More

    ಮದುವೆ ವರನ ಮೆರವಣಿಗೆ ಹೀಗೂ ಇರಲು ಸಾಧ್ಯವೇ?: ‘ಸೈಲೆಂಟ್ ಬಾರಾತ್’ ವಿಡಿಯೋ ವೈರಲ್​

    ನವದೆಹಲಿ: ಭಾರತೀಯ ವಿವಾಹಗಳಲ್ಲಿ ಹಾಡು, ನೃತ್ಯ, ಮೆರವಣಿಗೆ ಇದ್ದೇ ಇರುತ್ತದೆ. ವಿವಾಹ ಸಮಾರಂಭ, ಮದುವೆಯ ಪೂರ್ವ ಸಮಾರಂಭ ಮುಂತಾದವುಗಳಲ್ಲಿ ಸೌಂಡ್​ ಸಿಸ್ಟಂನಲ್ಲಿ ಜೋರಾಗಿ ಹಾಡು ಹಾಕಿಕೊಂಡು ನೃತ್ಯ ಮಾಡುವುದಂತೂ ಸಾಮಾನ್ಯ.

    ಆದರೆ, ಮದುವೆ ವರನ ಮೆರವಣಿಗೆ (ಬಾರಾತ್‌) ವೀಡಿಯೊವೊಂದು ಭಿನ್ನ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜನರು ನೃತ್ಯ ಮಾಡುತ್ತಿದ್ದರೂ ಹಿನ್ನೆಲೆಯಲ್ಲಿ ಯಾವುದೇ ಹಾಡಿನ ಸದ್ದು, ಗದ್ದಲವೇ ಕೇಳಿಸುವುದಿಲ್ಲ!

    ಈ ವೀಡಿಯೊವನ್ನು @sheffoodie ಎಂಬ ಇನ್​ಸ್ಟ್ರಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. “ನಾನು ಏ ದಿಲ್ ಹೈ ಮುಷ್ಕಿಲ್ ಡಿಜೆ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನೀವು ಎಂದಾದರೂ ಇಂತಹ ಪಾರ್ಟಿಯ ಭಾಗವಾಗಲು ಬಯಸುವಿರಾ?” ಎಂದು ಮೂಕ ಡಿಸ್ಕೋವನ್ನು ಉಲ್ಲೇಖಿಸಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

    “ಹೊಸ ಯುಗದ ಮೌನ ಬಾರಾತ್” (ನ್ಯೂ ಎಜ್ ಸೈಲೆಂಟ್​ ಬಾರಾತ್​” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ಈ ವಿಡಿಯೋದಲ್ಲಿ ಜನರು ಹೆಡ್‌ಫೋನ್‌ಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡುವುದು ಮತ್ತು ಆನಂದಿಸುತ್ತಿರುವುದು ಕಂಡುಬರುತ್ತದೆ.

    ಕೆಲವು ದಿನಗಳ ಹಿಂದೆ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 1.9 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು 736,000 ಕ್ಕೂ ಹೆಚ್ಚು ಲೈಕ್​ಗಳು ಇದಕ್ಕೆ ವ್ಯಕ್ತವಾಗಿವೆ.

    “ಡ್ಯೂಡ್… ಇದು ಒಳ್ಳೆಯ ಐಡಿಯಾ… ಬೇರೆಯವರು ಕೂಡ ಡಿಸ್ಟರ್ಬ್ ಮಾಡುವುದಿಲ್ಲ” ಎಂದು ಒಬ್ಬ ಇಂಟರ್​ನೆಟ್​ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. “ತುಂಬಾ ಒಳ್ಳೆಯ ಉಪಕ್ರಮ,” ಇನ್ನೊಬ್ಬರು ಹೇಳಿದ್ದಾರೆ.

    “ವೀಕ್ಷಕರಿಗೆ ಅದು ತುಂಬಾ ವಿಚಿತ್ರವಾಗಿದೆ. ನಾನು ಅದನ್ನು ‘ಏ ಪಾಗಲ್ ಹೇ ಸಬ್ ನಾಚ್ ರಹೇ ಬಿನಾ ಗಾನೆ ಕೆ’ [ಅವರು ಹುಚ್ಚರೇ? ಅವರು ಸಂಗೀತವಿಲ್ಲದೆ ನೃತ್ಯ ಮಾಡುತ್ತಿದ್ದಾರೆ] ಎಂದು ನಾನು ದೃಶ್ಯೀಕರಿಸುತ್ತೇನೆ” ಎಂದು ಮತ್ತೊಬ್ಬರು ಹೇಳಿದ್ದರೆ, ಇನ್ನೊಬ್ಬರು, “ಈ ರೀತಿಯ ಬಾರಾತ್‌ನಲ್ಲಿ ಆಸಕ್ತಿ ಇರುವುದಿಲ್ಲ” ಎಂದಿದ್ದಾರೆ.

    “ನನ್ನಂತಹ ಕಾಡು ಮನುಷ್ಯರು ಹೆಡ್‌ಫೋನ್‌ಗಳನ್ನು ಒಡೆಯುತ್ತಾರೆ” ಎಂದು ಇನ್ನೊಬ್ಬರು ಹೇಳಿದ್ದಾರೆ.

    ಸಹಪಾಠಿಗೆ ‘ನಿಶ್ಚಿತಾರ್ಥ’ ಉಡುಗೊರೆ ನೀಡಿದ ನರ್ಸರಿ ಬಾಲಕ: ಈತ ಕೊಟ್ಟ ಚಿನ್ನದ ಮೊತ್ತ ಹೌಹಾರಿಸುವಂತಿದೆ…

    ದೇಶದಲ್ಲಿ 756 ಹೊಸ ಕೋವಿಡ್​ ಪ್ರಕರಣ, ಐವರ ಸಾವು

    ಮೋದಿ ಲಕ್ಷದ್ವೀಪ ಭೇಟಿ ನಂತರ ಮಾಲ್ಡೀವ್ಸ್ ಸಚಿವ ಸೃಷ್ಟಿಸಿದ ವಿವಾದ: ಮಾಲ್ಡೀವ್ಸ್​ಗೆ ಪ್ರವಾಸ ರದ್ದುಗೊಳಿಸುತ್ತಿರುವ ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts