More

    ‘ಪ್ರತಿಯೊಂದು ಪಂದ್ಯವೂ​ ಮುಖ್ಯ’; 100ನೇ ಐಪಿಎಲ್​ ಪಂದ್ಯಕ್ಕೆ ರಿಕಿ ಪಾಂಟಿಂಗ್‌ನಿಂದ ಒಲಿದು ಬಂತು ರಿಷಬ್​ಗೆ ವಿಶೇಷ ಜರ್ಸಿ!

    ಜೈಪುರ: ಇಂದು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024ರ ಪಂದ್ಯಾವಳಿಯಲ್ಲಿ ಡೆಲ್ಲಿ ಫ್ರಾಂಚೈಸಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್​ ಆದ ರಿಷಭ್​ ಪಂತ್ ಕೂಡ ಒಂದು ವಿಶಿಷ್ಟ ಮೈಲಿಗಲ್ಲು ಸಾಧಿಸಿದ್ದಾರೆ. ಯುವ ಕೀಪರ್-ಬ್ಯಾಟರ್ ಆಗಿ ಈ ಸೀಸನ್​ನಲ್ಲಿ ಕಣಕ್ಕಿಳಿದಿರುವ ಪಂತ್​, ಇದೀಗ ಐಪಿಎಲ್​ನಲ್ಲಿ 100ನೇ ಪಂದ್ಯವನ್ನು ಆಡುತ್ತಿದ್ದಾರೆ.

    ಇದನ್ನೂ ಓದಿ: ನೈಸರ್ಗಿಕ ಸಂಪನ್ಮೂಲ ನೀರನ್ನು ಮಿತವಾಗಿ ಬಳಸಿ; ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪುಟ್ಟರಾಜು ಸಲಹೆ

    2016ರಲ್ಲಿ ಐಪಿಎಲ್ ಆವೃತ್ತಿಗೆ ಪದಾರ್ಪಣೆ ಮಾಡಿದ ರಿಷಭ್ ಪಂತ್​, 2021ರ ಸೀಸನ್​ನ ದ್ವಿತೀಯಾರ್ಧದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡು ಇಂದಿಗೂ ತಂಡವನ್ನು ಮುನ್ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಜನಿಸಿದ ಪಂತ್​ ಕಳೆದ ವರ್ಷ ಭೀಕರ ಅಪಘಾತದಿಂದ ಕಾಲಿಗೆ, ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದರು. ದೀರ್ಘಾವಧಿಯ ವಿರಾಮದ ಬಳಿಕ ಈಗ ಈ ಬಾರಿಯ ಐಪಿಎಲ್​ಗೆ ಮರಳಿದ್ದಾರೆ.

    ಇಂದು 100ನೇ ಐಪಿಎಲ್​ ಪಂದ್ಯವನ್ನು ಆಡುತ್ತಿರುವ ಡೆಲ್ಲಿ ಕ್ಯಾಪ್ಟನ್ ರಿಷಭ್ ಪಂತ್​ಗೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ರಿಕ್ಕಿ ಪಾಟಿಂಗ್​ ವಿಶೇಷ ಜರ್ಸಿಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಪಂತ್, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಅಶ್ಲೀಲ ರೀಲ್ಸ್​ ಮಾಡಿದ್ದ ಯುವತಿಯರು ಅರೆಸ್ಟ್! 33,000 ರೂ. ದಂಡ ಕಟ್ಟಲು ಹಣವಿಲ್ಲ ಎಂದು ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts