More

    ರಿಂಕು ಶರ್ಮಾ ಕೊಲೆಗಾರರಿಗೆ ಮರಣದಂಡನೆ ವಿಧಿಸಿ

    ಬೆಳಗಾವಿ: ದೆಹಲಿಯಲ್ಲಿ ಬಜರಂಗ ದಳ ಕಾರ್ಯಕರ್ತನನ್ನು ಹತ್ಯೆ ಮಾಡಿರುವವರ ಬಂಧನಕ್ಕೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ತೊಡಗಿಕೊಂಡಿರುವ ಬಜರಂಗ ದಳದ ಕಾರ್ಯಕರ್ತ ರಿಂಕು ಶರ್ಮಾ ಮನೆ ಮೇಲೆ ದಾಳಿ ನಡೆಸಿ ಕುಟುಂಬದ ಸದಸ್ಯರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಪರಿಣಾಮ ಫೆ.10ರಂದು ರಿಂಕು ಶರ್ಮಾನನ್ನು ಕೊಲೆ ಮಾಡಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ಕೊಲೆಗಾರರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಫಾಸ್ಟ್ ಟ್ರಾೃಕ್ ಕೋರ್ಟ್‌ನಿಂದ ತೀವ್ರ ವಿಚಾರಣೆ ನಡೆಸಬೇಕು. ಕಾರ್ಯಕರ್ತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಿ ನೆರವಾಗಬೇಕು ಎಂದು ಒತ್ತಾಯಿಸಿದರು.

    ವಿಶ್ವ ಹಿಂದು ಪರಿಷತ್, ಬಜರಂಗ ದಳದ ಮುಖಂಡ ಕೃಷ್ಣ ಭಟ್, ಅಚ್ಯುತ್ ಕುಲಕರ್ಣಿ, ವಿಜಯ ಎಸ್., ಅರ್ಜುನಸಿಂಗ್ ರಜಪೂತ್, ಆದಿನಾಥ ಗಾವಡೆ, ಗಜಾನನ ಬಿರಾದಾರ, ಪರಶುರಾಮ ಚೌಗುಲೆ, ಸಂದೀಪ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts