More

    5 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು : ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದ ಕೇಂದ್ರ ಸರ್ಕಾರ

    ನವದೆಹಲಿ: ದೇಶದ ಐದು ರಾಜ್ಯಗಳು – ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸಗಢ ಮತ್ತು ಮಧ್ಯಪ್ರದೇಶ – ಮತ್ತೆ ನಿತ್ಯ ವರದಿಯಾಗುತ್ತಿರುವ ಹೊಸ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿವೆ. ನವೆಂಬರ್-ಡಿಸೆಂಬರ್​ನಲ್ಲಿ ಆರಂಭವಾಗಿದ್ದ ಇಳಿಕೆಯ ನಂತರ ಇದೀಗ ಕಳೆದ ಒಂದು ವಾರದಲ್ಲಿ ಈ ರಾಜ್ಯಗಳಲ್ಲಿ ಡೈಲಿ ಕೇಸ್​ಗಳ ಸಂಖ್ಯೆ ಮೇಲ್ಮುಖವಾಗಿದೆ. ಆದ್ದರಿಂದ ಕರೊನಾ ಮತ್ತೆ ಹರಡದಂತೆ ತಡೆಯಲು, ಕರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

    ಮತ್ತೊಂದೆಡೆ, ಕರೊನಾ ಲಸಿಕಾ ಅಭಿಯಾನವನ್ನು ತ್ವರಿತಗತಿಯಲ್ಲಿ ನಡೆಸುವ ಪ್ರಯತ್ನ ಮುಂದುವರಿದಿದೆ. 1.07 ಕೋಟಿಗಿಂತ ಹೆಚ್ಚು ಲಸಿಕೆ ಡೋಸ್​ಗಳನ್ನು ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗಿದೆ ಎಂದು ಸರ್ಕಾರ ಪತ್ರಿಕಾ ಹೇಳಿಕೆ ನೀಡಿದೆ.

    ಇದನ್ನೂ ಓದಿ: ಕರೊನಾ ನಿವಾರಣೆಗೆ ಪಣತೊಟ್ಟ ಸರ್ಕಾರ… ಲಸಿಕೆ ನಿರಾಕರಿಸಿದವರಿಗೆ ಶಿಕ್ಷೆ !

    ಕಳೆದ ವಾರದಲ್ಲಿ, ಮಹಾರಾಷ್ಟ್ರ ಪ್ರತಿದಿನದ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ತೋರಿದ್ದು, ದೇಶದಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಹೊಂದಿದೆ. ಕಳೆದ 24 ಗಂಟೆಗಳಲ್ಲಿ 6,112 ಹೊಸ ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿವೆ. ಕರೊನಾ ಪ್ರಕರಣ ಹೆಚ್ಚಿರುವ ಎರಡನೇ ರಾಜ್ಯವಾಗಿರುವ ಕೇರಳದಲ್ಲಿ ಫೆಬ್ರವರಿ 18 ರಂದು 4,584 ಹೊಸ ಕೇಸುಗಳು ವರದಿಯಾಗಿದ್ದವು.

    ಅದೇ ರೀತಿ ಪಂಜಾಬ್​ನಲ್ಲೂ ಕಳೆದ ಏಳು ದಿನಗಳಲ್ಲಿ ನಿತ್ಯದ ಹೊಸ ಪ್ರಕರಣಗಳಲ್ಲಿ ಏರಿಕೆ ಉಂಟಾಗಿದ್ದು, ಕಳೆದ 24 ಗಂಟೆಗಳಲ್ಲಿ 383 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಫೆಬ್ರವರಿ 13 ರಿಂದ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಕರೊನ ಪ್ರಕರಣಗಳನ್ನು ವರದಿ ಮಾಡುತ್ತಾ ಬಂದಿವೆ. ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 297 ಮತ್ತು ಛತ್ತೀಸಗಢದಲ್ಲಿ 259 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರದ ಹೇಳಿಕೆ ತಿಳಿಸಿದೆ.

    ಇದನ್ನೂ ಓದಿ: ಹಿಮಯಮನಿಗೆ ಬಲಿಯಾದ ಕುಟುಂಬಕ್ಕೆ ದಾರಿ ದೀಪವಾದ ಸೋನು ಸೂದ್​! 4 ಹೆಣ್ಣು ಮಕ್ಕಳಿಗೆ ಗಾಡ್​ ಫಾದರ್​

    ಮಹಾರಾಷ್ಟ್ರದಲ್ಲಿ ಉಂಟಾಗಿರುವ ಏರಿಕೆಗೆ, ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ತೋರುತ್ತಿರುವ ಅಸಡ್ಡೆಯೇ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಮುಂಬೈ ಹಾಗೂ ಅಮರಾವತಿ ಮತ್ತು ಯವತ್​ಮಲ್ ಜಿಲ್ಲೆಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಓಡಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ; ಮುಂಬೈನ ಸಬ್​ಅರ್ಬನ್ ರೈಲುಗಳಲ್ಲಿ ಮಾಸ್ಕ್ ಇಲ್ಲದೆ ಪ್ರಯಾಣ ಮಾಡುವವರನ್ನು ಹಿಡಿಯಲು ಹೊಸದಾಗಿ 300 ಮಾರ್ಷಲ್​ಗಳನ್ನು ನೇಮಿಸಲಾಗಿದೆ ಎಂದು ಮುಂಬೈ ಮಹಾನಗರಪಾಲಿಕೆ ತಿಳಿಸಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಲಿಂಗ, ವಯಸ್ಸು, ವೃತ್ತಿ ಕೇಳಿಕೊಂಡು ಅಪರಾಧ ನಿರ್ಧಾರ ಆಗುತ್ತಾ…?” – ಅಮಿತ್ ಷಾ ಪ್ರಶ್ನೆ

    ಆತಂಕವಾದ, ಹಿಂಸಾಚಾರ ಹರಡುತ್ತಿರುವವರಲ್ಲಿ ಸುಶಿಕ್ಷಿತರೂ ಇದ್ದಾರೆ : ಮೋದಿ ಕಳವಳ

    VIDEO- ಪತಿಯ ಮೇಲೆ ಈ ಟೈಂನಲ್ಲಿ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್‌ ಆದ್ಲು!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts