More

    ದೆಹಲಿ ತಲಾದಾಯ ರೂ. 4.44 ಲಕ್ಷಕ್ಕೆ ಏರಿಕೆ: ಜನರ, ಸರ್ಕಾರದ ಪರಿಶ್ರಮ ಶ್ಲಾಘಿಸಿದ ಕೇಜ್ರಿವಾಲ್​

    ನವದೆಹಲಿ: ದೆಹಲಿ ಜನರ ತಲಾ ಆದಾಯದ ಹೆಚ್ಚಳಕ್ಕೆ ಕಾರಣವಾದ ಎರಡು ಕೋಟಿ ದೆಹಲಿಯ ಜನರು, ನಗರ ಸರ್ಕಾರದ ಕಠಿಣ ಪರಿಶ್ರಮ ಮತ್ತು ಜಂಟಿ ಪ್ರಯತ್ನಗಳನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಶ್ಲಾಘಿಸಿದ್ದಾರೆ.

    ಪ್ರಸಕ್ತ ಹಣಕಾಸು ವರ್ಷದಲ್ಲಿ ದೆಹಲಿಯ ತಲಾ ಆದಾಯವು ರೂ 3,89,529 ರಿಂದ ರೂ 4,44,768 ಕ್ಕೆ ಏರಿಕೆಯಾಗಿದೆ, ಇದು ರಾಷ್ಟ್ರೀಯ ಸರಾಸರಿಗಿಂತ 158 ರಷ್ಟು ಹೆಚ್ಚಾಗಿದೆ ಎಂದು ಕೇಜ್ರಿವಾಲ್ ಸರ್ಕಾರವು ಶನಿವಾರ ಬಿಡುಗಡೆ ಮಾಡಿದ ತನ್ನ ಅಂಕಿಅಂಶಗಳ ಕೈಪಿಡಿ-2023ರಲ್ಲಿ ಹೇಳಿದೆ.

    ದೆಹಲಿ ಸರ್ಕಾರದ ಆರ್ಥಿಕ ಮತ್ತು ಅಂಕಿಅಂಶ ವಿಭಾಗವು ರಾಷ್ಟ್ರ ರಾಜಧಾನಿಯ ಸಾಮಾಜಿಕ-ಆರ್ಥಿಕ ನಿಯತಾಂಕಗಳ ದತ್ತಾಂಶಗಳನ್ನು ಒಳಗೊಂಡಿರುವ ಕೈಪಿಡಿಯನ್ನು ಬಿಡುಗಡೆ ಮಾಡಿದೆ.

    ಸರಕಾರ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. “ಯಾವುದೇ ವರ್ಷದಲ್ಲಿ ಯಾವುದೇ ರಾಜ್ಯದಲ್ಲಿ ತಲಾ ಆದಾಯದಲ್ಲಿ ಇದು ಭಾರಿ ಹೆಚ್ಚಳವಾಗಿದೆ. 2 ಕೋಟಿ ದೆಹಲಿಯ ಜನರು ಮತ್ತು ದೆಹಲಿ ಸರ್ಕಾರವು ಹಗಲೂರಾತ್ರಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಇದನ್ನು ಸಾಧಿಸಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಅನೇಕ ನವೀನ ಮತ್ತು ಮುನ್ನೋಟದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ನಾನು ಮಲಗುವ ಮೊದಲು ಸಾಕಷ್ಟು ಕ್ರಮಿಸಬೇಕಿದೆ! ” ಎಂದು ಅವರು ಎಕ್ಸ್​ ಪೋಸ್ಟ್‌ನಲ್ಲಿ ಹೇಳಿದ್ದಾರೆ.

    ವಿವಿಧ ಅಡೆತಡೆಗಳ ನಡುವೆಯೂ, ಕೇಜ್ರಿವಾಲ್ ಸರ್ಕಾರವು 2023 ರಲ್ಲಿ ಸಾರ್ವಜನಿಕ ಸೇವಾ ವಲಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಯೋಜನಾ ಇಲಾಖೆ ಸಚಿವ ಅತಿಶಿ ಅಂಕಿಅಂಶಗಳ ಕೈಪಿಡಿ ಬಿಡುಗಡೆಯಲ್ಲಿ ಹೇಳಿದ್ದಾರೆ.

    ದೆಹಲಿಯ ತಲಾ ಆದಾಯವು 3,89,529 ರಿಂದ 4,44,768 ಕ್ಕೆ ಏರಿದ್ದು, ರಾಜಧಾನಿಯ ಬಸ್‌ಗಳಲ್ಲಿ 41 ಲಕ್ಷ ಟ್ರಿಪ್‌ ಸಂಚಾರ ಕೈಗೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಶನಿವಾರ ತಿಳಿಸಿದೆ.

    140 ಭಾಷೆಗಳಲ್ಲಿ ಹಾಡಿ ಗಿನ್ನೆಸ್ ದಾಖಲೆ ಬರೆದ ಕೇರಳದ ಮಹಿಳೆ: ಈ ಸಂಗೀತಗಾರ್ತಿ ಯಾರು ಗೊತ್ತೆ?

    ವೈಯಕ್ತಿಕ ಹೇಳಿಕೆ, ಸರ್ಕಾರದ್ದಲ್ಲ: ಮೋದಿ ವಿರುದ್ಧ ಸಚಿವೆ ಶಿಯುನಾ ಅವಹೇಳನಕಾರಿ ಅಭಿಪ್ರಾಯಕ್ಕೆ ಮಾಲ್ಡೀವ್ಸ್​ ಸ್ಪಷ್ಟನೆ

    ಮದುವೆ ವರನ ಮೆರವಣಿಗೆ ಹೀಗೂ ಇರಲು ಸಾಧ್ಯವೇ?: ‘ಸೈಲೆಂಟ್ ಬಾರಾತ್’ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts