More

    ‘ಕಾಂತಾರ’ ಭರ್ಜರಿ ಯಶಸ್ಸು: ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಾರಾ ರಿಷಬ್​?

    ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಅದರ ಕ್ರೇಝ್ ಕಡಿಮೆ ಆಗಿಲ್ಲ. ಬದಲಿಗೆ ದಿನೇದಿನೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ಜತೆಗೆ ಹಲವು ಪ್ರಥಮಗಳಿಗೂ ನಾಂದಿ ಹಾಡಿದೆ.

    ಈ ಮಧ್ಯೆ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಕೆಲವು ವದಂತಿಗಳು ಹರಿದಾಡುತ್ತಿವೆ. ಪ್ರಧಾನಿ ಮೋದಿ ಕಾಂತಾರ ಸಿನಿಮಾ ನೋಡಲಿದ್ದಾರೆ ಹಾಗೂ ರಿಷಬ್​ ಬೇರೆ ಭಾಷೆಗಳ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬೆರಡು ಸುದ್ದಿಗಳು ಹರಿದಾಡುತ್ತಿದ್ದು, ಅಚ್ಚರಿ ಮೂಡಿಸಿದ್ದವು. ಆ ಪೈಕಿ ಪ್ರಧಾನಿ ಮೋದಿ ಸಿನಿಮಾ ನೋಡಲಿರುವ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟಗೊಂಡಿಲ್ಲ.

    ಇನ್ನು ರಿಷಬ್​ ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ವಿಚಾರವಾಗಿ ಖುದ್ದು ರಿಷಬ್ ಶೆಟ್ಟಿಯೇ ಸ್ಪಷ್ಟನೆ ನೀಡಿದ್ದಾರೆ. ಆಂಗ್ಲ ಮಾಧ್ಯಮವೊಂದರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ರಿಷಬ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಲ್ಲು ಅರವಿಂದ್ ಅವರು ಕಾಂತಾರ ತೆಲುಗು ಡಬ್ ವರ್ಷನ್ ವಿತರಣೆ ಹಕ್ಕು ಪಡೆದಿದ್ದರು. ಈ ಸಂದರ್ಭದ ಭೇಟಿಯಲ್ಲಿ ರಿಷಬ್ ಜತೆ ಮಾತನಾಡುವಾಗ ತಮ್ಮ ನಿರ್ಮಾಣದ ಸಂಸ್ಥೆಯಲ್ಲೂ ತೊಡಗಿಸಿಕೊಳ್ಳಿ ಎಂದು ಹೇಳಿದ್ದರು. ಆಗ ಭವಿಷ್ಯದಲ್ಲಿ ನೋಡೋಣ ಎಂದು ಹೇಳಿದ್ದೆ ಎಂದ ರಿಷಬ್, ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದರು.

    ರಿಷಬ್ ಆ ಸಂದರ್ಭದಲ್ಲಿ ಮಾತನಾಡಿದ್ದನ್ನೇ ಕೆಲವರು ರಿಷಬ್ ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದೇ ಭಾವಿಸಿದ್ದರಿಂದ ಅದು ಎಲ್ಲೆಡೆ ಹರಿದಾಡಲಾರಂಭಿಸಿತ್ತು. ಹೀಗಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸಂಬಂಧ ನಾನು ಇಂದು ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದರು.

    ಅಲ್ಲ ಅರವಿಂದ್ ಅವರು ನಮ್ಮ ಪ್ರೊಡಕ್ಷನ್​ಗೂ ಕೆಲಸ ಮಾಡಿ ಎಂದು ಅಂದು ಹೇಳಿದ್ದಾಗ ಭವಿಷ್ಯದಲ್ಲಿ ನೋಡ್ತೇನೆ ಅಂತ ಹೇಳಿದ್ದೆ. ನಾನು ಭವಿಷ್ಯದ ಬಗ್ಗೆ ಯೋಚಿಸಲ್ಲ. ಆದರೆ ಇಂದು ಒಂದು ಸ್ಪಷ್ಟನೆಯನ್ನು ನೀಡುತ್ತೇನೆ. ನಾನು ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಏನಿದ್ದರೂ ಕನ್ನಡದಲ್ಲೇ ಸಿನಿಮಾ ಮಾಡುತ್ತೇನೆ. ಕನ್ನಡ ಚಿತ್ರರಂಗ ನನ್ನ ಮನೆ, ಕನ್ನಡ ಸಿನಿಮಾ ಮಾತ್ರ ಮಾಡುತ್ತೇನೆ. ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುವುದು ಕನಸಲ್ಲೂ ಇಲ್ಲ. ಕನ್ನಡದ ಪ್ರೇಕ್ಷಕರು ತುಂಬಾ ಬೆಂಬಲ ನೀಡಿದ್ದಾರೆ, ಅದರಿಂದಾಗಿಯೇ ಈ ಯಶಸ್ಸು ಸಿಕ್ಕಿದೆ, ಹೀಗಾಗಿ ಕನ್ನಡ ಚಿತ್ರ ಮಾತ್ರ ಮಾಡುವೆ. ಒಂದು ವೇಳೆ ಆ ಕನ್ನಡ ಸಿನಿಮಾಗಳು ಭರ್ಜರಿ ಯಶಸ್ಸು ಕಂಡು ಬೇರೆ ಕಡೆಯಿಂದ ಬೇಡಿಕೆ ಬಂದರೆ ಡಬ್ ಮಾಡಿ ಕೊಡುತ್ತೇನೆ ಎನ್ನುವ ಮೂಲಕ ರಿಷಬ್ ಪರಭಾಷಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

    ‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

    ‘ಅಪ್ಪು ಸರ್ ಕ್ಷಮೆ ಇರಲಿ’ ಎಂದ ರಿಷಬ್​ ಶೆಟ್ಟಿ; ದೂರದೂರಿನಿಂದಲೇ ಹೀಗೆನ್ನಲು ಕಾರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts