More

    ರಿಷಭ್ ಪಂತ್‌ಗೆ ವೈರಸ್ ಹರಡಿದ್ದು ಯಾರಿಂದ ಗೊತ್ತೇ..?

    ಲಂಡನ್: ರೂಪಾಂತರಿ ಡೆಲ್ಟಾ ಸೋಂಕಿತರಾಗಿರುವ ಭಾರತ ತಂಡದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ದಂತವೈದ್ಯರ ಮೂಲಕ ಸೋಂಕು ಹರಡಿರಬಹುದು ಎನ್ನಲಾಗಿದೆ. ಪಂತ್‌ಗೆ ಜುಲೈ 8ರಂದು ಸೋಂಕು ಪತ್ತೆಯಾಗಿತ್ತು. ಇದಕ್ಕೂ ಮುನ್ನ ಜುಲೈ 5 ಮತ್ತು 6ರಂದು ಪಂತ್ ಲಂಡನ್‌ನಲ್ಲಿ ದಂತವೈದ್ಯರ ಬಳಿ ತೆರಳಿದ್ದರು. ಬಳಿಕ ಭಾರತ ತಂಡದ ಇತರ ಸದಸ್ಯರ ಜತೆಗೆ ಜುಲೈ 7ರಂದು ಕೋವಿಡ್ ಲಸಿಕೆಯ 2ನೇ ಡೋಸ್ ಹಾಕಿಸಿಕೊಂಡಿದ್ದರು. ಪಂತ್ ಜೂನ್ 29ರಂದು ವೆಂಬ್ಲೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ಜರ್ಮನಿ ನಡುವಿನ ಯುರೋ ಕಪ್ ಫುಟ್‌ಬಾಲ್ ಪಂದ್ಯ ವೀಕ್ಷಿಸಿದ್ದರು.

    ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡಲು ಸಜ್ಜಾದ ದಿನೇಶ್ ಕಾರ್ತಿಕ್ ?

    ಆದರೆ, ಮರುದಿನವೇ ರಿಷಭ್‌ಗೆ ವೈರಸ್ ಕಾಣಿಸಿಕೊಂಡಿದೆ. ರಿಷಭ್ ಅದಲ್ಲದೆ, ಕೆಲ ಸ್ನೇಹಿತರೊಂದಿಗೆ ಎಲ್ಲೆಡೆ ಓಡಾಡಿದ್ದರು. ವಿಶ್ರಾಂತಿ ನೀಡಿದ್ದ ವೇಳೆ ರಿಷಭ್ ಪಂತ್ ತಂಡದ ಹೋಟೆಲ್‌ನಲ್ಲಿ ಉಳಿದುಕೊಂಡಿರಲಿಲ್ಲ ಎನ್ನಲಾಗಿದೆ. ರಿಷಭ್ ಪಂತ್ ಜತೆಗೆ ಥ್ರೋಡೌನ್ ಸ್ಪೆಷಲಿಸ್ಟ್ ದಯಾನಂದ್ ಗರಾನಿಗೂ ವೈರಸ್ ಕಾಣಿಸಿಕೊಂಡಿದೆ. ಬಿಸಿಸಿಐ ವೈದ್ಯಕೀಯ ತಂಡ ರಿಷಭ್ ಪಂತ್ ಅವರ ಆರೋಗ್ಯದ ಬಗ್ಗೆ ನಿಗಾವಹಿಸಿದ್ದು, ಸುಧಾರಣೆ ಕಾಣುತ್ತಿದ್ದಾರೆ. ಎರಡು ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕ ಡುರ್‌ಹ್ಯಾಂನಲ್ಲಿರುವ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.

    ಇದನ್ನೂ ಓದಿ: ಒಲಿಂಪಿಕ್ಸ್ ಸಿದ್ಧತೆ ನಡುವೆಯೂ ಸಾನಿಯಾ ಮಿರ್ಜಾ ಭರ್ಜರಿ ಸ್ಟೆಪ್ಸ್

    ಗರಾನಿ ಸಂಪರ್ಕದಲ್ಲಿದ್ದ ಮತ್ತೋರ್ವ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಮೀಸಲು ಆಟಗಾರ ಅಭಿಮನ್ಯು ಈಶ್ವರನ್ ಅವರನ್ನು ಐಸೋಲೇಷನ್‌ನಲ್ಲಿ ಇರಲು ಸೂಚಿಸಲಾಗಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಬಳಿಕ ತಂಡಕ್ಕೆ ಮೂರು ವಾರಗಳ ಕಾಲ ವಿಶ್ರಾಂತಿ ನೀಡಲಾಗಿತ್ತು.

    ಒಂದೇ ಗುಂಪಿನಲ್ಲಿವೆ ಭಾರತ, ಪಾಕಿಸ್ತಾನ; ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿ ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts