು ಸಂಭವಿಸಿದ ಭೀಕರ ಅಪಘಾತದಲ್ಲಿ ಪಂತ್​ ಬದುಕುಳಿದಿದ್ದೆ ಪವಾಡ.

    ಅಂದು ನಡೆದ ಅಪಘಾತದಿಂದ ಚೇತರಿಸಿಕೊಳ್ಳಲು ಪಂತ್​ ಅವರಿಗೆ ಒಂದು ವರ್ಷಗಳೇ ತೆಗೆದುಕೊಂಡಿತು. ಇನ್ನೂ ಕೂಡ ಕ್ರಿಕೆಟ್​ಗೆ ಮರಳಿಲ್ಲ ಎಂಬದೇ ಅಭಿಮಾನಿಗಳಿಗೆ ದೊಡ್ಡ ನಿರಾಸೆ. ಒಂದೇ ಒಂದು ಅಪಘಾತ ಅವರ ವೃತ್ತಿ ಜೀವನದಲ್ಲಿ ಭಾರಿ ಟ್ವಿಸ್ಟ್​ ನೀಡಿದ್ದು ಮಾತ್ರ ಸುಳ್ಳಲ್ಲ. ಇದೀಗ ಪಂತ್​ ಸಂಪೂರ್ಣ ಚೇತರಿಸಿಕೊಂಡಿದ್ದು, ತಮ್ಮ ತಾಯಿಯೊಂದಿಗೆ ಹೊಸ ವರ್ಷ ಆಚರಣೆ ಮಾಡಲು ಎದುರು ನೋಡುತ್ತಿದ್ದಾರೆ. ಅಲ್ಲದೆ, ಮತ್ತೆ ತಮ್ಮ ವೃತ್ತಿ ಜೀವನಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಟೀಮ್​ ಇಂಡಿಯಾಗೂ ಒಬ್ಬ ಎಡಗೈ ಆಟಗಾರನ ಅವಶ್ಯಕತೆಯೂ ಇದೆ.

    2022 ಡಿಸೆಂಬರ್​ 30 ಏನಾಯಿತು?
    ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ರಿಷಬ್ ಪಂತ್​ ಅವರಿಗೆ ಕಾರು ಅಪಘಾತ ದೊಡ್ಡ ಬ್ರೇಕ್​ ಹಾಕಿತು. ದೆಹಲಿಯಿಂದ ಉತ್ತರಾಖಂಡದ ರೂರ್ಕಿಗೆ ತನ್ನ ತಾಯಿಗೆ ಸರ್ಪ್ರೈಸ್​ ಭೇಟಿ ನೀಡಲು ಹೋಗುತ್ತಿದ್ದಾಗ ದೆಹಲಿ-ಡೆಹ್ರಾಡೂನ್​ ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್​ ಡಿಕ್ಕಿಯಾಗಿ ಪಲ್ಟಿ ಹೊಡೆಯಿತು. ಅಲ್ಲದೆ, ಬೆಂಕಿ ಸಹ ಹೊತ್ತಿಕೊಂಡಿತು. ಆದರೆ, ಪಂತ್​ ಅವರು ಕಾರಿನ ಮುಂಭಾಗದ ಗಾಜನ್ನು ಹೊಡೆದು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡರು. ಅಪಘಾತದಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಯಿತು. ಟ್ರಕ್ ಚಾಲಕ ಸುಶೀಲ್ ಅಪಘಾತವನ್ನು ನೋಡಿ ಪಂತ್ ಅವರಿಗೆ ಸಹಾಯ ಮಾಡಿದರು. ಈ ಅಪಘಾತದಲ್ಲಿ ಪಂತ್ ಅವರ ತಲೆ, ಕಾಲು ಮತ್ತು ಬೆನ್ನಿಗೆ ಗಾಯಗಳಾದವು. ತಕ್ಷಣ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಯಿತು. ಇದೀಗ ಚೇತರಿಸಿಕೊಂಡಿದ್ದಾರೆ.

    Rishab Pant (1)

    ಡೆಹ್ರಾಡೂನ್​ ಆಸ್ಪತ್ರೆ ಬಳಿಕ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಪಂತ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಪಂತ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಬಂದು ಫಿಟ್ ಆಗುವಲ್ಲಿ ನಿರತರಾದರು. ಅಪಘಾತದ ಒಂದು ವರ್ಷದ ಸಂದರ್ಭದಲ್ಲಿ ರಿಷಬ್ ಪಂತ್ ತಮ್ಮ ಗಾಯಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಗಾಯದ ಲಘು ಗುರುತುಗಳು ಗೋಚರಿಸುತ್ತವೆ.

    ರಸ್ತೆ ಅಪಘಾತದ ನಂತರ ಸೈಡ್ ಲೈನ್ ಆಗಿದ್ದ ಪಂತ್, ಮತ್ತೆ ಮೈದಾನಕ್ಕೆ ಇಳಿಯಲು ಶ್ರಮಿಸುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಲೆಗ್ ವರ್ಕೌಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಪಂತ್ ಫುಲ್ ಫಿಟ್​ನೆಸ್ ಪಡೆದಿರುವಂತಿದೆ. ಐಪಿಎಲ್ 2024ರ ಋತುವಿನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಸಾಧ್ಯತೆಗಳು ತುಂಬಾ ಹೆಚ್ಚಿವೆ. ಇದೇ ವೇಳೆ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕೆ ಇಳಿಯಲಿದೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

    VIDEO| ಕಾರು ಅಪಘಾತದ ಬಳಿಕ ಮೊದಲ ಬಾರಿ ಬ್ಯಾಟ್​ ಹಿಡಿದ ರಿಷಭ್​ ಪಂತ್​, ವಿಡಿಯೋ ವೈರಲ್​

    ರಿಷಭ್​ ಪಂತ್​ ಮದ್ಯಪಾನ ಮಾಡಿದ್ದರೆ 200 ಕಿಮೀ ದೂರದ ತನಕ ಹೇಗೆ ಹೋದ್ರು ಎಂದು ಪ್ರಶ್ನಿಸಿದ ಪೊಲೀಸರು..!

    ಉತ್ತರಾಖಂಡ ಸಿಎಂ ಪುಷ್ಕರ್​ ಬಳಿ ಕಾರು ಅಪಘಾತಕ್ಕೆ ಅಸಲಿ ಕಾರಣ ತಿಳಿಸಿದ ಕ್ರಿಕೆಟಿಗ ರಿಷಭ್​ ಪಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts